ದೇವರು ನೀಡಿದ ಸಂಪತ್ತಿನಲ್ಲಿ ಸ್ವಲ್ಪನಾದರೂ ಬಡವರ ಕಲ್ಯಾಣಕ್ಕಾಗಿ ಮೀಸಲಿಡಿ

0
24
loading...

swamiji

 
ಆಲಮಟ್ಟಿ; ದೇವರು ನೀಡಿದ ಸಂಪತ್ತಿನಲ್ಲಿ ಸ್ವಲ್ಪವಾದರೂ ಬಡವರ ಕಲ್ಯಾಣ ಹಾಗೂ ದಾರ್ಮಿಕ ಕಾರ್ಯಗಳಿಗೆ ನೀಡಿದರೆ ಮನಸ್ಸಿನಲ್ಲಿನ ಕಲ್ಮಶವನ್ನು ನಾಶ ಮಾಡುವ ಮೂಲಕ ನೆಮ್ಮದಿ ಜೀವನಕ್ಕೆ ದಾರಿಯಾಗುತ್ತದೆ ಎಂದು ನಿಡಗುಂದಿ ರುದ್ರೇಶ್ವರ ಮಠದ ರುದ್ರುಮುನಿ ಶ್ರೀಗಳು ಹೇಳಿದರು.
ಸಮೀಪದ ಸುಕ್ಷೇತ್ರ ಯಲಗೂರ ಗ್ರಾಮಕ್ಕೆ ಹೋಗುವ ರಸ್ತೆಗೆ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಯಲಗೂರೇಶ ಮಹಾದ್ವಾರವನ್ನು ಉಧ್ಘಾಟಿಸಿ ಅವರು ಮಾತನಾಡಿದರು.
ಯಲಗೂರು ಆಂಜನೇಯ ಶಕ್ತಿ ಅಪಾರವಾಗಿದ್ದು, ರಾಜ್ಯವಲ್ಲದೇ ನೆರೆ ರಾಜ್ಯಗಳಲ್ಲಿಯೂ ಸಾಕಷ್ಟು ಭಕ್ತಾದಿಗಳಿದ್ದಾರೆ, ದೂರದ ಮಾನ್ವಿಯ ಓರ್ವ ಭಕ್ತ ಇದನ್ನು ನಿರ್ಮಿಸಿದ್ದು ಸ್ವಾಗತಾರ್ಹ ಎಂದರು. ದಾನ ಮಾಡುವ ಗುಣಗಳಿರುವ ಜನರಿದ್ದ ಕಾರಣವೇ ಮಠಗಳು ಬೆಳೆಯುತ್ತಿವೆ ಎಂದರು. ಈಗ ದಾನ ಮಾಡುವ ಸಂಖ್ಯೆ ಕಡಿಮೆಯಿದೆ, ಮಠಗಳು ಕೂಡಾ ಸಮಾಜದ ಪ್ರಗತಿಗೆ ಸದಾ ಶ್ರಮಿಸುತ್ತವೆ ಎಂದರು.ಚತುಷ್ಪತ ರಸ್ತೆ ಮಾರ್ಗ ಸ್ವಲ್ಪ ಬದಲಾವಣೆ ಮಾಡಿದ ಪರಿಣಾಮ ಯಲಗೂರೇಶನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಮಾರ್ಗದ ಸಮಸ್ಯಯಾಗಿತ್ತು. ಮಾನ್ವಿ ಗ್ರಾಮದ ಯಲಗೂರೇಶ ಭಕ್ತರಾದ ಪ್ರಥಮದರ್ಜೆ ಗುತ್ತಿಗೆದಾರ ಎಂ ಈರಣ್ಣ ಅವರು ತಮ್ಮ ವಯಕ್ತಿಕ ಹಣದಲ್ಲಿ 10 ಲಕ್ಷ ವೆಚ್ಚದಲ್ಲಿ ಮಹಾದ್ವಾರವನ್ನು ನಿರ್ಮಿಸುವ ಮೂಲಕ ದಾರ್ಮಿಕ ಕಾರ್ಯದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಜನರಲ್ಲಿ ಭಾರತೀಯ ಸಂಸ್ಕøತಿ, ಧಾರ್ಮಿಕ ಮನೋಭಾವನೆ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ ಎಂದರು. ಭಾರತೀಯ ಸಂಸ್ಕøತಿ ಶ್ರೇಷ್ಠವಾಗಿದ್ದು, ಜನಸಮುದಾಯದಲ್ಲಿ, ಅದರಲ್ಲಿಯೂ ಯುವಕರಲ್ಲಿ ಭಾರತೀಯ ಸಂಸ್ಕøತಿಯ ಬಗ್ಗೆ ಸ್ಪಷ್ಟವಾದ ಅರಿವು ಸಾಮಾಜಿಕ ಹೊಣೆಗಾರಿಕೆಯ ಪ್ರಜ್ಞೆ ಬೆಳೆಸಬೇಕಾಗಿದೆ ಎಂದರು. ಸನ್ಮಾನ ಸ್ವೀಕರಿಸಿ ಎಂ ಈರಣ್ಣ ಮಾತನಾಡಿ, ನಮ್ಮ ಬದುಕಿನ ಜೀವನದಲ್ಲಿ ಸಂಪತ್ತು ಅಗ್ರಸ್ಥಾನ ಪಡೆದಿದೆ. ಆದರೆ ಎಷ್ಟು ಸಂಪತ್ತನ್ನು ಗಳಿಸಿದರೂ ಮುಂದೊಂದು ದಿನ ಅದನ್ನು ಇಲ್ಲಿ ಬಿಟ್ಟು ಹೋಗಬೇಕು. ಸಂಪತ್ತು ದೇವರು ನಮಗೆ ನೀಡಿದ ಭೀಕ್ಷೆ ಎಂದು ಭಾವಿಸಿ ಇರುವ ಸಂಪತ್ತಿನಲ್ಲಿ ಸ್ವಲ್ಪವಾದರೂ ದಾರ್ಮಿಕ ಕಾರ್ಯದಲ್ಲಿ ವಿನಿಯೋಗಿಸಿದರೆ ಮನಸ್ಸನ್ನು ಸಂತಸ ಪಡಿಸಬಹುದಾಗಿದೆ ಎಂದರು.ಇದೇ ಸಂದರ್ಭದಲ್ಲಿ ಈರಣ್ಣ ದಂಪತಿಗಳನ್ನು ರುದ್ರಮುನಿ ಶ್ರೀಗಳು, ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಗೋಪಾಲಾಚಾರ್ಯ ಹಿಪ್ಪರಗಿ ಅವರು ಶಾಸ್ತ್ರೋಕ್ತವಾಗಿ ವಿಧಿವಿಧಾನಗಳೊಂದಿಗೆ ಪೂಜೆಯನ್ನು ನೆರವೇರಿಸಿದರು.
ಶ್ಯಾಮ ಪಾತರದ, ಅಶೋಕ ಡೆಂಗಿ, ಪಾಂಡುಗೌಡ ಪಾಟೀಲ, ಶ್ರೀಶೈಲ್ ಡೆಂಗಿ, ಗುಂಡಪ್ಪ ಪೂಜಾರಿ, ಚನಬಸು ಚನ್ನಿಗಾವಿ, ಎಂ.ಕೆ ಚನ್ನಿಗಾವಿ, ಅನಂತ ಓಂಕಾರ, ಗುರುರಾಜ ಪರ್ವತಿಕರ, ಗೋಪಾಲಾಚಾರ್ಯ ಹಿಪ್ಪರಗಿ, ಗೋಪಾಲ ಗದ್ದನಕೇರಿ, ಸಂತೋಷ ಪೂಜಾರಿ, ಈರಣ್ಣ ಕೂಡಗಾನೂರ, ಗುಂಡಣ್ಣ ಕುಲಕರ್ಣಿ ಸೇರಿದಂತೆ ಇತರರು ಇದ್ದರು.

loading...

LEAVE A REPLY

Please enter your comment!
Please enter your name here