ಶಿಕ್ಷಣ ಸಂಸ್ಥೆಗಳು ಹೋರಾಟ ಮತ್ತು ಸಂಘಟನೆಗಳ ಮೂಲಕ ನ್ಯಾಯ ಕಂಡುಕೊಳ್ಳಬೇಕು: ಬಸವರಾಜ ಹೊರಟ್ಟಿ

0
29
loading...

03KTR1

ಚನ್ನಮ್ಮ ಕಿತ್ತೂರು :03 ವಿಭಜಿತ ಪದವಿ ಪೂರ್ವ ಮಹಾವಿದ್ಯಾಲಯಗಳ ಸಮಸ್ಯೆಗಳ ಕುರಿತು ಸರಕಾರ ನಿರಾಸಕ್ತಿ ಹೊಂದಿದೆ ಕಾರಣ ಶಿಕ್ಷಣ ಸಂಸ್ಥೆಗಳು ಹೋರಾಟ ಮತ್ತು ಸಂಘಟನೆಗಳ ಮೂಲಕ ನ್ಯಾಯ ಕಂಡುಕೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಇಲ್ಲಿಯ ಕಿತ್ತೂರು ನಾಡ ವಿದ್ಯಾ ವರ್ಧಕ ಸಂಘದ ಆಶ್ರಯದಲ್ಲಿ ”ಪದವಿಯಿಂದ ವಿಭಜಿತ ಪದವಿ ಪೂರ್ವ ಮಹಾವಿದ್ಯಾಲಯಗಳ ಸಮಸ್ಯೆಗಳು ಮತ್ತು ಪರಿಹಾರಗಳು’ಕುರಿತು ನಡೆದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ’ನೀತಿಗಳು ಅಸಂಬದ್ಧವಾಗಿದ್ದು ಹೀಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾರಕವಾಗಿರುವದರಿಂದ ಶಾಲೆಗಳಿಗೆ ಒಂದು ವಾರ್ ಕಿಲಿ ಹಾಕಿ ಒಗ್ಗಟ್ಟಿನಿಂದ ಸಂಘಟನೆಯ ಮೂಲಕ ಹೋರಾಟ ಅನಿವಾರ್ಯ. ಎಲ್ಲ ಆಡಳಿತ ಮಂಡಳಿಗಳ ಸಭೆಯನ್ನು ಕರೆದು ಚರ್ಚೆಸಿ ಹೋರಾಟದ ಸಾಧಕ ಭಾಧಕಗಳ ಕುರಿತು ಚರ್ಚಿಸಲಾಗುವದು. ಐಎಎಸ್ ಅಧಿಕಾರಿಗಳು ಇಂದು ಸರಕಾರವನ್ನು ನಡೆಸುತ್ತಿದ್ದಾರೆ ಅಧಿಕಾರಿಗಳ ತಪ್ಪು ನಿರ್ಧಾರ ಮತ್ತು ನಿರಾಸಕ್ತಿಗೆ ಸಮಸ್ಯೆಗಳು ಮತಷ್ಟು ಜಟಿಲವಾಗಿವೆ. ಖಾಲಿ ಇರುವ ಹುದ್ದೆಗಳನ್ನು ತುಂಬುವ ಕೆಲಸವನ್ನು ಮೂಲಭೂತ ಸೌರ್ಕಯಗಳನ್ನು ಒದಗಿಸುವ ಕೆಲಸ ಸರಕಾರ ಮಾಡುತ್ತಿಲ್ಲ. ಹಣ ಕಾಸು ಇಲಾಖೆ ಎಲ್ಲ ಇಲಾಖೆಗಳಲ್ಲಿ ಮುಗುತುರಿಸಿ ಗೊಂದಲಗಳನ್ನು ಸೃಷ್ಠಿಸುತ್ತಿದೆ. ಕಾರಣ 80% ಹುದ್ದೆಗಳು ಖಾಲಿ ಇವೆ ಆಡಳಿತ ಮಂಡಳಿಗಳು ಇಂದು ಶಿಕ್ಷಣ ಸಂಸ್ಥೆಯ ಆಸ್ತಿಗಳನ್ನು ಮಾರಾಟ ಮಾಡಿ ಅರೆಕಾಲಿಕ ಶಿಕ್ಷಕರ ಪಗಾರ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ನಂತರ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಗದಾಪ್ರಹಾರ ಮಾಡಲಾಗುತ್ತಿದೆ. ಸರಕಾರ ಧೋರಣೆಯಿಂದ ಕನ್ನಡ ಮಾಧ್ಯಮ ಶಾಲೆಗಳು ಇಂದು ಮುಚ್ಚುವ ಬೀತಿಯಲ್ಲಿವೆ ಈ ಕುರಿತು ಅಧೀವೇಶನದಲ್ಲಿ ಚರ್ಚಿಸಲಾಗುವದು ಎಂದು ಹೇಳಿದರು.

