ದಿ.27 ರಿಂದ ಶ್ರೀ ಗುಡಿದೇವಿ ಜಾತ್ರಾ ಮಹೋತ್ಸವ

0
10
loading...

ಜಮಖಂಡಿ: ಇದೇ ದಿನಾಂಕ 27 ರಿಂದ ದಿನಾಂಕ 29 ರವರೆಗೆ ತಾಲೂಕಿನ ಲಿಂಗನೂರ ಗ್ರಾಮದ ಶ್ರೀ ಗುಡಿದೇವಿ ಜಾತ್ರಾ ಮಹೋತ್ಸವ ಜರುಗಲಿದೆ. ದಿನಾಂಕ 27 ರಂದು ಮುಂಜಾನೆ 5 ಘಂಟೆಗೆ ರುದ್ರಾಭಿಷೇಕ, 9 ಘಂಟೆಗೆ ಪಲ್ಲಕ್ಕಿ ಉತ್ಸವ, ಮಧ್ಯಾಹ್ನ 12 ಘಂಟೆಗೆ ಶ್ರೀ ಶಿವಪುತ್ರ ಅವಧೂತರ ಮಠದಿಂದ ಶ್ರೀ ಗುಡಿದೇವಿ ದೇವಸ್ಥಾನದವರೆಗೆ ಡೊಳ್ಳಿನ ವಿವಿಧ ವಾದ್ಯ ವೈಭವಗಳೊಂದಿಗೆ ಶ್ರೀ ದೇವಿಯ ಮೆರವಣಿಗೆ ಜರುಗುವುದು. ಸಂಜೆ 5 ಘಂಟೆಗೆ ಅಲಂಕಾರ ಭರಿತವಾದ ಶ್ರೀ ದೇವಿಯ ಭವ್ಯ ರಥೋತ್ಸವ ನೆರವೇರುವುದು. ರಾತ್ರಿ 10.30 ಘಂಟೆಗೆ ಬಸವೇಶ್ವರ ನಾಟ್ಯ ಸಂಘದ ವತಿಯಿಂದ ಸತ್ಯವಾನ ಸಾವಿತ್ರಿ ಅರ್ಥಾತ ಯಮನ ಸೋಲು ಎಂಬ ಭಕ್ತಿ ಪ್ರಧಾನ ಬೈಲಾಟ ಪ್ರದರ್ಶನಗೊಳ್ಳುವುದು.
ದಿನಾಂಕ 28 ರಂದು ಮುಂಜಾನೆ 8 ಘಂಟೆಗೆ ಒಂಟ ಕುದುರೆ ಗಾಡಿ ಸ್ಪರ್ಧೆ, 10 ಘಂಟೆಗೆ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ, 11 ಘಂಟೆಗೆ ಗುಂಡು ಎತ್ತುವ ಸ್ಪರ್ಧೆ ಹಾಗೂ ಮಧ್ಯಾಹ್ನ 12 ಘಂಟೆಗೆ ಚೀಲ ಎತ್ತುವ ಸ್ಪರ್ಧೆ ಜರುಗಲಿದೆ. ರಾತ್ರಿ 10.30 ಘಂಟೆಗೆ ಶ್ರೀ ಗುಡಿದೇವಿ ನಾಟ್ಯ ಸಂಘ ವತಿಯಿಂದ ಹುತ್ತಿನಲ್ಲಿ ಕೈಯಿಟ್ಟ ಮುತ್ತೈದೆ ಅರ್ಥಾತ ಮಾಂಗಲ್ಯ ಉಳಿಸಿದ ಮೈದುನ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳುವುದು.
ದಿನಾಂಕ 29 ರಂದು ಮುಂಜಾನೆ 9 ಘಂಟೆಗೆ ಓಪನ ಟಗರಿನ ಕಾಳಗ ಸ್ಪರ್ಧೆ ಹಾಗೂ 11 ಘಂಟೆಗೆ ಹಗ್ಗ ಜಗ್ಗುವ ಸ್ಪರ್ಧೆ ಜರುಗಲಿದೆ ಎಂದು ಶ್ರೀ ಗುಡಿದೇವಿ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

loading...

LEAVE A REPLY

Please enter your comment!
Please enter your name here