ಹಳಿಯಾಳ ಪುರಸಭೆ ಅಕ್ರಮಗಳ ವಿರುದ್ಧ ಗುಡುಗಿದ ವ್ಹಿ.ಡಿ. ಹೆಗಡೆ

0
24
loading...

23 HLY NPS-1 Bಹಳಿಯಾಳ,23: ಸರ್ಕಾರದಿಂದ ಅತ್ಯಲ್ಪ ಅನುದಾನ ಬರುತ್ತಿರುವ ಸಂದರ್ಭದಲ್ಲಿಯೂ ಸಹ ನನ್ನ ನೇತೃತ್ವದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಪಾರದರ್ಶಕವಾಗಿ ನಿರ್ವಹಣೆಗೊಳ್ಳುತ್ತಿದ್ದ ಹಳಿಯಾಳ ಪುರಸಭೆ ಇಂದು ಭ್ರಷ್ಟಾಚಾರದ ಕೂಪವಾಗಿದೆ ಎಂದು ಸಖೇದ ಆಕ್ಷೇಪ, ಆಕ್ರೋಶ ವ್ಯಕ್ತಪಡಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ, ಹಿರಿಯ ಮುತ್ಸದ್ದಿ ವ್ಹಿ.ಡಿ. ಹೆಗಡೆ ಹಳಿಯಾಳ ಪುರಸಭೆಯ ಅಕ್ರಮಗಳ ವಿರುದ್ಧ ಗುಡುಗಿದ್ದು ಇಲ್ಲಿನ ಭ್ರಷ್ಟಾಚಾರವನ್ನು ಮಟ್ಟ ಹಾಕುವ ಸದುದ್ದೇಶದಿಂದ ಸಂಬಂಧಪಟ್ಟ ಪ್ರಾಧಿಕಾರಕ್ಕೆ ದೂರು ನೀಡುವದಾಗಿ ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ವ್ಹಿ.ಡಿ. ಹೆಗಡೆ ಪುರಸಭೆಯು ಕೈಗೊಂಡಿರುವ ಹಲವಾರು ವಿವಾದಾತ್ಮಕ ಸಂಗತಿಗಳ ಬಗ್ಗೆ ಅತ್ಯಂತ ನೋವಿನಿಂದ ಮಾತನಾಡಿದರು. ತನ್ನ ನೇತೃತ್ವದಲ್ಲಿ ಪುರಸಭೆ ಆಡಳಿತದ ದಿನಗಳನ್ನು ಸ್ಮರಿಸಿದ ಅವರು ಅಂದಿನ ಜನಪ್ರತಿನಿಧಿಗಳ ಆಡಳಿತಕ್ಕೂ ಹಾಗೂ ಇಂದಿನ ಜನಪ್ರತಿನಿಧಿಗಳ ಆಡಳಿತಕ್ಕೂ ಇರುವ ಭಾರಿ ಅಂತರದ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
[highlight]ಸೂಪರ್‍ಸೀಡ್‍ಗೆ ಆಗ್ರಹ:[/highlight]- ಮಾಜಿ ಶಾಸಕ ಸುನೀಲ ಹೆಗಡೆ ಅವಧಿಯಲ್ಲಿ ಮಂಜೂರಾಗಿದ್ದ ನಿರಂತರ ನೀರು ಸರಬರಾಜು ಮಾಡುವ ಯೋಜನೆ ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಕೆಲ ಸದಸ್ಯರು ಗುತ್ತಿಗೆದಾರರಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂಬ ಕೂಗು ಊರಿನಾದ್ಯಂತ ಕೇಳಿ ಬರುತ್ತಿದೆ. ಅದೇ ಸಂದರ್ಭದಲ್ಲಿ ಮಂಜೂರಾಗಿದ್ದ ನಗರೋತ್ಥಾನ ಯೋಜನೆಯೂ ಸಹ ಹಳ್ಳ ಹಿಡಿದಂತಾಗಿದೆ. ಮಹತ್ಮಾಗಾಂಧಿ ಮಾರುಕಟ್ಟೆ ಸಂಕಿರಣದ ಹಂಚಿಕೆ ವಿಷಯದಲ್ಲಿಯೂ ಸಹ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿರುವ ಸಂಗತಿ ಗುಟ್ಟಾಗಿ ಉಳಿದಿಲ್ಲ, ಕೆಲ ಸದಸ್ಯರು ಭೂ ಮಾಫಿಯಾದಲ್ಲಿ ತೊಡಗಿದ್ದಾರೆ ಎಂದು ವಿವರಿಸಿದ ವ್ಹಿ.ಡಿ. ಹೆಗಡೆ ಪುರಸಭೆಯ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತೇನೆ. ಬೆಂಗಳೂರಿಗೆ ತೆರಳಿ ಪ್ರತಿಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಸಿಓಡಿ ಇಲ್ಲವೇ ಸಿಬಿಐ ತನಿಖೆಯಾಗುವಂತೆ ಪ್ರಯತ್ನಿಸುತ್ತೇನೆ. ಸಂಬಂಧಪಟ್ಟ ಪ್ರಾಧಿಕಾರಕ್ಕೆ ಇಲ್ಲಿನ ಅಕ್ರಮಗಳು ದೃಢಪಟ್ಟರೆ ಪುರಸಭೆಯನ್ನು ಸೂಪರ್‍ಸಿಡ್ ಮಾಡಲು ಸಹ ಆಗ್ರಹಿಸುತ್ತೇನೆ ಎಂದು ತಿಳಿಸಿದರು.
