ಮೊಹನ ತರಂಗಿಣಿ ಒಂದು ತೌಲನಿಕ ಅಧ್ಯಯನ ಗ್ರಂಥ: ಶಿವಾನಂದ ಕೆಳಗಿನಮನಿ

0
103
loading...

3rnr1
ರಾಣಿಬೆನ್ನೂರು ,3;- ಕನಕದಾಸರು ರಚಿಸಿರುವ ನೃಸಿಂಹಸ್ತವ, ರಾಮಧಾನ್ಯ ಚರಿತ್ರೆ, ನಳ ಚರಿತ್ರೆ, ಹರಿ ಭಕ್ತಿಸಾರ, ಮೊಹನ ತರಂಗಿಣಿ ಗ್ರಂಥಗಳನ್ನು ಹಾಗೂ ಕೀರ್ತನೆಗಳನ್ನು, ಮುಂಡಿಗೆಗಳನ್ನು ಭಕ್ತಿ ಪೂರ್ವಕವಾಗಿ ಅಧ್ಯೆಯನ ಮಾಡಿ ಈ ಎಲ್ಲಾ ಗ್ರಂಥ, ಕೀರ್ತನೆ ಮುಂಡಿಗೆಗಳಲ್ಲಿ ಅಡಗಿರುವ ಭಕ್ತಿ ಸಾರವನ್ನೆಲ್ಲಾ ಒಂದೆಡೆ ಸಂಗ್ರಹಿಸಿಕೊಂಡಿರುವ ಅತ್ಯಂತ ಮಹತ್ವದ ಗ್ರಂಥವೆಂದರೆ, ಡಾ|| ಕೆ. ಎಚ್. ಮುಕ್ಕಣ್ಣನವರ, ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾಗಿರುವ ಡಾ| ಶಿವಾನಂದ ಗಾಳಿ ಇವರ ಮಾರ್ಗದರ್ಶನದಲ್ಲಿ ಕನಕದಾಸರ ಕೃತಿಗಳಲ್ಲಿ ಒಂದಾದ, ಮೋಹನ ತರಂಗಿಣಿ ಗ್ರಂಥದ ಕುರಿತು ಅದ್ಯಯನ ನಡೆಸಿರುವ ಡಾ| ಕೆ ಎಚ್ ಮುಕ್ಕಣ್ಣನವರ ರಚಿಸಿರುವ, ಮೊಹನ ತರಂಗಿಣಿ ಒಂದು ತೌಲನಿಕ ಅಧ್ಯಯನ ಎಂಬ ಗ್ರಂಥ ಅತ್ಯಂತ ಶ್ರೇಷ್ಠ ಗ್ರಂಥಗಳಲ್ಲಿ ಒಂದಾಗಿದೆ ಎಂದು ಶಿವಮೊಗ್ಗ ಶಂಕರಘಟ್ಟ ಕನ್ನಡ ಭಾರತಿ ಕುವೆಂಪು ವಿಶ್ವ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ| ಶಿವಾನಂದ ಕೆಳಗಿನಮನಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾವೇರಿ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ರಾಣಿಬೆನ್ನೂರು ಸಂಯುಕ್ತಾಶ್ರಯದಲ್ಲಿ ಮಂಗಳವಾರ ಇಲ್ಲಿನ ತಾಲೂಕಾ ಕಸಾಪ ಭವನದಲ್ಲಿ, ಕಸಾಪ ಆಜೀವ ಸದಸ್ಯರಾಗಿದ್ದ ನಿವೃತ್ತ ಶಿಕ್ಷಕ ದಿ| ಪಿ ಎಸ್ ಬಣಕಾರ ಒಂದು ನೆನಪು ಕಾರ್ಯಕ್ರಮದಲ್ಲಿ, ಡಾ|| ಕೆ. ಎಚ್. ಮುಕ್ಕಣ್ಣನವರ ಕನಕದಾಸರ ಕೃತಿಗಳಲ್ಲಿ ಒಂದಾದ ಮೂಹನ ತರಂಗಿಣಿ ಗ್ರಂಥದ ಕುರಿತು ಅದ್ಯಯನ ನಡೆಸಿ, ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪಿ ಹೆಚ್ ಡಿ ಪದವಿ ಪಡೆದ, ಮೊಹನ ತರಂಗಿಣಿ ಒಂದು ತೌಲನಿಕ ಅಧ್ಯಯನ ಎಂಬ ಗ್ರಂಥ ಲೋಕಾರ್ಪಣೆಗೊಂಡಿದ್ದು, ಲೋಕಾರ್ಪಣೆಗೊಂಡಿರುವ ಗ್ರಂಥವನ್ನು ನಾಡಿನ ಜನತೆಗೆ ಅವರು ಪರಿಚಯಿಸಿದರು.
ಕನಕದಾಸರ ಕೃತಿಗಳಲ್ಲಿ ಮೊಹನ ತರಂಗಿಣಿ ತನ್ನದೆ ಆದ ವಿಶಿಷ್ಠ ಸ್ಥಾನಮಾನ ಪಡೆದಿದ್ದು ಅದೊಂದು ಬೃಹತ್ ಕಾವ್ಯ, ಡಾ| ಕೆ ಎಚ್ ಮುಕ್ಕಣ್ಣನವರ ಅಂಥಹ ಬೃಹತ್ ಕಾವ್ಯದಮೇಲೆ ವಿಶ್ಲೇಷಣಾತ್ಮಕ ಅದ್ಯಯನ ನಡೆಸಿ, ಕೃತಿಯ ಮೇಲೆ ಬೆಳಕು ಚೆಲ್ಲುವುದಕ್ಕಾಗಿ ಡಾ| ಕೆ ಎಚ್ ಮುಕ್ಕಣ್ಣನವರ ರಚಿಸಿರುವ ಮೊಹನ ತರಂಗಿಣಿ ಒಂದು ತೌಲನಿಕ ಅಧ್ಯಯನ ಗ್ರಂಥ ಎಲ್ಲರೂ ಮೆಚ್ಚುವಂತಹದ್ದಾಗಿದೆ. ನಾಡಿನ ಇತರೆ ಜಾತಿ ಜನಾಂಗದವರೆಲ್ಲಾ ಕನಕದಾಸರನ್ನು, ಅವರು ರಚಿಸಿರುವ ಭಕ್ತಿ ಮಾರ್ಗದ ಗ್ರಂಥಗಳನ್ನು, ಮುಂಡಿಗೆಗಳನ್ನು, ಕಿರ್ತನೆಗಳನ್ನು ಹೇಗೆ ಮೆಚ್ಚಿಕೊಂಡಿದ್ದಾರೆ. ಕನಕದಾಸರೋಬ್ಬ ಜಾತ್ಯಾತೀತ ಗುರುವೆಂಬುದಕ್ಕೆ ಇರುವ ಸಾಕ್ಷಾಧಾರಗಳನ್ನು, ನ್ಯಾಯ ಸಮ್ಮತವಾದ ಧರ್ಮದ ತಳಹದಿಯಮೇಲೆ ಬಾಳಿ ಬದುಕಿದ್ದ ದಾಸಶ್ರೇಷ್ಠರಲ್ಲಿ ಕನಕದಾಸರು ಅಗ್ರ ಗಣ್ಯರೆಂದು ಗ್ರಂಥದಲ್ಲಿ ಉಲ್ಲೆಕಿಸುವಲ್ಲಿ ಮುಕ್ಕಣ್ಣನವರು ಶ್ರಮಿಸಿದ್ದಾರೆ.

