ಭಟ್ಕಳ: ಅಂಜುಮನ್ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

0
25
loading...

22bkl-01-anjumanಭಟ್ಕಳ,22: ಇತ್ತಿಚೆಗೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಜರಗಿದ ಉತ್ತರಕನ್ನಡ ಜಿಲ್ಲಾ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ಬಾಲಕರು ಉತ್ತಮ ಪ್ರದರ್ಶನ ನೀಡುವುದರ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಅಂಜುಮನ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜುಕಾಕೋ ಅಬ್ದುಲ್ ರಹೀಮ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹ್ಯಾಮರ್ ಎಸೆತದಲ್ಲಿ ಶಹಝಾದ್ ಮುಹಮ್ಮದ್ ಹನೀಫ್ ಪ್ರಥಮ, ಪೋಲವಾಲ್ಟ್ ಜಿಗಿತದಲ್ಲಿ ಮುಹಮ್ಮದ್ ಇಸ್ಮಾಯಿಲ್ ಶೇಖ್ ಪ್ರಥಮ, ಈಟಿ ಎಸೆತದಲ್ಲಿ ಮುಹಮ್ಮದ್ ಅಬ್ರಾರ್ ಪ್ರಥಮ ಸ್ಥಾನಗಳಿಸಿದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆ ಹಿಂದೆ ತರಬೇತುದಾರರಾದ ಫಾರೂಖ್ ಘನಿ ಹಾಗೂ ರಾಜಾಸಾಬ್ ಶ್ರಮ ವಹಿಸಿದ್ದು ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಾಧ್ಯಾಪಕ ಶಬ್ಬಿರ್ ಆಹ್ಮದ್ ದಫೇದಾರ್ ಅಭಿನಂದಿಸಿದ್ದಾರೆ.

loading...

LEAVE A REPLY

Please enter your comment!
Please enter your name here