ಎಂಎಲ್‍ಸಿ ಎಸ್.ವ್ಹಿ.ಸಂಕನೂರ್ ಮಾತನಾಡಿ, ಇಲಾಖೆಯಲ್ಲಿ ಸಾಗರದಷ್ಟು ಸಮಸ್ಯೆಗಳು ತುಂಬಿವೆ 14 ವರ್ಷಗಳಿಂದ ಖಾಲಿಯಾಗಿರುವ ಹುದ್ದೆಗಳನ್ನು ತುಂಬಲು ಪಧವಿ ಕಾಲೇಜುಗಳಿಗೆ ಅನುಮತಿ ನೀಡಿಲ್ಲ. ಬಹಳ ವರ್ಷಗಳಿಂದ ಅರೆಕಾಲಿಕ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಅವರ ಹುದ್ದೆಗಳು ಖಾಯಂ ಆಗಿಲ್ಲ. ಕನ್ನಡ ಮಾಧ್ಯಮ ಶಾಲೆಗಳ ಉಳವಿಗೆ ಈ ಕೂಡಲೇ ಸರಕಾರ ಚಿಂತನೆ ನಡೆಸಬೇಕೆಂದರು.
ಎಂಎಲ್‍ಸಿ ಅರುಣ ಶಹಾಪೂರ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಬೃಹತ ಭ್ರಷ್ಟಾಚಾರ ತಾಂಡವಾಡುತ್ತಿದೆ ಅಧಿಕಾರಿಗಳು ಒಂದು ಸೇವೆಗೆ ಒಂದು ಬೆಲೆ ಎನ್ನುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಶಿಕ್ಷಣ ಸಂಸ್ಥೆಗಳು ಅದೋಗತಿಗೆ ಬಂದು ತಲುಪಿವೆ ಈ ಅನ್ಯಾಯವನ್ನು ತಡೆಗಟ್ಟಲು ಸರಕಾರಕ್ಕೆ ಪ್ರಜ್ಞೆ ಕಾಳಜಿ ಇಲ್ಲ. ಈ ಕುರಿತು ಬರುವ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆಂದು ಭರವಸೆ ನೀಡಿದರು.

ಎಂಎಲ್‍ಸಿ ಮಹಾಂತೇಶ ಕೌಜಲಗಿ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಅನೇಕ ಸಮಸ್ಯೆಗಳಿವೆ ಕೇವಲ ಆರೋಪ ಮಾಡದೆ ಎಲ್ಲರು ಸಮಸ್ಯೆಗಳನ್ನು ಪರಿಹರಿಸಲು ಚಿಂತನ ಮಂಥನ ಮಾಡೋಣ ಸಿ.ಎಂ ಅವರೆ ಜೊತೆ ಬಸವರಾಜ ಹೊರಟ್ಟಿಯವರು ಉತ್ತಮ ಸಂಬಂಧ ಹೊಂದಿದು ಈ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ನ್ಯಾಯ ಒದಗಿಸೋಣ ಎಂದು ಹೇಳಿದರು.

ಹಂಸಭಾವಿ ಶಿಕ್ಷಣ ಸಂಸ್ಥೆಯ ಪ್ರೊ. ಎಂ.ಜಿ.ಅಕ್ಕಿ, ನರೇಗಲ್ ಮತ್ತು ಹುನಗುಂದ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು ತಾವು ಎದುರಿಸುತ್ತಿರುವ ಸಮಸ್ಯೆಗಳ ವಿವರಿಸಿದರು. ರಾಜಗುರು ಸಂಸ್ಥಾನಕಲ್ಮಠದ ಮಡಿವಾಳರಾಜಯೋಗೀಂದ್ರ ಸ್ವಾಮೀಜಿ, ಧಾರವಾಡ ಪ್ರಾಚಾರ್ಯ ಡಾ.ಎನ್.ಬಿ.ಸಂಗಾಪೂರ ಮಾತನಾಡಿದರು. ಸಂಘದ ಚೇರಮನ್ನ ಜೆ,ವ್ಹಿ.ವಸ್ತ್ರದ ಅಧ್ಯಕ್ಷತೆವಹಿಸಿದ್ದರು. ಸಿ.ಜಿ.ದಳವಾಯಿ, ಎಮ್.ಬಿ.ದಳವಾಯಿ, ಎನ್.ಎಸ್.ಹಿರೇಮಠ, ಜೆ.ಬಿ.ಘಟ್ನಟ್ಟಿ ಉಪಸ್ಥಿತರಿದ್ದರು. ಅನೇಕ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ಭಾಗವಹಿಸಿದ್ದರು.

ಗೌರವಕಾರ್ಯದರ್ಶಿ ಆರ್.ವಾಯ್.ಪರವಣ್ಣವರ ಸ್ವಾಗತಿಸಿದರು. ಪ್ರಾಚಾರ್ಯ ಡಾ.ಎಸ್.ಬಿ.ದಳವಾಯಿ ವಂದಿಸಿದರು. ಡಾ.ಕೆ.ಎನ್.ನರಹರಿ,ಪ್ರೊ.ಎಸ್.ಎಸ್.ಬಿರಾದಾರ ಪಾಟೀಲ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here