ಜಿಲ್ಲಾಧಿಕಾರಿ ವಾಹನ ಪರಿಶೀಲನೆ ಮಾಡಿಲ್ಲಾ:  ಉಜ್ವಲ್‍ಕುಮಾರ್ ಘೋಷ್ ಎಚ್ಚರಿಕೆ

0
26
loading...

22kwr4ಕಾರವಾರ,22:ಅಧಿಕಾರಿಗಳ ಜೊತೆಗೆ ಗೋವಾಕ್ಕೆ ತೆರಳಿದ್ದ ಜಿಲ್ಲಾಧಿಕಾರಿ ವಾಪಸ್ಸ್ ಬರುವ ವೇಳೆಯಲ್ಲಿ ಕಾರ್ಯಕ್ಷಮತೆಯನ್ನು ಪರೀಕ್ಷೆ ಮಾಡಲು ಜಿಲ್ಲಾಧಿಕಾರಿ ತಮ್ಮ ವಾಹನದಲ್ಲಿ ಗೋವಾ ಮಧ್ಯವನ್ನು ತಂದು ಮಾಜಾಳಿ ಚಕ್‍ಪೋಸ್ಟ್ ದಾಟಿ ಬಂದರೂ ತಮ್ಮ ವಾಹನ ಪರಿಶೀಲನೆ ಮಾಡಿಲ್ಲ ಎಂದು ಜಿಲ್ಲಾಧಿಕಾರಿ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟ ಘಟನೆ ಶನಿವಾರ ರಾತ್ರಿ ನಡೆಸಿದೆ.
ಜಿಲ್ಲಾಧಿಕಾರಿ ಉಜ್ವಲ್‍ಕುಮಾರ್ ಘೋಷ್ ಅವರು ಗೋವಾಕ್ಕೆ ತೆರಳಿ ವಾಪಸ್ ಬರುವಾಗು ತಮ್ಮ ಕಾರಿನಲ್ಲಿ ಗೋವಾದ ಕೆಲವು ಸಾರಾಯಿ ಬಾಟಲಿಗಳನ್ನು ತಂದಿದ್ದರು. ಜಿಲ್ಲಾಧಿಕಾರಿಯನ್ನು ಕಂಡ ಮಾಜಾಳಿ ಗಡಿಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಬಕಾರಿ ಇಲಾಖೆಯ ಅಧಿಕಾರಿ ಅವರ ವಾಹನ ಪರಿಶೀಲನೆ ಮಾಡದೆ ಬಿಟ್ಟಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ವಾಹನದಲ್ಲಿ ಯಾರೇ ಇರಲ್ಲಿ ಅವರ ವಾಹವನ್ನು ಸೂಕ್ತ ರೀತಿಯಲ್ಲಿ ತಪಾಸಣೆ ನಡೆಸಬೇಕು ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಗೋವಾ ಗಡಿಯಿಂದ ಹಾದು ಬರುವ ವಾಹನಗಳನ್ನು ಅಬಕಾರಿ ಅಧಿಕಾರಿಗಳು ತಪಾಸಣೆ ಮಾಡಿದ ಹಾಗೂ ಅಕ್ರಮವಾಗಿ ಸಾರಾಯಿ ಸಾಗಾಟ ಮಾಡಿದ ವಾಹನಗಳ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ಮಾಹಿತಿಗಳನ್ನು ಪರಿಶೀಲನೆ ಮಾಡಿದರು. ಬಳಿಕ ತಮ್ಮ ವಾಹನದಲ್ಲಿ ತಂದ ಮದ್ಯಮ ಬಾಟಲಿಗಳನ್ನು ಅಲ್ಲೇ ಬಿಟ್ಟು ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತಪಾಸಣೆ ನಡೆಸಬೇಕು ಎಂದು ಎಚ್ಚರಿಕೆ ನೀಡಿ ವಾಪಸ್ಸಾದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

loading...

LEAVE A REPLY

Please enter your comment!
Please enter your name here