ಸಚಿವ ಪರಮೇಶ್ವರ ನಾಯ್ಕ ರಾಜಿನಾಮೆಗೆ ಒತ್ತಾಯಿಸಿ ಪ್ರತಿಭಟನೆ

0
22
loading...

24Dandeli1ದಾಂಡೇಲಿ,25: ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ರಾಜಿನಾಮೆಗೆ ಒತ್ತಾಯಿಸಿ ಸಿ.ಐ.ಟಿ.ಯು ನವೆಂಬರ್ 23 ರಂದು ರಾಜ್ಯಾದಾದ್ಯಂತ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದ್ದರ ಭಾಗವಾಗಿ ದಾಂಡೇಲಿಯಲ್ಲಿ ಸಿ.ಐ.ಟಿ.ಯು ಸಂಯೋಜಿತ ವೆಸ್ಟ್‍ಕೋಸ್ಟ್ ಪೇಪರ್ ಮಿಲ್ಸ್ ಎಂಪ್ಲಾಯಿಸ್ ಯೂನಿಯನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಸಂಘಟನೆಯ ಕಾರ್ಯಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸ್ ನಿಲ್ದಾಣದೆದುರು ಸಮಾವೇಶಗೊಂಡು ಪ್ರತಿಭಟನಾ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ವೆಸ್ಟ್‍ಕೋಸ್ಟ್ ಎಂಪ್ಲಾಯಿಜ್ ಯೂನಿಯನ್ನಿನ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ, ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಡಿ. ಸ್ಯಾಮಸನ್, ಆಟೋರಿಕ್ಷಾ ಯೂನಿಯನ್ನಿನ ಪ್ರಧಾನ ಕಾರ್ಯದರ್ಶಿ ರಾಜೇಸಾಬ್ ಕೇಸನೂರ ಮುಂತಾದವರು ಸಭೆಯನ್ನುದ್ದೇಸಿಸಿ ಮಾತನಾಡಿದರು. ಕಾರ್ಮಿಕ ವಿರೋಧಿ ಕ್ರಮ ಕೈಗೊಳ್ಳೂತ್ತಿರುವ ಸರಕಾರ ಹಾಗೂ ಸರಕಾರದ ಕಾರ್ಮಿಕ ಸಚಿವರನ್ನು ಕಟುವಾಗಿ ಟೀಕಿಸಿದರು.

ಕಾರ್ಮಿಕರಿಗೆ ಕನಿಷ್ಠ ಕೂಲಿ ನ್ಯಾಯುತವಾಗಿ ಅನುಷ್ಠಾನಗೊಳಿಸುವ ಬದಲಾಗಿ ಕಾರ್ಮಿಕರಿಗೆ ದ್ರೋ ಮಾಡುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಹಿಂದೆ ಕಾರ್ಮಿಕ ಚಳುವಳಿಯ ಮೂಲಕ ಕನಿಷ್ಠ ವೇತನ ಪರಿಷ್ಕರಣೆಗಾಗಿ ಸಮಿತಿ ರಚಿಸಿದ್ದರೂ ಮಂತ್ರಿಗಳ ನಿರಾಸಕ್ತಿಯಿಂದಾಗಿ ಯಾವುದೇ ಪ್ರಗತಿಯಾಗಿರುವುದಿಲ್ಲ. ಕಟ್ಟಡ ನಿರ್ಮಾಣ ಕಾರ್ಮಿಕರು ಸೌಲಭ್ಯ ಪಡೆಯಲು ತೀವ್ರ ಸಮಸ್ಯೆಗಳಿವೆ. ಕಟ್ಟಡ ಕಾರ್ಮಿಕರ ನೊಂದಣಿ ಮಾಡಲು ಅಗತ್ಯ ಸಿಬ್ಬಂದಿಗಳಿಲ್ಲದೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ 3050 ಕೋಟಿ ರೂ.ಗಳಿಗೂ ಅಧಿಕ ಮೊತ್ತ ಸಂಗ್ರಹವಾಗಿದ್ದರೂ ಬಡ ಕಟ್ಟಡ ಕಾರ್ಮಿಕರು ಸೌಲಭ್ಯ ಪಡೆಯಲು ಪರದಾಡಬೇಕಾಗಿದೆ. ಇ.ಎಸ್.ಐ ವ್ಯಾಪ್ತಿಗೆ ಒಳಪಡುವ ಕಾರ್ಮಿಕರಿಗೆ ರೇಫಲ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಿಸಲಾಗುತ್ತಿದ್ದು ಬಡ ಕಾರ್ಮಿಕರು ರೋಗ ರುಜಿನಗಳಿಂದ ಬಳಲುವಂತಾಗಿದೆ. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಕಾರ್ಮಿಕರ ನೊಂದಣಿಯೂ ಆಗುತ್ತಿಲ್ಲ. ಈ ಮಂಡಳಿಯಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಗುತ್ತಿಗೆ ಪದ್ದತಿಯಲ್ಲಿ ಕಾರ್ಮಿಕರ ಶೋಷಣೆ ನಡೆಯುತ್ತಿದೆ.

ಕಾರ್ಮಿಕ ಮುಖಕಂಡರು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸದ, ಅನ್ಯಾಯ ಮಾಡುತ್ತಿರುವ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕರವರು ಈತಕ್ಷಣದಿಂದ ರಾಜಿನಾಮೆ ನೀಡಬೇಕು. ಇಲ್ಲವಾದಲ್ಲಿ ಅವರನ್ನು ಮಂತ್ರಿ ಮಂಡಲದಿಂದ ಕಿತ್ತೊಯಬೇಕೆಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯದ್ಯನವರಿಗೆ ಬರೆದ ಮನವಿಯನ್ನು ಸ್ಥಳೀಯ ಕಂದಾಯ ಅಧಿಕಾರಿಗಳ ಮುಖಾಂತರ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಪುಲಕರ, ಸಿ.ಐ.ಟಿ.ಯು ಮುಖಂಡರಾದ ಜಗದೀಶ ನಾಯ್ಕ, ಗಣಪತಿ ನಾಯ್ಕ, ಝೆಡ್. ದೇವರಾಜ, ಟಿ.ಎಸ್. ನಾಯ್ಕ, ಸಲಿಂ ಸಯ್ಯದ್, ಪೌರ ಕಾರ್ಮಿಕರ ಸಂಘಟನೆಯ ರಾಮಾಂಜನೇಯ, ಡಿ.ವೈ.ಎಪ್.ಐನ ಅಧ್ಯಕ್ಷ ವೈ. ಪ್ರಭುದಾಸ್, ಎ.ಎಮ್. ಜಾಫರ್ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here