ದಾನಮ್ಮ ದೇವಿಯ ಚರಿತ್ರೆ ಅಮೂಲ್ಯವಾದ್ದು: ಶಿವಮೂರ್ತಿ ಮುರುಘರಾಜೇಂದ್ರ

0
62
loading...

h23hkr02
ಹಿರೇಕೆರೂರ,22:ತಾಲೂಕಿನ ಹಂಸಭಾವಿ ಶೀವಯೋಗಾಶ್ರಮದಲ್ಲಿ ನೆಡೆದ ಶ್ರಿ ದಾನಮ್ಮ ದೇವಿಯ ದೇವಸ್ಥಾನದ ಉದ್ಘಾಟನೆ ಹಾಗೂ ದಾನಮ್ಮದೇವಿ ಗೋಪುರದ ಕಳಸಾರೋಹಣ ಮತ್ತು ದಾನಮ್ಮ ದೇವಿಯ ನೂತನ ರಥೋತ್ಸವದ ಉದ್ಘಾಟನೆ ಹಾಗೂ 501 ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.
ದಾನಮ್ಮ ದೇವಿ ಜೀವನ ದರ್ಶನ ಪ್ರವಚನದ ಸಮಾರೋಪ, ಕಾರ್ಯಕ್ರಮದ ಸಾನಿದ್ಯ ವಹಿಸಿದ ಡಾ|| ಶಿವಮೂರ್ತಿ ಮುರುಘರಾಜೇಂದ್ರ ಸಂಸ್ಥಾನ ಮಠ, ಚಿತ್ರದುರ್ಗ ಆರ್ಶಿವಚನ ನೀಡಿ ಮಾತನಾಡಿದ ಅವರು ದೇವರನ್ನ ಕೇಲವರು ಬಹಿರಂಗದಲ್ಲಿ ನೋಡಿದರೆ, ಇನ್ನೂ ಕೇಲವರು ಅಂತರಂಗದಲ್ಲಿ ದೇವರನ್ನ ಕಾಣುತ್ತಾರೆ.
ಇದೆಲ್ಲವ ಬಿಟ್ಟು ಸತ್ಕಾರ್ಯದಲ್ಲಿ ದೇವರನ್ನ ಕಾಣೋಣ ಎಂದರು: ಹಂಸಭಾವಿಯ ಪುಣ್ಯ ನೇಲದಲ್ಲಿ ಶಿವಶರಣರ ಸಾತ್ವಿಕ ನೆಲೆಗಟ್ಟಿದೆ, ಅದಕ್ಕೆ ಇಂತಹ ಐತಿಹಾಸಿಕ ಪ್ರಸಿದ್ದಿ ಕಾರ್ಯಕ್ರಮಗಳೆ ಸಾಕ್ಷಿಯಾಗಿವೆ,ದಾನಮ್ಮ ದೇವಿಯು ಕಳ್ಳರನ್ನ ಸಹಿತ ಪರಿವರ್ತನೆ ಮಾಡಿ ಲಿಂಗಧೀಕ್ಷೆ ಕೊಟ್ಟು ದಾಸೋಹ ಮಾಡಿದ್ದಾಳೆ.
ಆ ಶರಣೆ 900 ನೇ ಶತಮಾನದಲ್ಲೆ, ಯಾರು ಮಾಡಿರದ ಸಾಮೂಹಿಕ ವಿವಾಹಕ್ಕೆ ಚಾಲನೆ ನಿಡಿದ ಕೀರ್ತಿ ದಾನಮ್ಮ ದೇವಿಗೆ ಸಲ್ಲುತ್ತದೆ. ಇಗ ದಾನಮ್ಮ ದೇವಿ ಎಂದರೆ ಒಂದು ಸ್ಪೂರ್ತಿ, ಪ್ರೇರಣೆ ಸಂಕೇತವಾಗಿದ್ದಾರೆ, ಅಂತಹ ಶರಣೆಯ ದಿವ್ಯ ಅನುಗ್ರಹ, ನಿಮ್ಮೇಲ್ಲರನ್ನ ಹಾರೈಸಲಿ ಎಂದು ಆಶಿರ್ವಚನ ನುಡಿದರು.
ಅಧ್ಯಕ್ಷತೆಯನ್ನು ಶಾಸಕ ಯು.ಬಿ ಬಣಕಾರ ವಹಿಸಿದ್ದರು, ಶಿವರಾತ್ರಿ ದೇಶಿಕೇಂದ್ರ ಮಹಸ್ವಾಮಿಗಳು ಸೂತ್ತೂರ ಮಠ ಮೈಸೂರ(ದಾನಮ್ಮ ದೇವಿಯ ಗೋಪುರದ ಕಳಸಾರೋಹಣ ನೇರವೆರಿಸಿದರು. ಸಿದ್ದಲಿಂಗ ಮಹಸ್ವಾಮಿಗಳು, ಸಿದ್ದಗಂಗಮಠ ತುಮಕೂರು, ಇವರು ದಾನಮ್ಮ ದೇವಿಯ ರಥೊತ್ಸವದ ಉದ್ಘಾಟನೆ ಮಾಡಿದರು. ಮತ್ತು ಶಿವಾನಂದ ಮಹಾಸ್ವಾಮಿಗಳು ದಾಸೊಹ ಮಠ ಸೊನ್ನ, ಬಸವಲಿಂಗ ಮಹಾಸ್ವಾಮಿಗಳು ಗವಿಮಠ ನವಲಗುಂದ, ಗುರುಲಿಂಗ ದೆಸಿಕರು ಅಕ್ಕಿಮಠ, ಗುದ್ದಲೀಶ್ವರ ಮಹಾಸ್ವಾಮಿಗಳು ಮಠ ಹೋಸರಿತ್ತಿ ನಿಜಗುಣ ಶಿವಯೋಗಿ ಮಹಾಸ್ವಾಮಿಗಳು ವಿರಕ್ತ ಮಠ ಹತ್ತಿಮತ್ತೂರ, ಹಾಗೂ ಸಿದ್ದಲಿಂಗ ಸ್ವಾಮಿಗಳು ಶಿವಯೋಗಾಶ್ರಮ ಹಂಸಬಾವಿ ಹಾಗೂ ವಿರಕ್ತಮಠ ಗೋಲಗೆರೆ, ಮಾಜಿ ಶಾಸಕ ಬಿ,ಹೆಚ್ ಬನ್ನಿಕೊಡ ಶಿವಯೋಗಿ ಮಳಿಮಠ, ಗ್ರಾ ಪಂ ಅಧ್ಯಕ್ಷೆ ರಾಜು ಹುಚ್ಚಗೊಂಡರ, ಮತ್ತು ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹ ನೇರೆದಿದ್ದರು. ಹಾಗೂ ಜಿ ಆರ್ ಕೆಂಚಕ್ಕನವರ ನಿವೃತ್ತ ಶಿಕ್ಷಕರು ಹಾಗೂ ಪ್ರಭು ಸ್ವಾಮಿ ಹಾಲೇವಾಡಿಮಠ ನಿರೂಪಿಸಿ ,ವಂದಿಸಿದರು.

loading...

LEAVE A REPLY

Please enter your comment!
Please enter your name here