ಭುವನಗಿರಿಯಲ್ಲಿ ರಾಜ್ಯೋತ್ಸವದ ಸಂಭ್ರಮ

0
26
loading...

3sdp 3
ಸಿದ್ದಾಪುರ,4: ರಾಜ್ಯದಲ್ಲಿ ಕನ್ನಡಾಂಬೆ ನೆಲೆಸಿರು ಏಕೈಕ ಸ್ಥಳವಾದ ತಾಲೂಕಿನ ಭುವನಗಿರಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾ ನಡೆಯಿತು.
ಬೆಂಗಳೂರು ವಿಶ್ವ ವಿದ್ಯಾಲಯದ ವಿಶ್ರಾಂತ ಉಪನ್ಯಾಸಕ ಕೆ.ಪಿ.ಭಟ್ಟ ಮುತ್ತಿಗೆ ಭುವನಗಿರಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಾತೃವಂದನಾ ಸಮಿತಿ ಆಯೋಜಿಸಿದ್ದ ಮಾತೃವಂದನಾ ದಶಮಾನ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿ
ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದಕ್ಕೆ ನಾವು ಬೇರೆಯವರನ್ನು ಅವಲಂಬಿಸದೆ ನಮ್ಮ ಸ್ವಂತ ಕಾರ್ಯಚಟುವಟಿಕೆಯ ಮೂಲಕ ಉಳಿಸಿಕೊಳ್ಳಬೇಕು
. ಕನ್ನಡದ ಮೇಲಿನ ಅಭಿಮಾನದಿಂದ ಭಾಷೆ ಉಳಿಸಿಕೊಳ್ಳಲು ಸಾಧ್ಯವಿಲ್ಲ. ದಿನ ನಿತ್ಯ ನಮ್ಮ ಆಡು ಭಾಷೆಯಾಗಬೇಕು. ಮನೆ ಮನೆಯಲ್ಲಿ ಕನ್ನಡವನ್ನು ಮಾತನಾಡಬೇಕು. ಕನ್ನಡ ಭಾಷೆ ಸೇರಿದಂತೆ ನಾವು ಮಾತನಾಡುವ ಯಾವ ಭಾಷೆಯೂ ಶುದ್ಧವಾಗಿಲ್ಲ. ಎಲ್ಲ ಭಾಷೆಯೂ ಮಿಶ್ರವಾಗಿರುವುದು ಕನ್ನಡ ಎಂದರೆ ಯಾವುದು ಎನ್ನುವ ಪ್ರಶ್ನೆ ಕನ್ನಡಿಗರದ್ದಾಗಿದೆ.
ಗಡಿ ನಾಡಿನಲ್ಲಿ ಕನ್ನಡದ ಅಭಿವೃದ್ಧಿಕುರಿತು ಕೆಲಸವಾಗುತ್ತಿಲ್ಲ. ಆದ್ದರಿಂದ ಗಡಿ ನಾಡಿನ ಜಿಲ್ಲೆಯಲ್ಲಿ ಕನ್ನಡ ಮರೆಯಾಗುತ್ತಿದೆ. ಪ್ರಾದೇಶಿಕವಾದ ಅಭಿವೃದ್ಧಿ ಆಗಬೇಕಾಗಿದ್ದು ಆ ನಿಟ್ಟಿನಲ್ಲಿ ಚಿಂತನೆ ನಡೆಸಯಬೇಕಾಗಿದೆ. ಇಂದು ಉತ್ಸವಗಳು ಕೇವಲ ಕಾಟಾಚಾರಕ್ಕೆಂಬಂತೆ ನಡೆಯುತ್ತಿದೆ. ಉತ್ಸವದ ನಿಜವಾದ ಅರ್ಥವನ್ನು ತಿಳಿದುಕೊಳ್ಳಬೇಕು.
ಕನ್ನಡಿಗರು ಇಂದು ಎಲ್ಲ ಕಡೆ ಇದ್ದರೂ ನಮ್ಮ ಭಾಷೆಯನ್ನು ಆಡುವುದಕ್ಕೆ ಹಿಂಜರಿಯುತ್ತಿದ್ದೇವೆ. ಹಾಗಾಗಬಾರದು ನಾವು ಎಲ್ಲೇ ಇದ್ದರೂ ನಮ್ಮ ಮಾತೃಭಾಷೆಯನ್ನು ಆಡಬೇಕು ಆ ಮೂಲಕ ಭಾಷೆಯನ್ನು ಬೆಳೆಸಬೇಕಾಗಿದೆ. ಕನ್ನಡದ ಉಳಿವಿಗಾಗಿ ಹೋರಾಟ ನಡೆಯುತ್ತಿದ್ದು ಇದರಿಂದ ಕನ್ನಡ ರಾಜ್ಯ ಒಡೆಯುತ್ತಿದೆ ಎನ್ನುವ ಆತಂಕ ಎದುರಾಗುತ್ತಿದೆ ಎಂದರು.
