ಮಿತ ಮಾಲಿನ್ಯದ ಒಲೆಯ ಸಂಶೋಧ

0
31
loading...

19srs1ಶಿರಸಿ,21: ಹೆಚ್ಚುತ್ತಿರುವ ಮಾಲಿನ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಇಲ್ಲಿನ ಗಣೇಶನಗರ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡ ಮಿತ ಮಾಲಿನ್ಯದ ಬಡವರ ಒಲೆಯ ಸಂಶೋಧನಾ ಮಾದರಿ ಸಿದ್ಧಪಡಿಸಿದ್ದಾರೆ. ಶಾಲೆಯ ವಿಜ್ಞಾನ ಶಿಕ್ಷಕ ಕೆ.ಎಲ್.ಭಟ್ಟ ಹಾಗೂ ಮುಖ್ಯ ಶಿಕ್ಷಕ ಎಂ.ಎಚ್.ನಾಯ್ಕ ಮಾರ್ಗದರ್ಶನದಲ್ಲಿ ಇಂಥದ್ದೊಂದು ಪೇಟೆಂಟ್ ಮಾದರಿಯನ್ನು ಸಿದ್ಧಪಡಿಸಿದ್ದಾರೆ.

ಗಣೇಶನಗರ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ಸಂಗಮೇಶ ಸಂಗೂರಮಠ, ಮಂಜುನಾಥ ಭೋವಿವಡ್ಡರ್, ಪವನ ಭೋವಿವಡ್ಡರ್, ಸಂತೋಷ ಖಾಗಳ ಮತ್ತು ಗಣೇಶ ಆಚಾರಿ ತಂಡ ಸಮಾಜಕ್ಕೆ ಕೊಡುಗೆಯಾಗುವಂತೆ ಈ ಮಾದರಿಯನ್ನು ತಯಾರಿಸಿದೆ. `ಉರುವಲು ಬಳಸಿ ಅಡುಗೆ ಮಾಡುವ ಸಂದರ್ಭದಲ್ಲಿ ಒಲೆಯ ಅಕ್ಕಪಕ್ಕದ ಕಟ್ಟೆ ಕಾಯ್ದು ನಷ್ಟವಾಗುವ ಶಾಖದಿಂದಲೇ ಸ್ನಾನಕ್ಕೆ ಬಿಸಿನೀರು ಪಡೆಯುವ ತಂತ್ರಜ್ಞಾನ’ ಈ ಮಾದರಿಯ ವಿಶೇಷತೆ.

ಹೀಗೆ ಉಂಟಾದ ಬಿಸಿ ನೀರು ದಿನದ 24 ಗಂಟೆಗಳಲ್ಲಿ ಬಳಸಿಕೊಳ್ಳುವ ವ್ಯವಸ್ಥೆ ಕೂಡ ಮಾಡಲಾಗಿದೆ. ಈ ಕುರಿತು ಮಾಹಿತಿ ನೀಡಿದ ಕೆ.ಎಲ್.ಭಟ್ಟ ಅವರು `ಚೌಕಟ್ಟಿನ ರೀತಿಯಲ್ಲಿ ಬಿಸಿನೀರಿನ ಕಾಯಿಲ್ ವ್ಯವಸ್ಥೆ ಮಾಡಿ ಅದರಲ್ಲಿ ತಣ್ಣೀರು ಸಂಚರಿಸುವಂತೆ ಮಾಡಲಾಗಿದೆ. ಈ ಕಾಯಿಲ್ ಚೌಕಟ್ಟನ್ನು ಇಟ್ಟಿಗೆ ಕಟ್ಟೆಯ ಮೇಲೆ ಇಟ್ಟುಅಡುಗೆಗೆ ಪೂರಕವಾದ ಹಂಚಿನ ಒಲೆಯನ್ನು ಕಾಯಿಲ್ ಚೌಕಟ್ಟಿನ ಮೇಲೆ ಕ್ಯಾಪ್‍ನಂತೆ ಹಾಕಲಾಗುತ್ತದೆ. ಹಂಚಿನ ಒಲೆಗೆ ಹೊಗೆ ಪೈಪ್ ಅಳವಡಿಸುವ ಮೂಲಕ ಕೆಳಗಿನಿಂದ ವಿಫುಲ ಗಾಳಿ ಬರುವ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಸಂಪೂರ್ಣ ದಹನ ಕ್ರಿಯೆ ನಡೆಯುತ್ತದೆ. ಜೊತೆಗೆ ಹೊರಹೋಗುವ ಹೊಗೆಯ ಶಾಖವು ಮತ್ತೊಮ್ಮೆ ಕಾಯಿಲ್ ಬಿಸಿ ಮಾಡುವಂತೆ ಮಾಡುತ್ತದೆ.

