ನಿರಂತರ ವಿದ್ಯುತ್ ಫೀಡರ್ ಪೂರ್ಣಗೊಳಿಸಲು ಸೂಚನೆ

0
22
loading...

vidyut

 

ಬಾಗಲಕೋಟ : ಜಿಲ್ಲೆಯಲ್ಲಿ ಹಂಚಿಕೆಯಾಗಿರುವ 219 ಮೆ.ವ್ಯಾ. ವಿದ್ಯುತ್ ಸೇರಿ ಬೇಡಿಕೆ ಇರುವ ಒಟ್ಟು 470 ಮೆಗಾವ್ಯಾಟ ವಿದ್ಯುತ್‍ನ್ನು ಪೂರೈಸಲು ಪ್ರಯತ್ನಿಸಬೇಕು, ನಿರಂತರ ವಿದ್ಯುತ್ ಯೋಜನೆಯ ಫೀಡರ್‍ಗಳನ್ನು ಡಿಸೆಂಬರ್ 31 ರೊಳಗೆ ಪೂರ್ಣಗೊಳಿಸಬೇಕೆಂದು ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ ಅವರು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿನ ವಿದ್ಯುತ್ ಸಮಸ್ಯೆ ಕುರಿತು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಜಿ.ಪಂ. ಸಭಾಭವನದಲ್ಲಿ ಸಭೆ ನಡೆಸಿದ ಅವರು ಈಗಾಗಲೇ 219 ಮೆ.ವ್ಯಾ. ವಿದ್ಯುತ್ ಹಂಚಿಕೆಯಾಗಿದ್ದು ಆದರೆ 470 ಮೆ.ವ್ಯಾ ಬೇಡಿಕೆ ಇದ್ದು, ಈ ವಿದ್ಯುತ್ ಅಭಾವವನ್ನು ನೀಗಿಸಲು ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸರ್ಚಿಸಲಾಗುವುದೆಂದು ಸಚಿವರು ತಿಳಿಸಿದರು.
219 ಮೆ.ವ್ಯಾ ವಿದ್ಯುತ್‍ನ್ನು ಸಮರ್ಪಕವಾಗಿ ಬಳಸಿಕೊಂಡು ಜಿಲ್ಲೆಯ ಯಾವುದೇ ಭಾಗದಲ್ಲಿ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಜಿಲ್ಲೆಗೆ ಒಟ್ಟು 470 ಮೆಗಾವ್ಯಾಟ ವಿದ್ಯುತ್ ಬೇಡಿಕೆಯಿದ್ದು ಇದನ್ನು ಪೂರೈಸುವತ್ತ ಹೆಸ್ಕಾಂ ಪ್ರಯತ್ನಿಸಬೇಕೆಂದು ಸೂಚಿಸಿದರು.
ಹೆಸ್ಕಾಂ ವ್ಯಾಪ್ತಿಯ ಬಾಗಲಕೋಟೆ ಜಿಲ್ಲೆ ಸೇರಿದಂತೆ 7 ಜಿಲ್ಲೆಗಳಿಗೆ ಈಗ 1100 ಮೆಗಾವ್ಯಾಟï ವಿದ್ಯುತ್ ಪೂರೈಕೆ ಇದೆ ಆದರೆ 1500 ಮೆಗಾವ್ಯಾಟï ವಿದ್ಯುತ್ ಬೇಕು ಈ ದಿಸೆಯಲ್ಲಿ ಅದನ್ನು ಪೂರೈಸುವತ್ತ ಗಮನಹರಿಸಬೇಕೆಂದು ಹೆಸ್ಕಾಂ ನಿರ್ದೇಶಕರಿಗೆ ಸಲಹೆ ಮಾಡಿದರು.
ನಿರಂತರ ವಿದ್ಯುತ್ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 83 ಫೀಡರ್‍ಗಳ ಪೈಕಿ 71 ಪೂರ್ಣವಾಗಿದ್ದು ಇನ್ನುಳಿದ 12 ಫೀಡರ್‍ಗಳನ್ನು ಡಿಸೆಂಬರ 15 ರೊಳಗೆ ಪೂರ್ಣಗೊಳಿಸಲು ಪ್ರಯತ್ನಿಸಬೇಕು, ಡಿಸೆಂಬರ್ 31 ರೊಳಗೆ ಅವುಗಳೆಲ್ಲವೂ ಪೂರ್ಣಗೊಳ್ಳಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹಂಚಿಕೆಯಾಗಿರುವ ವಿದ್ಯುತ್‍ನ್ನು ಸಮರ್ಪಕವಾಗಿ ವಿತರಿಸಬೇಕು, ತಲಾ 3 ತಾಸು ಹಗಲು, 3 ತಾಸು ರಾತ್ರಿ ಹಾಗೂ 2 ತಾಸು ಸಿಂಗಲï ಫೇಸ್‍ನಂತೆ ಗುಣಮಟ್ಟದ ವಿದ್ಯುತ್ ಪೂರೈಸಬೇಕು, ಈ ಸಮಯದಲ್ಲಿ ಯಾವುದೇ ಸಮಸ್ಯೆಗಳಾಗಬಾರದೆಂದು ತಿಳಿಸಿದ ಸಚಿವರು ಗ್ರಾಮೀಣ ಭಾಗದಲ್ಲಿ, ಕೃಷಿ ಕಾರ್ಯ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದರು.
