ಸಂಸ್ಕøತಿಗೆ ನಿಜವಾದ ತೊಡಕಿರುವದು ಪರಿಷತ್,ಅಕಾಡೆಮಿಗಳು: ಶ್ರೀನಿವಾಸ ಕಪ್ಪಣ್ಣ

0
19
loading...

shreenivash
ಯಲ್ಲಾಪುರ,19: ಸಂಸ್ಕøತಿಗೆ ನಿಜವಾದ ತೊಡಕಿರುವದು ಪರಿಷತ್, ಅಕಾಡೆಮಿಗಳು ಸರ್ಕಾರದ ಆಶ್ರಯದಲ್ಲಿರುವದರಿಂದ ,ಇದರಿಂದ ಪ್ರಶಸ್ತಿ,ಅಧಿಕಾರದ ಓಲೈಕೆಗಾಗಿ ಸಾಹಿತ್ಯ ವಲಯದಲ್ಲಿ ಗುಂಪುಗಾರಿಕೆ ಹೆಚ್ಚಿದೆ.ಎಂದು ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ಹೇಳಿದರು.
ಅವರು ತಾಲೂಕಿನ ಮಂಚಿಕೇರಿ ಸಮಾಜಮಂದಿರದಲ್ಲಿ ಬೆಂಗಳೂರಿನಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ, ಸ್ಥಳೀಯ ರಂಗಸಮೂಹ ಹಮ್ಮಿಕೊಂಡಿದ್ದ ಮೂರು ದಿನಗಳ ಸಂಸ್ಕøತಿ ಉತ್ಸವನ್ನು ಉದ್ಘಾಟಿಸಿ ಮಾತನಾಡುತಿದ್ದರು. ಅಸಹಿಷ್ಣುತೆ ಹುಟ್ಟಿದ್ದೆ ರಾಜಕಾರಣಿಗಳಿಂದ.
ದೃಶ್ಯ ಮಾಧ್ಯಮಗಳು ಬೇಡದ ಸಂಗತಿಗಳನ್ನು ಹೆಚ್ಚುವೈಭವೀಕರಿಸುವ ಮೂಲಕ ತಮ್ಮ ಉಳಿವಿಗೆ ಧಕ್ಕೆಯುಂಟು ಮಾಡುತ್ತಿವೆ.ಅಸಹಿಷ್ಣುತೆ ಕಾರಣಕ್ಕೆ ತಮಗೆ ನೀಡಿದ ಪ್ರಶಸ್ತಿಗಳನ್ನು ವಾಪಾಸು ಮಾಡುತ್ತಿರುವದು ರಾಜಕಾರಣಕ್ಕೆ ನೀಡುವ ಕಾಣಿಕೆ ಎಂದು ಭಾವಿಸಬೇಕಾಗಿದೆ ಎಂದರು.ಖ್ಯಾತ ವಿಮರ್ಶಕ,ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿಇತಿಹಾಸದುದ್ದಕ್ಕೂ ಜಾತಿ, ಆಸ್ತಿ ಭಾಷೆಗೊಸ್ಕರ ನಮ್ಮ ಶೋಷನೆಗೆ ಕಾರಣವಾಗಿವೆ.
ಅಗ್ಗದಕಲೆಯ ಮೂಲಕ ಸಂವೇದನೆ ಕಳೆದುಕೊಳ್ಳುತ್ತಿದ್ದೇವೆ ವೈವಿಧ್ಯಮಯವಾದ ಬಹುತ್ವವನ್ನು ನಾಶ ಮಾಡುತ್ತಿದ್ದೇವೆ. ವೈವಿಧ್ಯತೆ ಇಲ್ಲದೆ ಬದುಕಿಗೆ ಚಲನಶೀಲತೆ ಇಲ್ಲ.ಸಮಾಜ ಇತೀಚೆಗೆ ಮಾತುಮತ್ತು ನಡತೆಗಳಲ್ಲಿತನ್ನ ಘನತೆಯನ್ನು ಕಳೆದುಕೊಂಡಿದ್ದು ಸಮಾಜದ ನಡುವೆ ವ್ಯಕ್ತಿಗಳು ವಿಭಜಕರಾಗಿ ಮಾರ್ಪಟ್ಟು ದುರಂತಕ್ಕೊಳಗಾಗಿರುವಸಂಗತಿಯೂ ನಮ್ಮೆದುರಿಗಿದೆ. ಹಿಂಸೆಯಿದ್ದರೆ ಮಾತ್ರ ಮನರಂಜನೆ ಎಂಬ ಮನೋಭಾವ ಹೆಚ್ಚಾಗುತ್ತಿದ್ದು ಈ .ಸನ್ನೀವೇಶದಲ್ಲಿ ಪ್ರತಿಯೊಬ್ಬರ ಹೃದಯ ರಣರಂಗವಾಗಿ ಕುದಿಯುತ್ತಿದೆ.ಅಬ್ಬರದ ದ್ವನಿಯಲ್ಲಿ ಪಿಸುಮಾತಿನ ಸವಿ ಕಳೆದುಕೊಳ್ಳುತ್ತಿದ್ದೇವೆ.ಸೃಜನಶೀಲತೆ ಮಾನವೀಯತೆ ಪರ,ಪ್ರಭುತ್ವ, ಸೃಜನಶೀಲತೆಯನ್ನು ಎದುರಿಸುವ ಕ್ರಮಬರಬೇಕಿದೆ ಎಂದರು.

