ಭಾರತ ರತ್ನ ಮೌಲಾನಾ ಅಬ್ದುಲ್ ಕಲಾಂ ಆಝಾದವರ 127ನೇ ಜಯಂತ್ಯೋತ್ಸವ

0
21
loading...

 

 
ಆಲಮೇಲ : ಪಟ್ಟಣದ ಶಾದಿಮಹಲನಲ್ಲಿ ಜಮ್ಯಿತ್ ಉಲ್‍ಮಾ-ಎ-ಹಿಂದ, ಆಲಮೇಲ ಇವರ ಸಂಯುಕ್ತ ಆಶ್ರಯಲದಲ್ಲಿ ಪ್ರಪ್ರಥವಾಗಿ ಭಾರತ ರತ್ನ ಮೌಲಾನಾ ಅಬುಲ್ ಕಲಾಂ ಆಝಾದವರ 127ನೇ ಜಯಂತ್ಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ವೈದ್ಯರಾದ ಡಾ|| ಸಂದೀಪ ಪಾಟೀಲವರು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಿದರು. ವಿಜಯಪುರದ ಮೌಲಾನಾ ಶಾಕೀರ ಹುಸೇನ ಕಾಸ್ಮಿಯವರು ಸಾನಿಧ್ಯ ವಹಿಸಿ ಮಾತನಾಡಿದರು, ಪ್ರಪ್ರಥಮವಾಗಿ ಭಾರತದ ಶಿಕ್ಷಣ ಮಂತ್ರಿಯಾಗಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಅಝಾದ ತಮ್ಮದೇ ಛಾಪು ಮೂಡಿಸಿದ್ದರು, ಇವರು ಒಬ್ಬ ಅಪ್ಪಟ ದೇಶ ಪ್ರೇಮಿಯಾಗಿದ್ದರು, ಇವರ ಜನ್ಮದಿನವಾದ ನವೆಂಬರ 11ರಂದು ರಾಷ್ಟ್ರೀಯ ಶಿಕ್ಷಣ ದಿನಾಚಾರಣೆಯಾಗಿ ಆಚರಿಸುತಿದ್ದೆವೆ, ಎಲ್ಲರೂ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ಹಾಗೂ ದೇಶಪ್ರೇಮ ಬೆಳಸಬೆಕೆಂದು ಹೇಳಿದರು. ಈ ಸಂದರ್ಭದಲ್ಲಿ ನ್ಯಾಯವಾದಿ ರಾಜಶೇಖರ ಚೌರ ಮಾತನಾಡಿ ಅಜಾದವರು ರಾಷ್ಟ್ರೀಯ ಏಕತೆಯನ್ನು ಬಯಸಿದ ಅಗ್ರಗಣ್ಯರಲ್ಲಿ ಒಬ್ಬರು, ಅಪ್ಪಟ ದೇಶಾಭಿಮಾನಿಯಾಗಿದ್ದ ಮೌಲಾನಾ ಅಝಾದ ಅಪ್ರತಿಮ ಪಾಂಡಿತ್ಯ ಹೊಂದಿದ್ದರು, ಅರೇಬಿಕ್. ಇಂಗ್ಲೀಷ.ಹಿಂದಿ. ಪರ್ಷಿಯನ್ ಭಾಷೆಯ ಮೇಲೆ ಪ್ರಭುತ್ವವನ್ನು ಸಾಧಿಸಿದ್ದರು, ಪ್ರತಿಯೊಬ್ಬರು ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಬೆಕೆಂದು ಹೇಳಿದರು.
ಶ್ರೀಮನಿಪ್ರ ಜಗದೇವ ಮಲ್ಲಿಬೊಮ್ಮ ಸ್ವಾಮಿಗಳು ಹಾಗೂ ಮಾಜಿ ಗ್ರಾಪಂ ಅಧ್ಯಕ್ಷ ಸಾಧಿಕ ಸುಂಬಡ, ರಾಜಕೀಯ ಮುಖಂಡರಾದ ಯಶವಂತ್ರಾಯಗೌಡ ರೂಗಿ ಅಬುಲ ಕಲಾಂರವರ ಬಗ್ಗೆ ಗುಣದಾನ ಮಾಡಿದರು. ಕಾರ್ಯಕ್ರಮದಲ್ಲಿ ಮಕ್ಕಳು ಪ್ರಾರ್ಥನೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಬಿ ಆರ್ ಎಂಟಮಾನ, ಅಶೋಕ ಕೋಳಾರಿ, ತಾಪಂ ಸದಸ್ಯ ಅಕ್ಬರ ಮುಲ್ಲಾ, ಮಲ್ಲಿಕಾರ್ಜುನ ಅಚಲೇರಿ, ನಾಗರಿಕ ವೇದಿಕೆ ರಮೇಶ ಬಂಟನೂರ, ರಿಯಾಜ ಬಿಳವಾರ, ರಾಜಹಮ್ಮದ ಬೆಣ್ಣೆಶೂರ, ಸಿಆರ್‍ಸಿ ಪ್ರವಿದ ಪಟೆಲ, ವಾಬ ಸುಂಬಡ, ಫರಿದಸಾಬ ಸುಂಬಡ, ಬಾಬು ಕೊತಿಂಬರಿ ಹಾಗೂ ಜಮ್ಯಿತ್ ಉಲ್‍ಮಾ-ಎ-ಹಿಂದ ಸಂಘದ ಎಲ್ಲಾ ಪಧಾದಿಕಾರಿಗಳು ಉಪಸ್ಥಿತರಿದ್ದರು.
ಫಾರೂಕ ಸುಂಬಡ ಸ್ವಾಗತಿಸಿದರು.

loading...

LEAVE A REPLY

Please enter your comment!
Please enter your name here