ಜಾನಪದ ಕಲೆಗಳು ಮನುಷ್ಯನ ದೈನಂದಿನ ಜೀವನ: ರಾಜಶೇಖರ ಜಮದಂಡಿ

0
28
loading...

21 joida news2 ph1ಜೋಯಿಡಾ; ತಾಲೂಕಿನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರದೇಶಿಕ ಜಾನಪದ ಅಧ್ಯಯನ ಕೇಂದ್ರ ಜೋಯಿಡಾ ಹಾಗೂ ಸರಕಾರಿ ಪದವಿ ಪೂರ್ವ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯ ಕುಂಬಾರವಾಡಾ ಸಂಯುಕ್ತ ಆಶ್ರಯದಲ್ಲಿ 60 ನೇ ಕನ್ನಡ ರಾಜ್ಯೋತ್ಸವ ನಿಮಿತ್ತ ಜಾನಪದ ಒಂದು ಪರಿಚಯ ಕಾರ್ಯಕ್ರಮವನ್ನು ಕುಂಬಾರವಾಡಾದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕ.ಜಾ.ವಿ.ವಿ. ಪ್ರಾದೇಶಿಕ ಅಧ್ಯಯನ ಕೇಂದ್ರ ಜೋಯಿಡಾದ ಡಾ|| ರಾಜಶೇಖರ ಜಮದಂಡಿಯವರು ಕಾರ್ಯಕರಮ ಉದ್ಭಾಟಿಸಿ ಮಾತನಾಡಿ, ಜಾನಪದ ಕಲೆಗಳು ಮನುಷ್ಯನ ದೈನಂದಿನ ಜೀವನದಲ್ಲಿ ಯಾವರೀತಿಯಲ್ಲಿ ಬಳಕೆಯಾಗುತ್ತಿರುವ ಬಗ್ಗೆ ವಿವರಿಸಿ ಹೇಳಿದರು. ಅಧ್ಯಯನ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ಆಕರ್ಷಿಸಲು “ವಿಶ್ವವಿಧ್ಯಾಲಯ ಕಾಲೆಜ ನಡೆಗೆ” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳುಬಂದು ದಾಖಲಾಗಬೇಕೆಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುಂಬಾರವಾಡಾ ಪ್ರೌಡ ಶಾಲಾ ಮುಖ್ಯ ಶಿಕ್ಷಕ ವಿ. ರುದ್ರಣ್ಣ ಮಾತನಾಡಿ ಜೀವನ ವಿರುವತನಕ ಜಾನಪದ ಬಿಟ್ಟು ಬದುಕಲು ಸಾಧ್ಯವಿಲ್ಲವೆಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುಂಬಾರವಾಡಾ ಪ.ಪೂ.ಸರಕಾರಿ ಕಾಲೇಜಿನ ಪ್ರಾಚಾರ್ಯೆ ಜೀವನಾ ನಾಯಕ್ ಮಾತನಾಡಿ ಜೀವನವೇ ಒಂದು ಜಾನಪದವಾಗಿದೆ ಎಂದರು. ಪತ್ರಕರ್ತ ಸುಭಾಷ ಗಾವಡಾ ಕುಣಬಿ ಬುಡಕಟ್ಟುಗಳ ಜಾನಪದದ ಬಗ್ಗೆ ವಿವರಿಸಿದರು.
ಕ.ಜಾ.ವಿ.ವಿ.ಪ್ರಾ.ಅ.ಕೇಂದ್ರ ಜೋಯಿಡಾದ ಪ್ರೋಪೆಸರ ಬಾಲಚಂದ್ರ ನಾಯ್ಕ ಜಾನಪದ ವಿಶ್ವವಿದ್ಯಾಲಯ ನಡೆದುಬಂದ ದಾರಿಯನ್ನು ಮತ್ತು ಕನ್ನಡ ಅಭಿಮಾನದ ಕುರಿತು ಮಾತನಾಡಿದರು. ಕಾಲೇಜಿನ ಕನ್ನಡ ಉಪನ್ಯಾಸಕ ಸುನಿಲ್ ಶೇಟಕರ ನಿರುಪಿಸಿದರು. ವಿದ್ಯಾರ್ಥಿ ಅಂಕುಶ ಪೈ ಸ್ವಾಗತಿಸಿದರು. ಗಣಿತ ಉಪನ್ಯಾಸಕ ಶ್ರೀಧರ್ ಬಿ.ಎಸ್. ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿಧ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here