ರಂಗಕರ್ಮಿ ಕೆ.ವಿಅಕ್ಷರ ಮಾತನಾಡಿ ವಿಜ್ಞಾನ,ರಾಜಕೀಯ ಧರ್ಮಗಳಲ್ಲಿ ಹುಟ್ಟಿದ ಹಠಮಾರಿತನದಪರಿಣಾಮದಿಂದಾಗಿ ಇಂದಿನ ಸಂದರ್ಭದಲ್ಲಿ ಬಿಕ್ಕಟ್ಟು ಅಸಹನೆ ಎಂಬಪರಸ್ಪರ ವಿಚ್ಚೇದಿತ ಸಂಗತಿಗಳು ಜನ್ಮತಾಳಿವೆ.ಇದರಿಂದ ಹೊರಬರಲಾಗದೆ ಮೂಲಭೂತವಾದಿಗಳಾಗುತ್ತಿದ್ದೇವೆ. ಮೂಲಭೂತವಾದದ ಸ್ಫೋಟದ ನಡುವೆ ಬದುಕಬೇಕಾದಅಪಾಯವಿದೆ. ಇನ್ನೊಬ್ಬರನ್ನು ಸ್ವೀಕರಿಸಲಾಗದ ಅಸಹನೆ ನಮ್ಮೊಳಗೆ ಸೃಷ್ಟಿಯಗಿದೆ.ಅದನ್ನು ವಿಸರ್ಜಿಸುವ ಪ್ರಜ್ಞೆ ಜಾಗೃತವಾಗಬೇಕು ಎಂದರು.

ಚಿಂತಕ ಟಿ.ಪಿ ಅಶೋಕ ಮಾತನಾಡಿ ಅನಿವಾರ್ಯ ಒತ್ತಡಗಳಿಗೆ ನಮ್ಮ ಸೃಜನಶೀಲತೆ ಬಲಿಯಾಗುತ್ತಿದ್ದು,ಯಾವೂದನ್ನು ಓದಿ ವಿಮರ್ಶೆ ಮಾಡದೆಯೇ ಸಾಹಿತ್ಯದ ಕೃತಿಗಳನ್ನು ನಿರಾಕರಿಸುವ ಮನೋಭಾವ ಅಧಿಕಗೊಳ್ಳುತ್ತಿದೆ.ಎಂದರು.ಡಾ.ಶ್ರೀಧರಬಳಗಾರ ಆಶಯನುಡಿಗಳನ್ನಾಡಿದರು.ರಂಗ ಸಮೂಹದ ಅಧ್ಯಕ್ಷ ರಾಮಕೃಷ್ಣದುಂಡಿಅವಾಗತಿಸಿದರು.ಎಂ.ಕೆ ಭಟ್ಟ ಯಡಳ್ಳಿ ನಿರೂಪಿಸಿದರು.ಸಂವಾದದಲ್ಲಿ ಪ್ರಮೋದ ಹೆಗಡೆ,ವಿಠ್ಠಲ ಭಂಡಾರಿ,ಡಿ.ಕೆಗಾಂವ್ಕರ್,ಸುಬ್ರಹ್ಮಣ್ಯಭಟ್ಟ,ರಾಜು ಹೆಗಡೆ,ಸುಬ್ರಾಯ ಮತ್ತಿಹಳ್ಳಿ ,ಮೂರ್ತಿಅಂಕೋಲೇಕರ್, ಕೇಶವ ಹೆಗಡೆ,ಮೋಹನಹಬ್ಬು ಮುಂತಾದವರುಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here