ಸಾಮಾನ್ಯವಾಗಿ 4 ಜನ ಇರುವ ಮನೆಯೊಂದಕ್ಕೆ ಅಡುಗೆಗೆ ಕನಿಷ್ಠ 3 ಕೆಜಿ ಉರುವಲು ಮತ್ತು ಸ್ನಾನಕ್ಕೆ 5 ಕೆಜಿ ಉರುವಲು ಬೇಕಾಗುತ್ತದೆ. ಇವುಗಳ ದಹನ ಕ್ರಿಯೆಯಿಂದ ಬಿಡುಗಡೆಯಾಗುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ 13 ಕೆಜಿ ಆದರೆ ಅಡುಗೆ ಮಾಡುತ್ತಿರುವಾಗಲೆ ಬಿಸಿ ನೀರು ಪಡೆಯುವ ವಿಧಾನ ಅಳವಡಿಸಿಕೊಂಡಿದ್ದರಿಂದಾಗಿ ಕೇವಲ 5 ಕೆಜಿ ಕಾರ್ಬನ್ ಡೈ ಆಕ್ಸೈಡ್ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಇದರಿಂದ ದಿನಕ್ಕೆ 5 ಕೆಜಿ ಉರುವಲು ಉಳಿಸಿ ಆರ್ಥಿಕ ಮಿತವ್ಯಯದ ಜೊತೆಗೆ ದಿನವೊಂದಕ್ಕೆ 8 ಕೆಜಿಯಷ್ಟು ಮಾಲಿನ್ಯ ಕಡಿಮೆಮಾಡಬಹುದು.

ಈ ಒಲೆಯಲ್ಲಿ ಉಂಟಾದ ಬಿಸಿನೀರನ್ನು ಸೋಲಾರ್ ಟ್ಯಾಂಕ್ ತರಹದ ಒಂದು ಟ್ಯಾಂಕನಲ್ಲಿ ಸಂಗ್ರಹಿಸುವಂತೆ ವಿಶೇಷ ಗೀಜರ್ ಟ್ಯಾಂಕ್ ರೂಪಿಸಲಾಗಿದ್ದು, ಬಿಸಿನೀರು ಸಂಗ್ರಹವಾಗುವ ಟ್ಯಾಂಕಿಗೆ ಬಿಳೆಹುಲ್ಲನ್ನು ಹೊಸೆದು ಇನ್ನೊಂದು ಟ್ಯಾಂಕನಿಂದ ಕವರ್ ಮಾಡಿರುವುದರಿಂದ ಬಿಸಿನೀರು ತಣ್ಣಗಾಗದಂತೆ ಇರುತ್ತದೆ. ಈ ಕಾಯಿಲ್ ಚೌಕಟ್ಟನ್ನು ಅಸ್ತ್ರಒಲೆ, ಮಣ್ಣಿನ ಒಲೆ, ಬಚ್ಚಲ ಒಲೆ ಹೀಗೆ ಯಾವುದೇ ರೀತಿಯ ಒಲೆಗೂ ಅಳವಡಿಸಿಕೊಂಡು ಬಳಸಬಹುದು. ಒಂದು ಮನೆಗೆ 2 ಸಾವಿರ ರೂಪಾಯಿ ವೆಚ್ಚದಲ್ಲಿ ಈ ವ್ಯವಸ್ಥೆ ಮಾಡಿಕೊಳ್ಳಬಹುದು ಎಂದು ಹೇಳಿದರು.

ಮಿತ ಮಾಲಿನ್ಯದ ಜೊತೆಗೆ ಮಿತ ಉರುವಲು ಬಳಕೆಯಾಗುತ್ತದೆ. ನಿರ್ವಹಣೆ ಸುಲಭ ಮತ್ತು ಕಡಿಮೆ ವೆಚ್ಚದಾಯಕ ಹಾಗೂ ಅಡುಗೆ ಮಾಡುವಾಗಲೇ ಉಂಟಾದ ಬಿಸಿನೀರಿನ ಬಳಕೆ ಇಡೀ ದಿನ ಸಾಧ್ಯವಿದೆ. ರಿಪೇರಿಗೆ ಸುಲಭವಾಗಿ ಕಳಚಿ ಒಯ್ಯಬಹುದು. ಬಚ್ಚಲ ಒಲೆಯ ಹಂಡೆಗೂ ಈ ಜೋಡಣೆ ಮಾಡಬಹುದು. ನಶಿಸಿ ಹೋಗುತ್ತಿರುವ ಮಣ್ಣಿನ ಒಲೆಯ ಗುಡಿಕೈಗಾರಿಕೆಗೆ ಕಾಯಕಲ್ಪವಾಗಬಹುದಾಗಿದೆ ಎಂದು ಮಾದರಿ ಸಂÉೂೀಧಿಸಿದ ವಿದ್ಯಾರ್ಥಿಗಳು ಹೇಳುತ್ತಾರೆ.

loading...

LEAVE A REPLY

Please enter your comment!
Please enter your name here