ದಾಂಡೇಲಿಯಲ್ಲಿ ಕಾಡು ನಮ್ಮ ನಾಡು ಚಿತ್ರದ ಚಿತ್ರಿಕರಣ

0
21
loading...

29Dandelijpg4ದಾಂಡೇಲಿ,30 : ಕನ್ನಡ ಚಲನಚಿತ್ರ ರಂಗದ ಹಿರಿಯ ನಿರ್ಮಾಪಕ ಹಾಗೂ ನಿರ್ದೇಶಕ ಶಂಕರಲಿಂಗ ಸುಗ್ನಳ್ಳಿ ಅವರು ನಿರ್ಮಿಸುತ್ತಿರುವ ‘ಕಾಡು ನಮ್ಮ ನಾಡು’ ಚಲನಚಿತ್ರದ ಚಿತ್ರೀಕರಣ ದಾಂಡೇಲಿ ಹತ್ತಿರದ ಗೊಬ್ರಾಳ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಜರುಗಿತು.

ಕಾಡು, ಪರಿಸರ ರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ ಹಾಗೂ ಜೀವನದ ಮೌಲ್ಯಗಳ ಸಂದೇಶಗಳನ್ನು ಸಮಾಜಕ್ಕೆ ತಿಳಿ ಹೇಳುವ ಪ್ರಮುಖ ಉದ್ದೇಶದಿಂದ ಈ ಮಕ್ಕಳ ಅಭಿನಯದ ಚಿತ್ರವನ್ನು ನಿರ್ಮಿಸಲಾಗುತ್ತಿದೆ ಎಂದು ಶಂಕರಲಿಂಗ ಸುಗ್ನಳ್ಳಿ ತಿಳಿಸಿದ್ದಾರೆ.

ಶೇ. 65 ರಷ್ಟು ಭಾಗ ಚಿತ್ರೀಕರಣ ಪೂರ್ಣಗೊಂಡಿದ್ದು ಕನ್ನಡದ ಜೊತೆಗೆ ಇಂಗ್ಲೀಷ್, ತೆಲಗು, ಹಿಂದಿ ಭಾಷೆಯಲ್ಲಿ ಬರಲಿರುವ ಈ ಚಿತ್ರದ ಬಿಡುಗಡೆ ಬರುವ ಜನವರಿಯಲ್ಲಿ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ಚಿತ್ರದಲ್ಲಿ ನಗರದ ಸೆಂಟ್ ಮೈಕೆಲ್ ಕಾನಮೆಂಟ್ ಪ್ರಾಥಮಿಕ ಶಾಲೆಯ ಎರಡನೆಯ ತರಗತಿ ವಿದ್ಯಾರ್ಥಿನಿ ಕೆರೆನ್ ಸನ್ನಿ ಮೂಬೆನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವುದು ಹಾಗೂ ಖಳನಾಯಕನ ಪಾತ್ರದಲ್ಲಿ ದಾಂಡೇಲಿಯ ಲಯನ್ಸ್ ಕ್ಲಬ್ ಸದಸ್ಯ ಮಾರುತಿ ಮಾನೆ ಅಭಿನಯಿಸಿದ್ದು ವಿಶೇಷವಾಗಿದೆ.

ವರದಿಗಾರರೊಂದಿಗೆ ಮಾತನಾಡಿದ ನಟ ಮಾರುತಿ ಮಾನೆ ಈ ಚಿತ್ರದಲ್ಲಿ ಮಕ್ಕಳಿಂದ ದುಷ್ಕøತ್ಯಗಳಲ್ಲಿ ತೊಡಗುವವರ ಮನ ಪರಿವರ್ತನೆ ಮಾಡಿ ಸಮಾಜದಲ್ಲಿ ಒಳ್ಳೆ ಯುವಕರಾಗಿ ಕಾಡು, ವನ್ಯಜೀವಿ, ಪರಿಸರ ರಕ್ಷಣೆ ಎಲ್ಲರ ಕರ್ತವ್ಯ ಎಂಬುದರ ಸಂದೇಶ ನೀಡುವ ಪ್ರಯತ್ನ ಮಾಡಲಾಗಿದೆ ಎಂದರಲ್ಲದೆ, ಚಿತ್ರದಲ್ಲಿ ಪುಟ್ಟ ಬಾಲಕಿ ನಗರದ ಸನ್ನಿ ಮೂಬೆನರ್ ಪುತ್ರಿ ಕೆರೆನ್ ಸನ್ನಿ ಪಾತ್ರ ಚಿತ್ರದಲ್ಲಿ ಚೆನ್ನಾಗಿ ಮೂಡಿ ಬಂದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

loading...

LEAVE A REPLY

Please enter your comment!
Please enter your name here