ಸಾಲ-ಸೌಲಭ್ಯದ ಚೆಕ್ ವಿತರಣೆ

0
14
loading...

ಹಳಿಯಾಳ,21: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವಿವಿಧ ಸ್ವ-ಉದ್ಯೋಗ ಹಮ್ಮಿಕೊಳ್ಳಲು ಮುಸಲ್ಮಾನ ಸಮುದಾಯದವರಿಗೆ ಮಂಜೂರಾದ ಶ್ರಮಶಕ್ತಿ ಸಾಲ-ಸೌಲಭ್ಯದ ಚೆಕ್‍ಗಳನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಸಚಿವರಾದ ಆರ್.ವಿ ದೇಶಪಾಂಡೆ ನ. 21 ರಂದು ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ವಿತರಿಸಿದರು.
ಸ್ವಾವಲಂಬನಾ, ಶ್ರಮಶಕ್ತಿ, ಕಿರುಸಾಲ, ಅರಿವು, ಗಂಗಾ ಕಲ್ಯಾಣ, ಗೃಹಸಾಲದ ಮೇಲಿನ ಬಡ್ಡಿ ರಿಯಾಯತಿ ಯೋಜನೆ ಹೀಗೆ ವಿವಿಧ ಯೋಜನೆಗಳಡಿ ನಿಗದಿಪಡಿಸಿದ ಗುರಿಗಿಂತ ಹೆಚ್ಚಿನ ಸೌಲಭ್ಯವನ್ನು ವಿತರಿಸಲಾಯಿತು. 436 ಫಲಾನುಭವಿಗಳಿಗೆ 1 ಕೋಟಿ 43 ಲಕ್ಷ 26 ಸಾವಿರ ರೂ. ಮೊತ್ತದ ಚೆಕ್‍ಗಳನ್ನು ನೀಡಲಾಯಿತು.
ಪುರಸಭೆ ಉಪಾಧ್ಯಕ್ಷ ಫಯಾಜ್‍ಅಹ್ಮದ ಶೇಖ ಅವರ ವಿಶೇಷ ಪ್ರಯತ್ನದಿಂದ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಘೋಟ್ನೆಕರ, ಜಿಲ್ಲಾ ವಕ್ಫ್ ಬೊರ್ಡ ಅಧ್ಯಕ್ಷ ಖಯಾಂ ಮುಗದ, ಸದಸ್ಯ ಅಲೀಂ ಬಸರಿಕಟ್ಟಿ, ಜಿ.ಪಂ. ಸದಸ್ಯ ನಂದಾ ಕೋರ್ವೆಕರ, ತಹಶೀಲ್ದಾರ ವಿದ್ಯಾಧರ ಗುಳಗುಳಿ, ಡಿವೈಎಸ್ಪಿ ದಯಾನಂದ ಪವಾರ, ಪುರಸಭೆ ಅಧ್ಯಕ್ಷೆ ಪ್ರೇಮಾ ಅಶೋಕ ತೋರಣಗಟ್ಟಿ, ಸದಸ್ಯರಾದ ಶಂಕರ ಬೆಳಗಾಂವಕರ, ರಿಯಾನಾ ಬೆಟಗೇರಿ, ಅರುಣ ಬೋಬಾಟಿ, ಗುಲಾಬಷಾ ಲತೀಫನವರ, ಜಿ.ಪಂ. ಮಾಜಿ ಸದಸ್ಯ ಕೈತಾನ್ ಬಾರಬೋಜಾ, ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀಧರ ಭಂಡಾರಿ ಮೊದಲಾದವರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here