ಕನಕದಾಸರ ಮಹತ್ವದ ಗ್ರಂಥಗಳನ್ನೆಲ್ಲಾ ಅತ್ಯೆಂತ ತಾಳ್ಮೆ,ಸಹನೆ ಮತ್ತು ಸಮಯದ ಹೊಂದಾಣಿಕೆ ಮಾಡಿಕೊಂಡು ಒಬ್ಬ ತಪಸ್ವಿಯಾಗಿ ಅದ್ಯೆಯನ ನಡೆಸಿ, ಮೊಹನ ತರಂಗಿಣಿ ಒಂದು ತೌಲನಿಕ ಅಧ್ಯಯನ ಎಂಬ ಅತ್ಯಂತ ಶ್ರೇಷ್ಠ ಗ್ರಂಥ ರಚಿಸುವುದರೊಂದಿಗೆ ಡಾ| ಕೆ ಎಚ್ ಮುಕ್ಕಣ್ಣನವರ ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಂಡಿದ್ದಾರೆಂದು ಪ್ರಾಧ್ಯಾಪಕ ಡಾ| ಶಿವಾನಂದ ಕೆಳಗಿನಮನಿ ಹೇಳಿದರು.
ಗ್ರಂಥ ಬಿಡುಗಡೆಗೊಳಿಸಿದ ಗೊಟಗೋಡಿಯ ಜಾನಪದ ವಿಶ್ವ ವಿದ್ಯಾಲಯದ ಪ್ರಭಾರಿ ಕುಲಪತಿಗಳಾದ ಡಾ| ಪ್ರೇಮಕುಮಾರ ಮಾತನಾಡಿ, ಶರಣ ಸಾಹಿತ್ಯ, ದಾಸ ಸಾಹಿತ್ಯಗಳ ಸಮ್ಮಿಲನವೇ ಜನಪದ ಸಾಹಿತ್ಯವಾಗಿದ್ದು. ಜನಪದ ಸಾಹಿತ್ಯಕ್ಕೂ ಶರಣ ಸಾಹಿತ್ಯಕ್ಕೂ ಅವಿನಾಭಾವ ಸಂಭದವುಂಟು. ನಾಡಿನ ಸಮಗ್ರ ಸಾಹಿತ್ಯವನ್ನೆಲ್ಲಾ ಒಂದೆಡೆ ಸಂಗ್ರಹಿಸಿದಂತಿದೆ ಡಾ| ಕೆ ಎಚ್ ಮುಕ್ಕಣ್ಣವರ ರಚಿಸಿರುವ ಈ ಗ್ರಂಥವೆಂದು ಹೇಳಿದರು. ಹಂಸಭಾವಿಯ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೋ, ಲಿಂಗರಾಜ ಕಮ್ಮಾರ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ| ಶಿವಾನಂದ ಗಾಳಿ, ಡಾ| ಭೋಜರಾಜ ಪಾಟೀಲ, ಹಾವೇರಿ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಅನಿತಾ ಗುಡಿ ಗ್ರಂಥದ ಕುರಿತು ಮಾತನಾಡಿದರು. ಆರ್‍ಟಿಇಎಸ್ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ| ರಾಮರಡ್ಡಿ ರಡ್ಡೇರ, ಎಸ್‍ಜೆಎಂ ಮಹಿಳಾ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರಾದ ಪ್ರೊ ಸಿ ಎನ್ ಜಗದೇವನವರ ಇವರುಗಳು, ಗ್ರಂಥ ಕತೃ ಡಾ| ಕೆ ಎಚ್ ಮುಕ್ಕಣನವರ ಮತ್ತು ಕಥೆಗಾರ ದಿ| ಪಿ ಎಸ್ ಬಣಕಾರ ಕುರಿತು ಮಾತನಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಜಿ ಬಿ ಮಾಸಣಗಿ ಅಧ್ಯಕ್ಷತೆ ವಹಿಸಿದ್ದರು, ತಾಲೂಕಾ ಕಸಾಪ ಅಧ್ಯಕ್ಷ ಶಿವಾನಂದ ಸಂಗಾಪುರ, ಡಾ| ಕೆ ಎಚ್ ಮುಕ್ಕಣ್ಣನವರ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರಭುಲಿಂಗಪ್ಪ ಹಲಗೇರಿ, ತಾಲೂಕಾ ಕಸಾಪ ಮಾಜಿ ಅಧ್ಯಕ್ಷ ವಾಸಣ್ಣ ಕುಸಗೂರ, ಎಂ ಬಿ ಹುಲಗಮ್ಮನವರ, ಶಿಕ್ಷಕ ಎಚ್ ಪಿ ಬಣಕಾರ ಸೇರಿದಂತೆ ಕಸಾಪ ಸದಸ್ಯರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಫೋಟೋ 3ಆರ್ ಎನ್ ಆರ್ 1;- ಡಾ| ಕೆ ಎಚ್ ಮುಕ್ಕಣ್ಣನವರ ರಚಿಸಿರುವ ಮೊಹನ ತರಂಗಿಣಿ ಒಂದು ತೌಲನಿಕ ಅಧ್ಯಯನ ಗ್ರಂಥದ ಬಿಡುಗಡೆಗೋಳಿಸುತ್ತಿರುವುದು.

loading...

LEAVE A REPLY

Please enter your comment!
Please enter your name here