ಮನುಷ್ಯನ ಬದುಕೇ ಒಂದು ರೀತಿಯ ಜಾನಪದ: ಡಾ. ರಾಜಶೇಖರ ಜಮದಂಡಿ

0
24
loading...

29Dandelijpg1ದಾಂಡೇಲಿ; ಮನುಷ್ಯನ ಬದುಕೇ ಒಂದು ರೀತಿಯ ಜಾನಪದ. ಜಾನಪದವಿಲ್ಲದ ಬದುಕಿಲ್ಲ. ಜಾನಪದಲ್ಲಿ ಯಾವುದೂ ಇಲ್ಲ ಎಂಬುವುದಿಲ್ಲ. ಎಲ್ಲವೂ ಇದೆ. ಅದೊಂದು ಸಾಗರ. ಅದು ಬರಿದಾಗಲು ಸಾಧÀ್ಯವೇ ಇಲ್ಲ. ಆದರೆ ಅಂತಹ ಜಾನಪದ ಇಂದಿನ ಆಧುನಿಕ ಜೀವನ ವ್ಯವಸ್ಥೆಯಲ್ಲಿ ಅವಜ್ಞೆಗೊಳಗಾಗುತ್ತಿರುವುದೇ ವಿಷಾದದ ಸಂಗತಿ ಎಂದು ಜಾನಪದ ವಿಶ್ವ ವಿದ್ಯಾಲಯದ ಜೋಯಿಡಾ ಅಧ್ಯಯನ ಕೇಂದ್ರದ ಯೋಜನಾ ಸಹಾಯಕರಾದ ಸಾಹಿತಿ ಡಾ. ರಾಜಶೇಖರ ಜಮದಂಡಿ ಕಳವಳ ವ್ಯಕ್ತಪಡಿಸಿದರು.

ಅವರು ಕೆ.ಡಿ.ಸಿ.ಸಿ ಕಾರವಾರ ಹಾಗೂ ಆಶಾಕಿರಣ ಗ್ರಾಮೀಣ ಖಾಸಗಿ ಕೈಗಾರಿಕಾ ಸಂಸ್ಥೆ ಅಂಬೇವಾಡಿ ಹಾಗೂ ಕರ್ನಾಟಕ ಜನಪದ ವಿಶ್ವ ವಿದ್ಯಾಲಯದ ಜೋಯಿಡಾ ಪ್ರಾದೇಶಿಕ ಅಧ್ಯಯನ ಕೇಂದ್ರದ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಜಾನಪದ ಒಂದು ಪರಿಚಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಜಾನಪದ ಇದು ನಿಂತ ನೀರಲ್ಲ, ಅದು ನಿರಂತರವಾಗಿ ಹರಿಯುವ ನದಿ, ಅದು ಬರಿದಾಗದ ಸಾಗರ, ನಮ್ಮ ಜಾನಪದ ವಿಶೇಷವಾಗಿ ಹಳ್ಳಿಗಳಲ್ಲಿ ಇನ್ನೂ ಜಿವಂತವಾಗಿದೆ. ಹಳ್ಳಿಗಳ ಜೀವನ ವ್ಯವಸ್ಥೆ, ಹಬ್ಬ ಹರಿದಿನಗಳು ಎಲ್ಲವೂ ಕೂಡಾ ಜನಪದೀಯವಾಗಿರುತ್ತದೆ. ಅಂತಹ ಜಾನಪದವನ್ನು ಉಳಿಸಿ ಬೆಳೆಸಬೇಕಾಗಿದೆ. ಆ ಸದುದ್ಧೇಶದಿಂದಲೇ ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾನಪದ ವಿಶ್ವ ವಿದ್ಯಾಲಯ ಹಾವೇರಿಯಲ್ಲಾಗಿದ್ದು, ಜೋಯಿಡಾದಲ್ಲಿ ಅದರ ಪ್ರಾದೇಶಿಕ ಅಧ್ಯಯನ ಕೇಂದ್ರ ಆರಂಭಿಸಲಾಗಿದೆ. ಜನಪದ ಆಸಕ್ತರು, ಕಲಾವಿದರು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಬಿ.ಎನ್. ವಾಸರೆಯವರು ಮನುಷ್ಯನ ಬದುಕು ಜಾನಪದದ ಜೊತೆಗೆ ಬೆಸದುಕೊಂಡಿದೆ. ನಗರ ಸಂಸ್ಕøತಿಯಿಂದ ಜಾನಪದ ನಶಿಸುತ್ತಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದ್ದು, ನಮ್ಮ ಜನಪದೀಯರು ಬಿಟ್ಟು ಹೋದ ಜಾನಪದವನ್ನು ಉಳಿಸಿ, ಬೆಳೆಸಿಕೊಳ್ಳಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಸಾಹಿತಿ, ಉಪನ್ಯಾಸಕ ನಾಗರೇಖಾ ಗಾಂವಕರವರು ನಮ್ಮ ಬದುಕೇ ಜನಪದ ಜನ್ಯವಾದುದು. ಗ್ರಾಮೀಣ ಭಾಗದಲ್ಲಿಯ ಜಾನಪದದ ಸೊಗಡು ನಗರದಲ್ಲಿ ಕಾಣಸಿಗುವುದಿಲ್ಲ. ಜಾನಪದದ ಚಂದವನ್ನು ನಾವು ಇಂದಿನ ಪೀಳಿಗೆಗೆ ಹೇಳಿಕೊಡಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಶಾಕಿರಣ ಐಟಿಐ ಕಾಲೇಜಿನ ಪ್ರಾಚಾರ್ಯ ಎನ್. ಆರ್. ನಾಯ್ಕರವರು ಜನಪದವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಜನಪದ ವಿಶ್ವ ವಿದ್ಯಾಲಯ ನಿರ್ವಹಿಸುತ್ತಿರುವ ಕಾರ್ಯ ಶ್ಲಾಗಿಸಿ, ಜಾನಪದ ಹಾಡು ಹೇಳಿ ರಂಜಿಸಿದರು.

ಜಾನಪದ ವಿಶ್ವ ವಿದ್ಯಾಲಯದ ಕೆ. ಬಾಲಚಂದ್ರ ನಾಯಕ ಪ್ರಾಸ್ತಾವಿಕ ಮಾತನಾಡಿದರು. ಆಶಾಕಿರಣ ಐ.ಟಿ.ಐ ಕಾಲೇಜಿನ ಜಿ.ಎಸ್. ಜೋಷಿ ಸ್ವಾಗಿತಿಸಿದರು. ಪ್ರಾನ್ಸಿಸ್ ಪಿಂಟೋ ನಿರೂಪಿಸಿದರು. ವಿದ್ಯಾರ್ಥಿಗಳು ಜಾನಪದ ಗೀತೆಗಳನ್ನು ಹಾಡಿದರು.

loading...

LEAVE A REPLY

Please enter your comment!
Please enter your name here