ಸೂಪಾ ಡ್ಯಾಮ್ ಹಿನ್ನಿರಿನ ಪ್ರದೇಶದ ಬಳಿ ಯುವಕರು ನೀರುಪಾಲು

0
29
loading...

jayoda

ಜೋಯಿಡಾ 19 : ಜೋಯಿಡಾ ಸಮೀಪದ ಸೂಪಾ ಡ್ಯಾಮ್ ಹಿನ್ನಿರಿನ ಪ್ರದೇಶದ ಬಳಿ ಹಳೆ ಹುಬ್ಬಳ್ಳಿಯ ಮೂರು ಯುವಕರು ನೀರಿಗಿಳಿಯಲು ಹೋಗಿ ನೀರುಪಾಲಾದ ಘಟನೆ ಇಂದು ಬುಧವಾರ ಮಧ್ಹ್ಯಾನ ನಡೆದಿದೆ.

ಮೃತ ಪಟ್ಟವರನ್ನು ಅಸ್ಲಾಮ್ ಸವನೂರ್(20) ಶಾಹಿದ ಚಕ್ರಹಾರಿ(26),ಜಾವಿದ ಗುರಜರವಾರಿ(20) ಎಂದು ಗುರುತಿಸಲಾಗಿದೆ. ಕೂಡಲೆ ಕಾರ್ಯಪ್ರವೃತ್ತರಾದ ಜೋಯಿಡಾ ಪೋಲಿಸ್ ಅಧಿಕಾರಿಗಳು ದಾಂಡೇಲಿ ಹಾಗೂ ಗಣೇಶಗುಡಿಯಿಂದ ಈಜುಗಾರರನ್ನು ಕರೆಸಿ ಈ ಮೂವರ ಮೃತ ದೇಹವನ್ನು ಹೊರತೆಗೆದಿರುತ್ತಾರೆ.
ಈ ಮೂವರು ಹಳೆ ಹುಬ್ಬಳ್ಳಿ ಮೂಲದ ಗಾರ್ಮೆಂಟ್ಸ ಅಂಗಡಿಗಳಲ್ಲಿ ಕೆಲಸಮಾಡುತ್ತಿರುವರೆನ್ನಲಾಗಿದೆ. ನಾಗೋಡಾ ಬಳಿಯ ಸೂಪಾ ಹಿನ್ನಿರಿನ ನಾಸಿಪುಲ್ ಎಂಬಲ್ಲಿ ಪಿಕನಿಕ್‍ಗಾಗಿ ಬಂದವರೆನ್ನಲಾಗಿದೆ. ಹಳೆ ಹುಬ್ಬಳ್ಳಿ ಮೂಲದ 10 ಯುವಕರಲ್ಲಿ ಈ ಮೂರು ಯುವಕರು ಒಬ್ಬರ ಹಿಂದೆ ಒಬ್ಬರು ರಕ್ಷಣೆಗೆಂದು ಹೋಗಿ ಮೂವರೂ ನೀರುಪಾಲಾಗಿರುತ್ತಾರೆ.ಡಿ.ವೈಎಸ್.ಪಿ.ದಯಾನಂದ ಪವಾರ ಹಾಗೂ ಸಿ.ಪಿ.ಐ.ಸಿದ್ದಗೌಡ ನೇತ್ರತ್ವದಲ್ಲಿ ಯುವಕರ ಮೃತದೇವವನ್ನು ಹೊರತೆಗೆದು ಪಾಲಕರಿಗೆ ಒಪ್ಪಿಸಿರುತ್ತಾರೆ.
ರಕ್ಷಣೆಗಾಗಿ ಪ್ರಾಣತೆತ್ತರು: ಮಧ್ಯಾನ 12 ಘ.ಸುಮಾರಿಗೆ ಹುಬ್ಬಳ್ಳಿಯಿಂದ ಬಂದ ಈ 10 ಯುವಕರ ತಂಡ ಹಿನ್ನಿರಿನ ನಾಸಿಪುಲ್ ಬಳಿಬಂದಿದ್ದರು.ಇವರಲ್ಲಿ ಓರ್ವ ಮೊದಲು ಹಿನ್ನಿರಿಗೆ ಇಳಿಯಲು ಹೋಗಿ ಆಳದ ನೀರಲ್ಲಿ ಮುಳುಗಿ ಹೋರಬರಲಾಗದೇ ತೊಳಲಾಡುತ್ತಿರುವಾಗ ಜೊತೆಯಲ್ಲಿ ಬಂದ ಇನ್ನೊರ್ವ ಆತನ ರಕ್ಷಣೆಗಾಗಿ ನೀರಿಗೆ ಇಳಿದನೆನ್ನಲಾಗಿದೆ. ಈತನೂ ಹೊರಬಾರದಿದ್ದಾಗ ಮತ್ತೊರ್ವ ನೀರನ ಆಳಕ್ಕೆ ಧುಮುಕಿ ಈಜು ಬಾರದೆ ದಡಸೆರಲಾಗದೆ ನೀರಿನ ಆಳದಲ್ಲಿಪ್ರಾಣಬಿಟ್ಟಿದ್ದ.
[highlight]ಶೋದಕಾಗಿ ಈಜು ತಂಡ:- ಈ ಬಗ್ಗೆ ಮಧ್ಯಾನ 2 ಗಂ. ಸುಮಾರಿಗೆ ಸ್ಥಳಿಯ ಮೀನುಗಾರರು ಪೋಲಿಸ್ ಇಲಾಖೆಗೆ ವಿಷಯ ತಿಳಿಸಿದ್ದರಿಂದ ಸ್ಥಳಕ್ಕೆ ಬಂದ ಪೋಲಿಸರು ಪ್ರಕರಣ ಧಾಖಲಿಸಿಕೊಂಡು ಶೋಧಕಾರ್ಯ ಆರಂಬಿಸಿದ್ದರು. ಗಣೇಶಗುಡಿನ ಜಲವಿಹಾರ ಕೇಂಧ್ರದ ಶಾಂತ ಕುಟ್ಟಿಯವರ 6 ಜನರ ಈಜು ತಂಡ ಹಾಗೂ ದಾಂಡೇಲಿಯ ಈಜು ಪ್ರವೀಣರಾದ ಪ್ರಭಾಕರ ಹಾಗೂ ಕಲ್ಲಪ್ಪ ಎಂಬವರನ್ನು ಈ ಯುವಕರ ಮೃತ ದೇಹ ಶೋಧಕ್ಕೆ ಕರೆತರಲಾಗಿತ್ತು. ಸಂಜೆ 7ಗಂಟೆಯೊಳಗಾಗಿ ಈ ಮೂವರ ಮೃತ ದೇಹ ಪತ್ತೆಹಚ್ಚಿ ಮೇಲಕ್ಕೆ ತರಲು ಈಜು ತಂಡ ಯಶಸ್ವಿಯಾಗಿದೆ.

loading...

LEAVE A REPLY

Please enter your comment!
Please enter your name here