ಭಟ್ಕಳದ ಮದರಸದ ನಾಪತ್ತೆಯಾದ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಉ.ಕ.ಎಸ್ಪಿ ದಿಲೀಪ್

0
29
loading...

IMG-20151129-WA0006ಭಟ್ಕಳ,30: ಮದರಸದಿಂದ ನಾಪತ್ತೆಯಾಗಿರುವ ಬಾಲಕಿಯರ ಮೇಲೆ ತಂದೆ, ಭಾವ ಮತ್ತು ಕುಮಟಾದಲ್ಲೂ ಇಬ್ಬರಿಂದ ಅತ್ಯಾಚಾರ ನಡೆದಿದೆ ಎಂದು ಉ.ಕ ಜಿಲ್ಲಾ ಎಸ್ಪಿ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ
ಅವರು ನಗರಠಾಣೆಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ ಈ ವಿಷಯ ಬಹಿರಂಗ ಪಡೆಸಿದ್ದಾರೆ. ನ. 18ರಂದು ಇಬ್ಬರು ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗಿದ್ದಾರೆ ಹುಡುಕಿಕೋಡಿ ಎಂದು ತೆಂಗಿನಗುಂಡಿಯ ಅರೆಬಿಯಾ ತಾಲುಮುಲ್ಲಾ ಖುರಾನ್ ಎನ್ನುವ ಮದರಸದ ಕಾರ್ಯದರ್ಶಿ ಹಾಪೀಜ್ ಅಬ್ದುಲ್ ಖಾದೀರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದಿಶೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸ ತಂಡ ನಾಪತ್ತೆಯಾದ ಬಾಲಕಿಯರನ್ನು ರಕ್ಷಿಸಿ ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ತಾಲೂಕಿನ ಮದರಸದಲ್ಲಿ ಉಳಿದುಕೊಂಡಿದ್ದ 2 ಬಾಲಕಿಯರ ಪೈಕಿ ಒರ್ವಳು ರಜೆಯ ಸಂದರ್ಭದಲ್ಲಿ ಮನೆಗೆ ತೆರಳಿದಾಗ ಅವಳ ಅಕ್ಕನ ಗಂಡ ಮತ್ತು ಅವಳ ತಂದೆ ಹಿಂಸಾತ್ಮಕವಾಗಿ ಅತ್ಯಾಚಾರ ನಡೆಸುತ್ತಿದ್ದರು. ಕಳೆದ ಒಂದು ವರ್ಷದಿಂದಲೂ ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು ಈ ಹಿಂಸೆಯನ್ನು ತಾಳಲಾರದೆ ಅವಳು ತನ್ನ ಗೆಳತಿಗೆ ತಿಳಿಸಿ ಇಲ್ಲಿಂದ ಹೊರಹೋಗಲು ತಿರ್ಮಾನಿಸಿದ್ದಾರೆ. ನ. 18ರಂದು ರಾತ್ರಿ ಭಟ್ಕಳದಿಂದ ಕುಮಟಾ ರೈಲ್ವೆ ನಿಲ್ದಾಣಕ್ಕೆ ತೆರಳಿ ಗೋವಾ ರೈಲಿಗಾಗಿ ಕಾಯುತ್ತಿದ್ದರು.

ಆ ಸಂದರ್ಭದಲ್ಲಿ ಕುಮಟಾ ರೈಲ್ವೆ ನಿಲ್ದಾಣದಲ್ಲಿ ಭರತ್ ಅಂಬಿಗ ಮತ್ತು ವಿಶ್ವನಾಥ ನಾಯ್ಕ ಎನ್ನುವ ಆರೋಪಿಗಳು ಈ ಬಾಲಕಿಯರ ಪೋಟೋ ತೆಗೆದು, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೆವೆ ಎಂದು ಬೆದರಿಸಿದ್ದಾರೆ. ತಮ್ಮೊಂದಿಗೆ ಕರೆದೊಯ್ದು ಅಲ್ಲಿ ಅತ್ಯಾಚಾರ ನಡೆಸಿ ನಿಲ್ದಾಣಕ್ಕೆ ತಂದು ಬೀಡುತ್ತಾರೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಜೀವಬೆದರಿಕೆ ಹಾಕಿ ತೆರಳಿದ್ದರು ಎನ್ನಲಾಗಿದೆ. ನಂತರ ಬಾಲಕಿಯರು ಅಲ್ಲಿಂದ ರೈಲಿನಲ್ಲಿ ಗೋವಾಕ್ಕೆ ತೆರಳಿದಾಗ ಪೊಲೀಸರು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಬಾಲಕಿಯ ತಂದೆ, ಭಾವ ಮಹ್ಮದ್ ಮುಜಾರಪ್, ಮತ್ತು ಕುಮಟಾದ 2 ಆರೋಪಿಗಳಾದ ಭರತ್ ಅಂಬಿಗ ಮತ್ತು ವಿಶ್ವನಾಥ ನಾಯ್ಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉ.ಕ ಜಿಲ್ಲಾ ಪೊಲೀಸ್ ಅಧಿಕ್ಷಕ ಆರ್. ದೀಲಿಪ್, ಹೆಚ್ಚುವರಿ ಪೊಲೀಸ್ ಅಧಿಕ್ಷಕ ದೇವರಾಜು, ಸಹಾಯಕ ಪೊಲೀಸ್ ಅಧಿಕ್ಷಕ ಅನೂಪ ಶೆಟ್ಟಿ, ಮಾರ್ಗದಶನದಲ್ಲಿ ಸಿಪಿಐ ಪ್ರಶಾಂತ ನಾಯಕ, ಗ್ರಾಮೀಣ ಪೊಲೀಸ್ ಠಾಣೆಯ ಉಪನೀರಿಕ್ಷಕ ಮಂಜುನಾಥ ಟಿಎಚ್, ಸಿಬ್ಬಂದಿಗಳಾದ ಎ.ಎಸ್‍ಐ ನವೀನ ಬೊರ್ಕರ, ಉಪೇಂದ್ರ ನಾಯ್ಕ, ಗಜಾನನ ಹರಿಕಂತ್ರ ಸೇರಿದಂತೆ ಠಾಣೆಯ ಸಿಬ್ಬಂದಿಗಳು ತಂಡದಲ್ಲಿ ಕಾರ್ಯನಿರ್ವಹಿಸಿದ್ದರು.

loading...

LEAVE A REPLY

Please enter your comment!
Please enter your name here