ವಿದ್ಯುತ್ ಸಮಸ್ಯೆ ರಾಜ್ಯದಲ್ಲಿಯೇ ಇದೆ, ಇದನ್ನು ನಿವಾರಿಸಲು ಸರಕಾರ ಖರೀದಿಗೆ ಮುಂದಾಗುತ್ತಿದೆ ಈ ದಿಸೆಯಲ್ಲಿ ಹಂಚಿಕೆ ಮಾಡಿರುವ ವಿದ್ಯುತ್‍ನ್ನು ಸಮರ್ಪಕವಾಗಿ ಬಳಸಿಕೊಂಡು ಯಾವುದೇ ಸಮಸ್ಯೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು, ರೈತರು ಬೆಳೆದ ಹಿಂಗಾರು ಬೆಳೆಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಜಾಗೃತಿ ವಹಿಸಿ ವಿದ್ಯುತ್ ಪೂರೈಸಬೇಕೆಂದು ಎಸ್.ಆರ್. ಪಾಟೀಲ ಸೂಚಿಸಿದರು.
ಶಾಸಕ ಜೆ.ಟಿ. ಪಾಟೀಲ ಮಾತನಾಡಿ ಜಿಲ್ಲೆಗೆ ಹಂಚಿಕೆಯಾಗಿರುವ 219 ಮೆಗಾವ್ಯಾಟï ವಿದ್ಯುತ್‍ನ್ನು ಯಾವ ರೀತಿಯಾಗಿ ಹಂಚಲಾಗುತ್ತದೆ ಎಂದು ಪ್ರಶ್ನಿಸಿ ನಿರಂತರ ವಿದ್ಯುತ್ ಯೋಜನೆಯ ಫೀಡರ್‍ಗಳನ್ನು ಡಿಸೆಂಬರ ಮೊದಲ ವಾರದೇ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು. ಈ ಯೋಜನೆಯು ವಿಳಂಬವಾಗುತ್ತಿದ್ದು ರೈತರು ನಮ್ಮನ್ನು ದೂಷಿಸುವಂತಾಗಿದೆ ಎಂದು ಆಕೊÂ್ರೀಶ ವ್ಯಕ್ತಪಡಿಸಿ ವಿದ್ಯುತ್ ನಿರ್ವಹಣೆ, ಪೂರೈಕೆಯಲ್ಲಿ ಹೆಸ್ಕಾಂ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಎಚ್.ವೈ. ಮೇಟಿ ಮಾತನಾಡಿ ಬಾಗಲಕೋಟೆಗೆ ಅಗತ್ಯವಾಗಿರುವ ವಿದ್ಯುತ್ ಪೂರೈಸಬೇಕು, ನಿರಂತರ ವಿದ್ಯುತ್ ಯೋಜನೆಗಳನ್ನು ಪೂರ್ಣಗೊಳಿಸಬೇಕೆಂದರಲ್ಲದೇ ಸೋಲಾರ್ ವಿದ್ಯುತ್ ಯೋಜನೆಗೆ ಬಾಗಲಕೋಟೆ ಜಿಲ್ಲೆಯನ್ನು ಆಯ್ಕೆ ಮಾಡಬೇಕೆಂದರು.
ಶಾಸಕ ಗೋವಿಂದ ಕಾರಜೋಳ ಮಾತನಾಡಿ ಹಂಚಿಕೆಯಾಗಿರುವ ವಿದ್ಯುತ್‍ನಲ್ಲಿಯೇ ಮೇಲಿನ ಅಧಿಕಾರಿಗಳಿಂದ ಕಡಿಮೆಗೊಳಿಸಲಾಗುತ್ತಿದೆ, ಈ ಕುರಿತು ಗಮನಹರಿಸಿ ಕಡಿಮೆಯಾಗದಂತೆ ಹಂಚಿಕೆಯಾಗಿರುವ ವಿದ್ಯುತ್‍ನ್ನು ಪೂರೈಸಬೇಕೆಂದು ಸಲಹೆ ಮಾಡಿದರು.
ಹೆಸ್ಕಾಂ ನಿರ್ದೇಶಕಿ ಕುಶುಬು ಗೋಯಲïಚೂರ್ ಮಾತನಾಡಿ ಸಮರ್ಪಕ ಮಳೆ ಇಲ್ಲದೇ, ವಿದುತ್ ಉತ್ಪಾದನೆ ಇಲ್ಲದೇ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ, ಈ ಸಮಸ್ಯೆ ಫೆಬ್ರುವರಿ ತಿಂಗಳವರೆಗೆ ಕಾಡಲಿದ್ದು, ಸರಕಾರ ವಿದ್ಯುತ್ ಖರೀದಿಗೆ ಮುಂದಾಗುತ್ತಿದು, ಫೆಬ್ರುವರಿ 15 ರೊಳಗೆ ಈ ಎಲ್ಲ ಸಮಸ್ಯೆ ಬಗೆಹರಿಯಲಿದೆ ಎಂದರು. ಡಿಸೆಂಬರ್ ಅಂತ್ಯದೊಳಗೆ ನಿರಂತರ ವಿದ್ಯುತ್ ಯೋಜನೆಯನ್ನು ಪೂರ್ಣಗೊಳಿಸಲಾಗುವುದೆಂದು ಅವರು ಹೇಳಿದರು.
ರೈತರು ಸಭೆಯಲ್ಲಿ ಭಾಗವಹಿಸಿ ವಿದ್ಯುತ್ ಸಮಸ್ಯೆ ಕುರಿತು ವಿವರಿಸಿದರು. ವೇದಿಕೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ ರಾಠೋಡ, ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ, ಜಿಲ್ಲಾ ಪೆÇೀಲೀಸ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಹೆಸ್ಕಾಂ ಅಧಿಕಾರಿಗಳಾದ ಎಸ್.ಬಿ. ಸಕ್ರಿ, ರೈತ ಪ್ರಮುಖರು ಮತ್ತಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here