ವಿಶೇಷ ಬಡ್ಡಿದರದಲ್ಲಿ ಸಾಲ ಸೌಲಭ್ಯ

0
32
loading...

6CKD5

ಚಿಕ್ಕೋಡಿ : ದಿ. ಬಿಡಿಸಿಸಿ ಬ್ಯಾಂಕ ನಿ. ಬೆಳಗಾವಿ ದೀಪಾವಳಿಗಾಗಿ ಕಾರ ಲೋನ್, ಬೈಕ್ ಖರೀದಿಸಲು ನ. 15 ರವರೆಗೆ ವಿಶೇಷ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿಡಿಸಿಸಿ ಬ್ಯಾಂಕಿನ ತಾಲೂಕಾ ನಿಯಂತ್ರಣಾಧಿಕಾರಿ ಡಿ.ಟಿ.ಕುಲಕರ್ಣಿ ಹೇಳಿದರು.

ತಾಲೂಕಿನ ಕೇರೂರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ದಿ. ಬಿಡಿಸಿಸಿ ಬ್ಯಾಂಕ ನಿ. ಬೆಳಗಾವಿ ಚಿಕ್ಕೋಡಿ ಶಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಬ್ಯಾಂಕಿನಿಂದ ಎಟಿಎಂ ಕಾರ್ಡ, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಯಶಸ್ವಿನಿ ವಿಮೆ, ಅಪಘಾತ ವಿಮೆಗಳ ಸೌಲಭ್ಯವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಶಾಖಾಧಿಕಾರಿ ಎ.ಬಿ.ಘೋರವಾಡೆ, ಬ್ಯಾಂಕ ನಿರೀಕ್ಷಕರಾದ ಎಂ.ಎಂ.ಕೋಟಗಿ, ಎ.ಎಸ್.ವಗ್ಯಾಗೋಳ, ಪಿ.ಡಿ.ನವಲೆ, ಮಲ್ಲಿಕಾರ್ಜುನ ಪಾಟೀಲ, ಜಿ.ಪಂ.ಸದಸ್ಯ ಮಲ್ಲಪ್ಪಾ ಬಾಗಿ, ಬ್ಯಾಂಕ ಸಿಬ್ಬಂದಿ, ಕೇರೂರ ಪಿಕೆಪಿಎಸ್ ಸಿಬ್ಬಂದಿ ಉಪಸ್ಥಿತರಿದ್ದರು. ಎಸ್.ಎಂ.ಸೊಡ್ಡನವರ ಸ್ವಾಗತಿಸಿದರು. ಅಪ್ಪಾಸಾಬ ಧನವಡೆ ವಂದಿಸಿದರು.

loading...

LEAVE A REPLY

Please enter your comment!
Please enter your name here