ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮ

0
17
loading...

varadi1ಶಿರಸಿ,21: ಜಿಲ್ಲಾ ವ್ಯಾಪ್ತಿಯಲ್ಲಿರುವ ವಿಕಲಚೇತನರ ಸಮಗ್ರ ಮಾಹಿತಿಯನ್ನು ಒಂದೇ ಕಡೆ ಸಂಗ್ರಹಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯ್ತಿಯಿಂದ ಅನುಷ್ಠಾನಗೊಂಡ ದಿಶಾ ತಂತ್ರಾಂಶದ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮ ಶನಿವಾರ ನಗರದಲ್ಲಿ ನಡೆಯಿತು.
ಇಲ್ಲಿಯ ತಾಲೂಕು ಪಂಚಾಯ್ತಿ ಸಭಾಭವನದಲ್ಲಿ ಆಯೋಜಿಸಿದ್ದ ಮಾಹಿತಿ ತರಬೇತಿ ಕಾರ್ಯಕ್ರಮದಲ್ಲಿ ಈಗಾಗಲೇ ತರಬೇತಿ ಪಡೆದ ಮಾಸ್ಟರ್ ಟ್ರೇನರ್‍ಗಳು ತಾಲೂಕಾ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯ್ತಿ ಪಿಡಿಓ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದಿಶಾ ತಂತ್ರಾಶ ಬಳಕೆ ಬಗ್ಗೆ ಮಾಹಿತಿ ನೀಡಿದರು.
`ವಿಕಲಚೇತನರ ವಿವಿಧ ಮಾಹಿತಿಗಳನ್ನು ಒಂದೇ ಸೂರಿನಡಿ ಕಲೆ ಹಾಕಲು ದಿಶಾ ಕಾರ್ಯಕ್ರಮ ಅನುಷ್ಠಾನಗೊಂಡಿದೆ. ಇಡೀ ಜಿಲ್ಲೆಯಲ್ಲಿ 20 ಸಾವಿರಕ್ಕಿಂತ ಹೆಚ್ಚು ವಿಕಲಚೇತನರಿದ್ದಾರೆ. ಹಲವು ಇಲಾಖೆಗಳಲ್ಲಿ ಇವರ ಬಗ್ಗೆ ಬಿಡಿಬಿಡಿಯಾಗಿ ಮಾಹಿತಿ ಲಭ್ಯವಿದ್ದರೂ ಒಂದೇ ಕಡೆ ಈ ಎಲ್ಲರ ಮಾಹಿತಿಯಿಲ್ಲ. ಇದರಿಂದ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣ ವಿಕಲಚೇತನರಿಗೆ ಪ್ರಾಮಾಣಿಕವಾಗಿ ಸರ್ಕಾರದ ಯೋಜನೆಯ ಸೌಲಭ್ಯ ನೀಡಲು ಈ ವ್ಯವಸ್ಥೆ ಸಹಕಾಯಿಯಾಗಿದೆ’ ಎಂದು ಇಟಗುಳಿ ಗ್ರಾಮ ಪಂಚಾಯ್ತಿ ಪಿಡಿಓ ಕುಮಾರ ವಾಸನ್ ಹೇಳಿದರು.
`ತಾಲೂಕಿನಲ್ಲಿ ದಿಶಾ ತಂತ್ರಾಂಶದ ಬಗ್ಗೆ ತಿಳುವಳಿಕೆ ನೀಡಲು ಮಾಸ್ಟರ್ ಟ್ರೇನರ್‍ಗಳಾಗಿ 3 ಜನ ಪಿಡಿಓಗಳಿಗೆ ತರಬೇತಿ ನೀಡಲಾಗಿದ್ದು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶದ ಮೇರೆಗೆ ತಾಲೂಕಿನಲ್ಲಿ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಮೂಲಕ ದಿಶಾ ತಂತ್ರಾಂಶ ಜಾರಿಯಾಗಲಿದೆ’ ಎಂದರು.
ಫಲಾನುಭವಿಗಳ ಮಾಹಿತಿ, ನೊಂದಣಿ ಮಾಡುವುದು ಹಾಗೂ ಮುಂದಿನ ಪ್ರಕ್ರಿಯೆಗಳ ಬಗ್ಗೆ ದಿಶಾ ತಂತ್ರಾಂಶದಲ್ಲೇ ಮಾಹಿತಿ ತರಬೇತಿ ನೀಡಲಾಗುತ್ತಿದೆ ಎಂದ ಬಿಸಲಕೊಪ ಗ್ರಾಮ ಪಂಚಾಯ್ತಿ ಪಿಡಿಓ ಮಹಮ್ಮದ್ ರಿಯಾಜ್, ಸರ್ಕಾರದ ಎಲ್ಲ ಕಾರ್ಯಕ್ರಮಗಳು ಆನ್‍ಲೈನ್ ಮೂಲಕ ಜಾರಿಯಾಗಿವೆ.

ದೇಶದಲ್ಲಿ ಮೊದಲ ಬಾರಿಗೆ ಭಾರತ ಸರ್ಕಾರದ ಪಂಚಾಯತ ಸಬಲೀಕರಣ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ದಿಶಾ ಕಾರ್ಯಕ್ರಮ ಅನುಷ್ಠಾನಗೊಂಡಿದೆ. ತಂತ್ರಜ್ಞಾನದ ಬಗ್ಗೆ ತಿಳಿದಿರುವ ಪ್ರತೀ ಪ್ರಜೆಗೆ ಒಂದೇ ಕಡೆ ಎಲ್ಲ ಮಾಹಿತಿ ಸಿಗುವಂತೆ ಮಾಡಲು ಈ ಕಾರ್ಯಕ್ರಮ ಅನುಕೂಲವಾಗಿದೆ. ಅಂಗವಿಕಲರ ಶಿಕ್ಷಣ, ಪಡಿತರ ಮಾಹಿತಿ, ಆಧಾರ್ ಚೀಟಿ ಸೇರಿದಂತೆ ಎಲ್ಲ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ. ಸಂಪೂರ್ಣ ಮಾಹಿತಿ ಒಂದೇ ಸೂರಿನಡಿ ಲಭ್ಯವಾಗುವುದರಿಂದ ಅರ್ಹ ಫಲಾನುಭವಿ ಹಾಗೂ ಆದ್ಯತೆ ಪರಿಗಣಿಸಿ ಸರ್ಕಾರದ ಸೌಲಭ್ಯ ನೀಡಲು ಸಹಕಾರಿಯಾಗುತ್ತದೆ. ಜೊತೆಗೆ, ಸರ್ಕಾರದ ಸೌಲಭ್ಯ ಪದೇ ಪದೇ ಒಂದೇ ಫಲಾನುಭವಿಗೆ ಹೋಗುವುದು ಹಾಗೂ ಲಾಬಿ ಮಾಡುವ ವ್ಯವಸ್ಥೆ ತಡೆಯಲು ಸಾಧ್ಯವಿದೆ’ ಎಂದು ತಿಳಿಸಿದರು.
ಈ ವೇಳೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎಸ್.ಉಮೇಶ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here