ಕೊಟ್ಟ ಮನೆ ಕಸಿದುಕೊಳ್ಳಲಾಗದು:- ಆಶ್ರಯ ಯೋಜನೆಯಡಿ ನೀಡಲಾದ ಮನೆಗಳನ್ನು ರದ್ದುಪಡಿಸುವಂತೆ ಕಾನೂನು ಕ್ರಮ ಕೈಗೊಳ್ಳುವದಾಗಿ ತೀರ್ಮಾನಿಸಿದ ಸಚಿವ ಆರ್.ವಿ. ದೇಶಪಾಂಡೆಯವರು ಅಧ್ಯಕ್ಷರಾಗಿರುವ ನಗರ ಆಶ್ರಯ ಸಮಿತಿಯ ತೀರ್ಮಾನಕ್ಕೆ ತೀವೃ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಎಂಎಲ್‍ಸಿ ವ್ಹಿ.ಡಿ. ಹೆಗಡೆ ಈಗಾಗಲೇ ಹಲವಾರು ವರ್ಷಗಳ ಹಿಂದೆ ನೀಡಿದ ಆಶ್ರಯ ಮನೆಗಳ ಸಾಲ ಚುಕ್ತಾ ಆಗಿದೆ. ಮನೆ ನಿರ್ಮಿಸಿಕೊಂಡಿರುವ ಕೆಲವರು ಉದ್ಯೋಗದ ನಿಮಿತ್ಯ ಬೇರೆಡೆಗೆ ವಲಸೆ ಹೋಗಿದ್ದಾರೆ. ಕೆಲವರು ಭಾಡಿಗೆ ನೀಡಿದ್ದಾರೆ. ಒಮ್ಮೆ ಮನೆ ಪಟ್ಟಾ ನೀಡಿದರೆ ಅದನ್ನು ರದ್ದು ಪಡಿಸಲು ಸಾಧ್ಯವಾಗದು ಎಂದು ಸ್ಪಷ್ಟವಾಗಿ ತಿಳಿಸಿದ ಅವರು ಒಂದಾನುವೇಳೆ ನೀಡಿದ ಮನೆಯನ್ನು ಕಸಿದುಕೊಳ್ಳಲು ಪ್ರಯತ್ನಿಸಿದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ದೂರು ದಾಖಲಿಸಲಾಗುವುದು ಎಂದು ಎಚ್ಚರಿಸಿದರು. ಮನೆಗಳನ್ನು ವಾಪಸು ಪಡೆಯಲು ತಾವು ಬಿಡುವುದಿಲ್ಲ ಎಂದು ಗುಡುಗಿದರು.
ಉಚಿತ ನಿವೇಶನ ನೀಡಿ:- ಪುರಸಭೆಯವರು ಗುಡ್ನಾಪುರ ಬ್ಲಾಕ್ ನಂ. 30 ರಲ್ಲಿನ 7 ಎಕರೆ 32 ಗುಂಟೆ ಜಮೀನು ಖರೀದಿಸಿ ಸ್ವಾಧೀನಪಡಿಸಿಕೊಂಡು ಅಲ್ಲಿ ರಸ್ತೆ, ಚರಂಡಿ, ನೀರು, ವಿದ್ಯುತ್ ಮೊದಲಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ನಿವೇಶನಗಳನ್ನು ರಚಿಸಿ ಬಡವರಿಗೆ ಮನೆ ಕಟ್ಟಿಕೊಳ್ಳಲು ಉಚಿತವಾಗಿ ನಿವೇಶನಗಳನ್ನು ಹಾಗೂ ಸಾಲ-ಸೌಲಭ್ಯವನ್ನು ನೀಡಬೇಕು.
[highlight]ಟೀಕೆಗಳ ಸುರಿಮಳೆ:[/highlight]- ತಮ್ಮ ರಾಜಕೀಯ ವಿರೋಧಿಗಳಾದ ಸಚಿವ ಆರ್.ವಿ. ದೇಶಪಾಂಡೆ ಹಾಗೂ ಎಂಎಲ್‍ಸಿ ಎಸ್.ಎಲ್. ಘೋಟ್ನೇಕರ ಇವರುಗಳು ಸರ್ಕಾರಿ ಹಾಗೂ ಸಹಕಾರಿ ವ್ಯವಸ್ಥೆಯಿಂದ ಪಡೆದಿರುವ ಸೌಲಭ್ಯಗಳು ಹಾಗೂ ಅಪಾರ ಪ್ರಮಾಣದ ಆಸ್ತಿ ಗಳಿಕೆಯ ವಿರುದ್ಧ ವ್ಹಿ.ಡಿ. ಹೆಗಡೆ ಟೀಕೆಗಳ ಸುರಿಮಳೆಗೈದರು.
ಮಾಜಿ ಶಾಸಕ ಸುನೀಲ ಹೆಗಡೆ, ಪುರಸಭೆ ಹಿರಿಯ ಸದಸ್ಯ ಎಸ್.ಎಂ. ಹೂಲಿ, ಪ್ರಮುಖರಾದ ಎಸ್.ಎ. ಶೆಟವಣ್ಣವರ, ಸೈಯದಅಲಿ ಅಂಕೋಲೆಕರ, ಮೋಹನ ಬೆಳಗಾಂವಕರ, ಫಾರುಕ ಬಾಳೇಕುಂದ್ರಿ, ಗಣಪತಿ ಕರಂಜೇಕರ, ಸಂತಾನ ಸಾವಂತ, ಉಲ್ಲಾರ ಬೀಡಿಕರ, ಗುರುನಾಥ ದಾನಪ್ಪನವರ, ಶಂಕರ ಘಳಗಿ, ಮಾರುತಿ ಪೆಟ್ನೇಕರ, ಶಿವಾಜಿ ನರಸಾನಿ, ಜಹಾಂಗೀರ ದಲಾಲ, ನಾಗರಾಜ ಬಾಂದೇಕರ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

loading...

LEAVE A REPLY

Please enter your comment!
Please enter your name here