ಬಡತನ ನಿರುದ್ಯೋಗ ನಿವಾರಣೆಯಲ್ಲಿ ಎಸ್.ಕೆ.ಡಿ.ಆರ್.ಡಿ.ಪಿ ಪ್ರಮುಖ ಪಾತ್ರ ವಹಿಸುತ್ತಿದ್ದೆ : ಜೆ.ಜೆ.ನಾಯ್ಕ

0
31
loading...

vlcsnap-2015-11-23-18h15m15s105

ಭಟ್ಕಳ,23: ಸಮಾಜದಲ್ಲಿರುವ ದುಶ್ಚಟಗಳನ್ನು ಹಿಮ್ಮೆಟ್ಟಿ ಉತ್ತಮ ಜೀವನ ನಡೆಸಲು ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಪಾತ್ರ ಅತ್ಯಂತ ಹಿರಿದಾದುದು ಎಂದು ನಿವೃತ್ತ ಶಿಕ್ಷಕ ಹಾಗೂ ನಾಮಧಾರಿ ಅಭಿವೃದ್ದಿ ಸಂಘದ ಮಾಜಿ ಅಧ್ಯಕ್ಷ ಜೆ.ಜೆ. ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.
ಅವರು ಇಲ್ಲಿನ ಶಾರದಹೊಳೆ ನಾಮಧಾರಿ ಸಬಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಭಟ್ಕಳ ಹೊನ್ನಾವರ ಉಪವಿಭಾಗದದ ಬೆಂಗ್ರೆ ವಲಯಮಟ್ಟದ ಸಾಧನ ಸಮಾವೇಶ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗ್ರಾಮಾಭಿವೃದ್ದಿ ಯೋಜನೆಗಳನ್ನು ಜಾರಿಗೆ ತಂದು ಸಮಾಜದಲ್ಲಿರುವ ಬಡತನ ನಿರುದ್ಯೋಗ ನಿರ್ಮೂಲನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಈ ಯೋಜನೆಯ ಲಾಭವನ್ನು ಎಲ್ಲರೂ ಪಡೆದುಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಯೋಜನಾಧಿಕಾರಿ ಲಕ್ಷ್ಮಣ ಎಂ. ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷರಾದ ಜಗದೀಶ ಜೈನ್, ಭಟ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ರಾಷ್ಟ್ರೀಯ ಪತ್ರಕರ್ತರ ಸಂಘದ ಸದಸ್ಯರಾದ ವಿಷ್ಣು ದೇವಾಡಿಗ ಮಾತನಾಡಿ
ಧರ್ಮಸ್ಥಳ ಗ್ರಾಮಾಬಿವೃದ್ದಿ ಸಮಿತಿಯು ಕಳೆದ ಹಲವು ವರ್ಷಗಳಿಂದ ಸಮಾಜದಲ್ಲಿ ಕ್ರಾಂತಿಕಾರಿ ಯೋಜನೆಯ ಮೂಲಕ ಬಡವರ ರೈತರ ಪಾಲಿಗೆ ಕಾಮದೇನು ಆಗಿದ್ದು ಹತ್ತು ಹಲವು ಯೋಜನೆಗಳ ಮೂಲಕ ಸಮಾಜವನ್ನು ಮುಂದೆ ತರುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತುರುವುದು ಶ್ಲಾಘನೀಯವಾದುದು ಎಂದು ಅಭಿಪ್ರಾಯಪಟ್ಟರು.
ಸಮಾರಂಭದ  ಅಧ್ಯಕ್ಷತೆಯನ್ನು ಮಾಜಿ ಪಂಚಾಯತ ಅಧ್ಯಕ್ಷ ಜನಾರ್ಧನ ನಾಯ್ಕ ವಹಿಸಿ ಮಾತನಾಡಿದರು. ಪ್ರಾರಂಭದಲ್ಲಿ ಯೋಜನಾಧಿಕಾರಿ ಸದಾನಂದ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋಹಿನಿ ನಾಯ್ಕ ಸ್ವಾಗತಿಸಿದರು. ಮಾವಿನಕಟ್ಟೆ ಸೇವಾಪ್ರತಿನಿಧಿ ಶೈಲಾ ಶೆಟ್ಟಿ ವರದಿ ವಾಚಿಸಿದರು. ಕೊನೆಯಲ್ಲಿ ಸವಿತಾ ನಾಯ್ಕ ವಂದಿಸಿದರು. ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕ ವೆಂಕಟೇಶ ಪಟಗಾರ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಗ್ರಾ,ಪಂಚಾಯತ ಸದಸ್ಯರಾದ ರಾಮಚಂದ್ರ ನಾಯ್ಕ, ಸಾತಯ್ಯ ನಾಯ್ಕ, ಗಣಪತಿ ದೇವಾಡಿಗ, ಎನ್.ಎನ್. ತಿಮ್ಮನಮನೆ, ಗಣಪತಿ ದೇವಾಡಿಗ, ಪ್ರಗತಿಭಂದ್ರ ಸ್ವ ಸಹಾಯ ಸಂಘದ ಅಧ್ಯಕ್ಷ ರವಿಂದ್ರ ನಾಯ್ಕ, ವಿಘ್ನೇಶ್ವರ ನಾಯ್ಕ, ಈರಮ್ಮ ಗೊಂಡ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here