ಮುಖ್ಯಮಂತ್ರಿ ಹೇಳಿಕೆ ವಿರೋಧಿಸಿ ಬಿಜೆಪಿ ಘಟಕದಿಂದ ಪ್ರತಿಭಟನೆ

0
16
loading...

 

ಯಲ್ಲಾಪುರ,3 : ಗೋಮಾಂಸ ತಿನ್ನುವುದಾಗಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಸೋಮವಾರ ಬಿಜೆಪಿ ತಾಲೂಕಾ ಘಟಕದಿಂದ ಪ್ರತಿಭಟನೆ ನಡೆಯಿತು.
ಪಟ್ಟಣದಅಂಬೇಡ್ಕರ ವೃತ್ತದ ಬಳಿ ಸರ್ಕಾರಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು, ಪ್ರತಿಭಟನಾಕಾರರನ್ನು ಉದ್ದೇಶಿಸಿ ಬಿಜೆಪಿ ತಾಲೂಕಾ ಅಧ್ಯಕ್ಷ ರಾಘವೇಂದ್ರ ಭಟ್ಟಮಾತನಾಡಿ ಹಿಂದೂಗಳ ಭಾವನೆಯನ್ನು ಕೆರಳುವಂತೆ ಸಿದ್ದರಾಮಯ್ಯ ಹೇಳಿಕೆ ನೀಡುತ್ತಿರುವುದು ಆಘಾತಕಾರಿ, ರಾಜ್ಯದ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ.ಜವಾಬ್ದಾರಿಯುತಸ್ಥಾನದಲ್ಲಿದ್ದು ಇಂತಹ ಹೇಳಿಕೆ ನೀಡುತ್ತಿರುವದನ್ನು ಬಿಜೆಪಿ ಖಂಡಿಸುತ್ತದೆ ಎಂದರು, ಬಿಜೆಪಿ ಪ್ರಮುಖ ರಾಮು ನಾಯ್ಕ ಮಾತನಾಡಿ ಆಹಾರ ಪದ್ಧತಿ ಅವರ ವೈಯಕ್ತಿತ ವಿಚಾರ ಆದರೆ ಈ ರೀತಿ ಭಹಿರಂಗ ಹೇಳಿಕೆ ನೀಡಿರುವುದು ಜನರ ಭಾವನೆ ಗಳಿಗೆ ಧಕ್ಕೆಯುಂಟು ಮಾಡಿದೆ ಎಂದರು, ರಾಜ್ಯದಲ್ಲಿ ಎಲ್ಲ ಧರ್ಮಗಳ ಜನರಿದ್ದಾರೆ.ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಯಾವುದೋ ಒಂದು ಧರ್ಮವನ್ನು ಓಲೈಸಲು ಇನ್ನೋಂದು ಧರ್ಮದ ಭಾವನೆಗಳನ್ನು ಮುಖ್ಯಮಂತ್ರಿಗಳು ಕೆದಕುತ್ತಿದ್ದಾರೆ.ಗೋಮಾತೆಯನ್ನು ದೇಶದ ಬಹುಸಂಖ್ಯಾತ ಹಿಂದುಗಳು ಸಾಕಿ ಪೂಜಿಸುತ್ತಾ ಬಂದಿದ್ದಾರೆ.ದನಗಳು ರೈತನ ದಿನನಿತ್ಯದ ಕೃಷಿ ಚಟುವಟಿಕೆಗಳಿಗೆ
ಮೂಲಾಧಾರವು,ಹಾಲಿನ ಉತ್ಪನ್ನಗಳಂತೂ ಎಲ್ಲರಿಗೂ ಅವಶ್ಯವಿದೆ.ಇಂತಹ ಪವಿತ್ರ ಹಿಂದುಗಳ ಶೃದ್ಧಾ ಗೋಮಾತೆಯ ಬಗ್ಗೆ ಮುಖ್ಯಮಂತ್ರಿಗಳು ಬೇಜವಾಬ್ದಾರಿಯ ಮಾತುಗಳನ್ನು ಹಿಂತೆಗೆದುಕೋಳ್ಳಬೇಕು.ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಹಿಂದಿನ
ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ತಂದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೋಳಿಸಬೇಕು.ಮುಖ್ಯಮಂತ್ರಿಗಳು ಇಂತಹ ಹೇಳಿಕೆಗಳನ್ನು ನೀಡುವುದನ್ನು ಬಿಟು ್ಟ ರಾಜ್ಯದ ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳಾದ ವಸತಿ,ವಿದ್ಯುತ್, ರಸ್ತೆ,ನೀರನ್ನು ಒದಗಿಸಲು ಗಮನ ಹರಿಸಲಿ ಎಂದು ಈ ಮೂಲಕ ನಾವು ಆಗ್ರಹಿಸುತ್ತೇವೆ ಎಂದರು ನಂತರ ತಹಶಿಲ್ದಾರ ಕಛೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲಕರಿಗೆ ಮನವಿಸಲ್ಲಿಸಿದರು , ,ಬಿ ಜೆ.ಪಿತಾಲೂಕಾ ಮಂಡಳಕಾರ್ಯದರ್ಶಿಗಳಾದ ಸುಬ್ಬಣ್ಣ ಬೋಳ್ಮನೆ,ನಾರಾಯಣ ನಾಯಕ,ಯೊಗೇಶ ಹಿರೇಮಠ, ಗಣಪತಿ ಬೋಳಗುಡ್ಡೆ ಮುಂತಾದವರು ಉಪಸ್ಥಿತರಿದ್ದರು ಗ್ರೇಡ್-2 ತಹಸೀಲ್ದಾರ ಡಿ. ಜಿ. ಭಟ್ಟ ಮನವಿ ಸ್ವೀಕರಿಸಿದರು

loading...

LEAVE A REPLY

Please enter your comment!
Please enter your name here