ಮುಖ್ಯಮಂತ್ರಿಯ ಅಸಂಬದ್ದ ಹೇಳಿಕೆ ಖಂಡಿಸಿ ಬಿಜೆಪಿ: ಮನವಿ

0
21
loading...

2bkl3

ಭಟ್ಕಳ,3: ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಅವರ ಮಂತ್ರಿ ಮಂಡಲದ ಸಚಿವರು ದಿನಕ್ಕೊಂದು ಅಸಂಬದ್ಧ ಹೇಳಿಕೆ ನೀಡುತ್ತ ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡುತ್ತಿರುವದನ್ನು ಖಂಡಿಸಿ, ಪ್ರತಿಬಟನೆ ನಡೆಸಿ ಸಹಾಯಕ ಆಯುಕ್ತರಿಗೆ ಮನವಿ ನೀಡಿದ್ದಾರೆ.

ಭಾರತವೂ ಇಡೀ ವಿಶ್ವದಲ್ಲಿಯೇ ಪ್ರಜಾಪ್ರಭುತ್ವ ಹೊಂದಿರುವ ಅತಿ ದೊಡ್ಡ ದೇಶ. ಆಹಾರ ಪದ್ಧತಿಯಲ್ಲಿ, ಭಾಷೆ, ವೇಷ, ಧಾರ್ಮಿಕ ಆಚರಣೆ ಇವುಗಳು ಕೂಡ ಪ್ರಾದೇಶಿಕವಾರು, ಪ್ರಾಂತವಾರು ಭಿನ್ನವಾಗಿದೆ. ಈ ದೇಶದಲ್ಲಿ ಅಭಿವ್ಯಕ್ತ ಸ್ವಾತಂತ್ರ್ಯ, ವ್ಯಕ್ತಿ ಸಾತಂತ್ರ್ಯ, ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಹೀಗಿರುವಲ್ಲಿ ಅಹಿಂದ ಮಂತ್ರ ಪಠಿಸುತ್ತ ಕರ್ನಾಟಕದ ರಾಜ್ಯದ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಅವರ ಮಂತ್ರಿ ಮಂಡಲದ ಸಚಿವರು ದಿನಕ್ಕೊಂದು ಅಸಂಬದ್ಧ ಹೇಳಿಕೆ ನೀಡುತ್ತ ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡುತ್ತಿದ್ದಾರೆ.

ಈ ದೇಶದ ಬಹುಸಂಖ್ಯಾತ ಹಿಂದುಗಳು ದೇವರಂತೆ ಪೂಜಿಸುವ ಗೋಮಾತೆ ‘ಮಾಂಸ ಬಕ್ಷಣೆ ಮತ್ತು ಗೋ ಹತ್ಯೆ ನಿಷೇಧ’ದ ಕುರಿತಂತೆ ಬಿಸಿ ಬಿಸಿ ಚರ್ಚೆ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವಾಗ ಜವಾಬ್ಧಾರಿಯುತ ಸ್ಥಾನದಲ್ಲಿರುವ ಈ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಾನು “ಗೋಮಾಂಸ ಬಕ್ಷಣೆ ಮಾಡುತ್ತೇನೆ” ಎಂದು ಹೇಳುವ ಮೂಲಕ ಬಹು ಸಂಖ್ಯಾತ ಹಿಂದುಗಳ ಭಾವನೆಗೆ ದಕ್ಕೆ ತರುವಂತ ಹೇಳಿಕೆ ನೀಡಿರುತ್ತಾರೆ .ಈ ಹೇಳಿಕೆ ಖಂಡಿಸಿ ಸಹಾಯಕ ಆಯುಕ್ತ ಚಿದಾನಂದ ವಟಾರೆ ಇವರಿಗೆ ಮನವಿ ನೀಡಿ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದಿ ರಾಜ್ಯಪಾಲರಲ್ಲಿ ಬಿಜೆಪಿ ಆಗ್ರಹಿಸಿದೆ.
ಈ ಸಂದರ್ಬದಲ್ಲಿ ಗೋವಿಂದ ನಾಯ್ಕ, ಪರಮೇಶ್ವರ ದೇವಾಡಿಗ, ವಿನೋದ ಕೊಪ್ಪಿಕರ, ವೆಂಕಟೇಶ ನಾಯ್ಕ, ಸುಬ್ರಾಯ ದೇವಡಿಗ, ಪ್ರಮೋದ ಜೋಶಿ, ಲಕ್ಷ್ಮಣ ನಾಯ್ಕ, ಮೋಹನ ದೇವಡಿಗ ವಿಷ್ಣುಮೂರ್ತಿ ಭಟ್ ಸೇರಿದಂತೆ ಇತರರು ಇದ್ದರು.

loading...

LEAVE A REPLY

Please enter your comment!
Please enter your name here