ನಿಪ್ಪಾಣಿಯಲ್ಲಿ ಎನ್.ಟಿ.ಎಸ್.ಇ ಪರೀಕ್ಷೆ

0
40
loading...

 

ನಿಪ್ಪಾಣಿ 8 : ನಿಪ್ಪಾಣಿ ಶೈಕ್ಷಣಿಕ ವಲಯದ 2015-16ನೇ ಸಾಲಿನ ರಾಷ್ಟ್ರೀಯ ಪ್ರತಿಭಾನ್ವೇಷಣೆ ಮತ್ತು ನ್ಯಾಶನಲ್ ಮೀನ್ಸ್-ಕಮ್ ಮೇರಿಟ್ ಪರೀಕ್ಷೆಯು ಸ್ಥಳೀಯ ವಿ.ಎಸ್.ಎಂ.ಜಿ.ಐ.ಬಾಗೇವಾಡಿ ಪ.ಪೂ.ಮಹಾವಿದ್ಯಾಲಯದಲ್ಲಿ ಕೇಂದ್ರ ಸಂಖ್ಯೆ 123ರಲ್ಲಿ ರವಿವಾರದಂದು ಜರುಗಿತು.

ರಾಷ್ಟ್ರೀಯ ಪ್ರತಿಭಾನ್ವೇಷಣೆ (ಎನ್.ಟಿ.ಎಸ್.ಇ) ಪರೀಕ್ಷೆಗೆ 227 ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದು ಒಟ್ಟು 218 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ನ್ಯಾಶನಲ್ ಮೀನ್ಸ್-ಕಮ್ ಮೇರಿಟ್(ಎನ್.ಎಂ.ಎಂ.ಎಸ್) ಪರೀಕ್ಷೆಗೆ 529 ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದು ಒಟ್ಟು 505 ವಿದ್ಯಾರ್ಥಿಗಳು

ಹಾಜರಿದ್ದರು.ಪರೀಕ್ಷಾರ್ಥಿಗಳಿಗೆ 32 ಕೊಠಡಿಗಳಲ್ಲಿ ಆಸನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.ಬಿಇಓ ಎಂ.ಎನ್.ದಂಡಿನ,ಡಯಟ್ ಚಿಕ್ಕೋಡಿ ನೋಡಲ್ ಅಧಿಕಾರಿ ಶೀತಲ ಸೌಂದಲಗೆ ಹಾಗೂ ತಾಲೂಕಾ ನೋಡಲ್ ಅಧಿಕಾರಿ ಎಸ್.ಬಿ.ಪಾಟೀಲ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರೀಶಿಲಿಸಿದರು.ಪರೀಕ್ಷಾ ಕೇಂದ್ರದ ಸುತ್ತ ಸೂಖ್ತ ಪೊಲೀಸ ಬಂದೋಬಸ್ತ ಮಾಡಲಾಗಿತ್ತು.ಪ್ರಾ.ಪಿ.ಜಿ.ನರಕೆ ಮುಖ್ಯ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸಿದರು.

loading...

LEAVE A REPLY

Please enter your comment!
Please enter your name here