ವ್ಯಕ್ತಿಯೊರ್ವನ ಮೇಲೆ 5 ಜನರ ಹಲ್ಲೆ:ಗಾಯಾಳು ಆಸ್ಪತ್ರೆಗೆ ದಾಖಲು

0
14
loading...

ಭಟ್ಕಳ,30: ವ್ಯಕ್ತಿಯೊರ್ವನ್ನು 5 ಜನರ ತಂಡವೊಂದು ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ತಾಲೂಕಿನ ಬದ್ರಿಯಾ ಕಾಲಿನಿಯ ಬೀಚ್ ಸಮೀಪ ನ. 28ರಂದು ನಡೆದಿದೆ.
ಬದ್ರಿಯಾ ಕಾಲನಿಯ ಸುಹೇಲ್ ಹಲ್ಲೆಯಿಂದ ಗಾಯಗೊಂಡ ವ್ಯಕ್ತಿ. ಈತನ್ನು ಬದ್ರಿಯಾ ಕಾಲನಿ ಮತ್ತು ತೆಂಗಿನಗುಂಡಿ ನಿವಾಸಿಗಳಾದ ರಜಾಕ್, ಮಜೀದ್, ಜೀಯಾ, ಬಿಲಾಲ ಮತ್ತು ಮುಸ್ತಾಪ ಎನ್ನುವ ಆರೋಪಿಗಳು ಚಾಕು, ಕಬ್ಬಿನದ ರೋಡನಿಂದ ಹಲ್ಲೆ ನಡೆಸಿ ಗಾಯಗೊಳಸಿದ್ದಾರೆ. ಯಾವುದೊ ಹಳಯ ದ್ವೇಷದಿಂದ ಅಕ್ರಮಕೂಟ ಕಟ್ಟಿಕೊಂಡು ಹಲ್ಲೆ ನಡೆಸಿ ಅವಾಚ್ಯಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಬದ್ರಿಯಾ ಕಾಲನಿ ನಿವಾಸಿ ಮಹ್ಮದ್ ಅಮರ ಹಸನ್ ನಗರ ಠಾಣೆಯಲ್ಲಿ ದೂರು ದಾಖಲಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

loading...

LEAVE A REPLY

Please enter your comment!
Please enter your name here