ಸತ್ಯಬೋಧತೀರ್ಥರ ಪರಂಪರೆ ಪ್ರಕರಗೊಳ್ಳಬೇಕು : ಬಸವರಾಜ ಬೊಮ್ಮಾಯಿ

0
47
loading...

21 HVR 01ಹಾವೇರಿ,21ಃ-ಜಿಲ್ಲೆಯ ಸವಣೂರಿನ ತಾಲೂಕಿನ ಉತ್ತರಾದಿಮಠ ಶ್ರೀ ಸತ್ಯಬೋಧತೀರ್ಥರ ಪರಂಪರೆ ಪ್ರಕರಗೊಳ್ಳಬೇಕು. ಅವರ ತತ್ವ ಸಿದ್ಧಾಂತಗಳು ಎಲ್ಲರಿಗೂ ಮುಟ್ಟುವಂತಾಗಬೇಕು, ಕ್ಷೇತ್ರ ಬಾವೈಕ್ಯತೆಯ ಸಂಕೇತವಾಗುದರ ಜೊತೆಗೆ ಪ್ರವಾಸಿ ತಾಣವಾಗಬೇಕು ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಸವಣೂರ ಪಟ್ಟಣದ ಹೊರವಲಯದಲ್ಲಿರುವ ಉತ್ತರಾದಿಮಠ ಶ್ರೀ ಸತ್ಯಬೋಧತೀರ್ಥರ ಮೂಲವೃಂದಾವನ ಸನ್ನಿದಿ ಆವರಣದಲ್ಲಿ ನವೆಂಬರ 26 ರಿಂದ 30 ವರೆಗೆ ನಡೆಯಲಿರುವ ಶ್ರೀ ಮನ್ನ್ಯಾಯಸುಧಾಮಂಗಳ ಮಹೋತ್ಸವ ಹಾಗೂ ಶ್ರೀ ಸತ್ಯಬೋಧತೀರ್ಥರಿಗೆ ವಜ್ರಕವಚ ಸಮರ್ಪಣೆ ಕಾರ್ಯಕ್ರಮದ ಅಂಗವಾಗಿ ಪತ್ರಿಕಾ ಸಂದರ್ಶನ ನೀಡಿದ ಅವರು, ಟೂರಿಜ್‍ಂ ಡಿಪಾರ್ಮೆಂಟನಿಂದ 1 ಕೋಟಿ ವೆಚ್ಚದಲ್ಲಿ ಉತ್ತರಾದಿಮಠ ಶ್ರೀ ಸತ್ಯಬೋಧತೀರ್ಥರ ಮೂಲವೃಂದಾವನ ಸನ್ನಿದಿ ಹಾಗೂ ರಸ್ತೆ ಅಭಿವೃದ್ದಿ ಪಡಿಸಲಾಗಿದೆ. ಮಠ ರಾಜ್ಯ ಹೊರರಾಜ್ಯಗಳಲ್ಲಿ ಲಕ್ಷಾಂತರ ಬಕ್ತವೃಂದ ಹೊಂದಿದ್ದು ಅವರೆಲ್ಲರ ಸಹಕಾರದೊಂದಿಗೆ 2 ಕೋಟಿ 25 ಲಕ್ಷ ವೆಚ್ಚದಲ್ಲಿ ವಜ್ರಕವಚ ಪೇಜಾವರ ಮಠದ ಶ್ರೀಗಳು ಸಾನಿಧ್ಯದಲ್ಲಿ ಸಮರ್ಪಣೆಯಾಗುತ್ತದೆ.
ಸವಣೂರು ಉತ್ತರಾದಿಮಠ ಶ್ರೀ ಸತ್ಯಬೋಧತೀರ್ಥರ ಮೂಲವೃಂದಾವನ ಹಾಗೂ ಪ್ಯಾಲೇಸ್, ಬಂಕಾಪುರದ ನವಿಲುದಾಮ, ಬಾಡ ಗ್ರಾಮದ ಕನಕದಾಸರ ಕೋಟೆ ಅರಮನೆ, ಶಿಶುವಿನಾಳ ಶರೀಪರ ಗದ್ದುಗೆ ಯಾತ್ರಿ ನಿವಾಸ, ಗೊಟಗೋಡಿ ಜಾನಪದ ವಿಶ್ವ ವಿದ್ಯಾಲಯ, ರಾಕ್ ಗಾರ್ಡನ್, ವಿ.ಕೆ. ಗೋಕಾಕರ ಸ್ಮಾರಕ ಭವನ, ಪ್ರೇಕ್ಷಣೀಯ ಸ್ಥಳಗಳಾಗಿ ಪರಿವರ್ತನೆಯಾಗಿವೆ ಪ್ರತಿನಿತ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಹಾಗಾಗಿ ಟೂರಿಜ್‍ಂ ಸರ್ಕಿಟ್ ಮಾಡುವ ಪ್ರಸ್ಥಾವನೆಯನ್ನು ಸರ್ಕಾರಕ್ಕೆ ಮಾಡಿರುವದಾಗಿ ತಿಳಿಸಿದ ಅವರು. ಅದರಬಗ್ಗೆ ಬೆಂಗಳೂರಿನಲ್ಲಿ ಸಚಿವರೊಂದಿಗೆ ವಿಶೇಷ ಸಭೆ ನಡೆಸಿರುವದಾಗಿ ತಿಳಿಸಿದರು.
ಮಠದ ಸಂಯೋಜಕರು ಹಾಗೂ ಪ್ರಧಾನ ಪರ್ಯಾಯಸ್ಥರಾದ ಗುರುರಾಜಾಚಾರ್ಯ ರಾಯಚೂರ ಮಾತನಾಡಿ ಶ್ರೀ ಸತ್ಯಬೋಧತೀರ್ಥರು ರಾತ್ರಿ ಸೂರ್ಯನನ್ನು ತೋರಿಸಿದ ಮಹಾನುಭಾವರು. ಇದೊಂದು ಐತಿಹಾಸಿಕ ಕಾರ್ಯಕ್ರಮ 5 ವರ್ಷಗಳ ಹಿಂದೆ ಸುವರ್ಣ ಕವಚ ಸಮರ್ಪಣೆ ನಡೆದಿತ್ತು ಈ ಬಾರಿ 2 ಕೋಟಿ 25 ಲಕ್ಷ ವೆಚ್ಚದಲ್ಲಿ 6000 ವರ್ಜಗಳಿಂದ ವರ್ಜ ಕವಚ ಸಮರ್ಪಣೆ ನೆರವೇರಲಿದೆ ಈ ಕಾರ್ಯಕ್ರಮದಲ್ಲಿ ದಿನವು 50 ಸಾವಿರ ಬಕ್ತಾದಿಗಳು ಸೇರಲಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಹಿರಿಯ ಪತ್ರಕರ್ತರಾದ ಜಯತೀರ್ಥ ದೇಶಪಾಂಡೆ. ಜಿಲ್ಲಾ ಪಂಚಾಯತ ಸದಸ್ಯ ಸಿ.ಎಸ್.ಪಾಟೀಲ. ನರಹರಿ ವಾದಿರಾಜ ಕಟ್ಟಿ, ಬಸವರಾಜ ಅರಬಗೊಂಡ ಹಾಗೂ ಸವಣೂರಿನ ಅನೇಕ ಗಣ್ಯರು ಉಪಸ್ಥತರಿದ್ದರು.

loading...

LEAVE A REPLY

Please enter your comment!
Please enter your name here