ವಿಧಾನ ಪರಿಷತ್ ಚುನಾವಣೆ: ಮಾಜಿ ಸಚಿವ ಎಂ.ಸಿ. ಮನಗೂಳಿಗೆ ಜೆಡಿಎಸ್ ಟಿಕೇಟ್ ನೀಡಲು ಆಗ್ರಹ

0
21
loading...

ವಿಜಯಪುರ : ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಮಾಜಿ ಸಚಿವ ಎಂ.ಸಿ. ಮನಗೂಳಿ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂದು ಜಿಲ್ಲಾ ಜಾತ್ಯತೀತ ಜನತಾದಳ ಮುಖಂಡರು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.
ನಮ್ಮ ಪಕ್ಷದ ಅಭ್ಯರ್ಥಿಯಾಗಿ ಎಂ.ಸಿ. ಮನಗೂಳಿ ಅವರನ್ನು ಕಣಕ್ಕೆ ಇಳಿಸುವ ಮೂಲಕ ವಿಜಯಪುರ ಜಿಲ್ಲೆಗೆ ಪ್ರಾತಿನಿದ್ಯ ನೀಡಬೇಕು ಎಂದು ಅಲ್ಪಸಂಖ್ಯಾತ ರಾಜ್ಯ ಘಟಕದ ಉಪಾಧ್ಯಕ್ಷರಾದ ದಿಲಾವರ್ ಖಾಜಿ, ಕಾರ್ಮಿಕ ಘಟಕದ ಅಧ್ಯಕ್ಷ ಸತ್ತಾರ ಜಮಾದಾರ, ನಗರ ಉಪಾಧ್ಯಕ್ಷ ಎಂ.ಕೆ. ಬಾಗಾಯತ, ಜಿಲ್ಲಾ ಉಪಾಧ್ಯಕ್ಷೆ ಕೌಸರ ಶೇಖ, ದಾನಪ್ಪ ಕಟ್ಟಿಮನಿ, ಕಾಮತ್ ಸಿದ್ದು, ರಾಜು ಹಿಪ್ಪರಗಿ, ನಗರ ಅಧ್ಯಕ್ಷರಾದ ಗೋವಿಂದ ಜೋಶಿ ಅವರು ಆಗ್ರಹಿಸಿದ್ದಾರೆ.

loading...

LEAVE A REPLY

Please enter your comment!
Please enter your name here