ಭುವನಗಿರಿ ದೇವಾಲಯದ ಅಧ್ಯಕ್ಷ ವಿ.ಎಸ್.ಹೆಗಡೆ ಸಾತನಕೇರಿ ಅಧ್ಯಕ್ಷತೆವಹಿಸಿದ್ದರು. ತಹಸೀಲ್ದಾರ ಡಿ.ಜಿ.ಹೆಗಡೆ ಉಪಸ್ಥಿತರಿದ್ದರು.
ಸನ್ಮಾನ: ಮಾತೃವಂದನಾ ದಶಮಾನ ಸಂಭ್ರಮ ಸಮಿತಿಯಿಂದ ವಿದ್ವಾಂಸ ಅನಂತ ಶರ್ಮಾ ಭುವನಗಿರಿ, ಸಾಹಿತಿ ಡಾ.ಆರ್.ಪಿ.ಹೆಗಡೆ ಸೂಳಗಾರ, ಪ್ರಶಾಂತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಜಿ.ಪೈ. ಮಂಜೈನ್, ಸಂಸ್ಕøತಿ ಸಂಪದದ ರೂವಾರಿ ವಿಜಯ ಹೆಗಡೆ ದೊಡ್ಮನೆ, ಸಂಶೋಧಕ ವಿಶ್ವೇಶ್ವರ ಹೆಗಡೆ ಅತ್ತಿಮುರ್ಡು, ಯಕ್ಷಗಾನ ವೇಷ ಭೂಷಣ ತಯಾರಕ ವಿಶ್ವನಾಥ ಶೇಟ್ ಹಾರ್ಸಿಕಟ್ಟಾ, ವಿಶ್ರಾಂತ ಶಿಕ್ಷಕ ಮಂಜುನಾಥ ಮಾಸ್ತರ್ ಕಲ್ಲೇಮಕ್ಕಿ, ಸೇವಾ ಸಂಕಲ್ಪ ಟ್ರಸ್‍ನ ಪಿ.ಬಿ.ಹೊಸೂರು, ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್, ಯಕ್ಷಗಾನ ಕಲಾವಿದ ಕೃಷ್ಣಾ ಜಿ. ಬೇಡ್ಕಣಿ ಇವರನ್ನು ಸನ್ಮಾನಿಸಲಾಯಿತು.
ಶ್ರೀರಕ್ಷಾ ಹೆಗಡೆ ಸಿದ್ದಾಪುರ ಯಕ್ಷನೃತ್ಯ ಪ್ರದರ್ಶಿಸಿದಳು. ಭಾರತಿ ಭಟ್ಟ ಸಂಗಡಿಗರಿಂದ ಪ್ರಾರ್ಥನೆ, ಪ್ರಶಾಂತಿ ವಿದ್ಯಾಕೇಂದ್ರದ ವಿದ್ಯಾರ್ಥಿನಿಯರು ರೈತಗೀತೆ,ನಿವೇದಿತಾ ಮಹಿಳಾ ಮಂಡಳ ಸಿದ್ದಾಪುರ ಇವರು ಕನ್ನಡ ಗೀತೆ ಹಾಡಿದರು.
ಕಾರ್ಯಕ್ರಮದ ಪೂರ್ವದಲ್ಲಿ ಭುವನೇಶ್ವರಿ ಮಾತೆಗೆ ಪೂಜೆ ಹಾಗೂ ಕನ್ನಡ ಧ್ವಜಾರೋಹಣ ನಡೆಯಿತು.
ಜಯರಾಮ ಭಟ್ಟ ಗುಂಜಗೋಡ ಸ್ವಾಗತಿಸಿದರು. ವಿ.ಶೇಷಗಿರಿ ಭಟ್ಟ ಗುಂಜಗೋಡ ವೇದಘೋಷ ಮಾಡಿದರು. ಕೆಕ್ಕಾರ ನಾಗರಾಜ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಎ.ಪಿ.ಭಟ್ಟ ಮುತ್ತಿಗೆ ಪರಿಚಯಿಸಿದರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿದರು., ಪ್ರೊ.ಪ್ರಶಾಂತ ಹೆಗಡೆ ವಂದಿಸಿದರು.

loading...

LEAVE A REPLY

Please enter your comment!
Please enter your name here