ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

0
23
loading...

13srs1b

ಶಿರಸಿ,14: ಮಡಿಕೇರಿಯ ಕುಟ್ಟಪ್ಪ ಹತ್ಯೆ ಆರೋಪಿಗಳ ಬಂಧನ, ಪರಿಹಾರ ಮೊತ್ತ ಹೆಚ್ಚಳದ ಜೊತೆಗೆ ತಕ್ಷಣ ಟಿಪ್ಪು ಜಯಂತಿ ಆದೇಶವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ವಿಶ್ವಹಿಂದೂ ಪರಿಷತ್, ಭಜರಂಗದಳ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಶುಕ್ರವಾರ ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಟಿಪ್ಪು ಜಯಂತಿ ಆಚರಣೆ ವೇಳೆ ಮಡಿಕೇರಿಯಲ್ಲಿ ವಿಶ್ವ ಹಿಂದೂ ಪರಿಷತ್ ಕೊಡಗು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಟ್ಟಪ್ಪನವರನ್ನು ವ್ಯವಸ್ಥಿತ ಸಂಚನ್ನು ರೂಪಿಸಿ ಕೊಲೆ ಮಾಡಿದ ಮತಾಂಧ ಶಕ್ತಿಗಳನ್ನು ಮತ್ತು ಅದಕ್ಕೆ ಕುಮ್ಮಕ್ಕು ನೀಡಿದ ರಾಜ್ಯ ಸರ್ಕಾರದ ಓಲೈಕೆ ರಾಜಕಾರಣಕ್ಕೆ ಪ್ರತಿಭಟನಾನಿರತರು ವಿರೋಧ ವ್ಯಕ್ತಪಡಿಸಿದರು. ಪರಿಷತ್‍ನ ಪ್ರಮುಖ ಕೇಶವ ಹೆಗಡೆ ಮಾತನಾಡಿ, ರಾಜ್ಯ ಸರ್ಕಾರ ಹಿಂದೂ ಸಂಘಟನೆಗಳನ್ನು ಅನಿವಾರ್ಯವಾಗಿ ಹೋರಾಟಕ್ಕೆ ತಂದಿಟ್ಟಿದೆ.
ಟಿಪ್ಪು ಜಯಂತಿ ಆಚರಿಸದಂತೆ ವಿನಂತಿಸಿದರೂ ಸರ್ಕಾರ ಅದಕ್ಕೆ ಮನ್ನಣೆ ನೀಡದೆ ಮತಾಂಧ ಟಿಪ್ಪುವಿನ ಜಯಂತಿಯನ್ನು ಆಚರಿಸುವ ಮೂಲಕ ನಾಡಿನ ಸಂಸ್ಕøತಿ ಮೇಲೆ ಪ್ರಹಾರ ಮಾಡಿದೆ ಎಂದು ಟೀಕಿಸಿದರು. ಮಡಿಕೇರಿಯಲ್ಲಿ ಪೊಲೀಸರ ಲಾಠಿ ಪ್ರಹಾರದಿಂದ ಪುಟ್ಟಪ್ಪ ಮೃತಪಟ್ಟರೆ, ಈ ಪ್ರಕರಣಕ್ಕೂ ರಾಜ್ಯ ಸರ್ಕಾರಕ್ಕೂಏನೂ ಸಂಬಂಧವಿಲ್ಲ ಎಂಬ ನಾಚಿಗೇಡಿನ ಮಾತನ್ನಾಡುತ್ತಿದೆ. ಇದು ಮುಸ್ಲಿಂ ತುಷ್ಟೀಕರಣದ ಪರಮಾವಧಿಯಾಗಿದೆ ಎಂದು ಆಕ್ರಶ ವ್ಯಕ್ತಪಡಿಸಿದರು.
ಇಡೀ ರಾಜ್ಯಕ್ಕೆ ಬೇಡವಾದ ಟಿಪ್ಪು ಜಯಂತಿ ಆಚರಣೆ ನಿಶೇಧಿಸಬೇಕು. ಪುಟ್ಟಪ್ಪ ನಿಧನದ ಹೊಣೆ ಹೊತ್ತು ಹೆಚ್ಚಿನ ಪರಿಹಾರ ನೀಡಬೇಕು. ಕೋಮುಗಲಭೆಗೆ ಕಾರಣರಾದವರನ್ನು ಗುರುತಿಸಿ ಶಿಕ್ಷೆ ನೀಡಬೇಕು. ಶಾಂತವಾದ ಹಿಂದೂ ಸಮುದಾಯವನ್ನು ಭಯಭೀತಗೊಳಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್ ಪಕ್ಷ ರಾಜ್ಯದ ಘನತೆ, ಗೌರವ ಹಾಳು ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತ್ರತ್ವದ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಮತದ ಆಸೆಗಾಗಿ, ಅಲ್ಪಸಂಖ್ಯಾತರನ್ನು ಖುಷಿಪಡಿಸುವ ಉದ್ದೇಶದಿಂದ ಬಹುಸಂಖ್ಯಾತ ಹಿಂದುಗಳ ವಿರೋಧದ ನಡುವೆಯೂ ಟಿಪ್ಪು ಜಯಂತಿಗೆ ಕುಮ್ಮಕ್ಕು ನೀಡಿರುವುದು ಮುಸ್ಲೀಂ ತುಷ್ಟೀಕರಣದ ನೀತಿಯನ್ನು ಎತ್ತಿ ತೋರಿಸುತ್ತದೆ.
ವಿವಾದಗಳನ್ನು ಸೃಷ್ಟಿಸುವ ಮೂಲಕ ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಮುಚ್ಚುವ ಕಾರ್ಯ ಸರ್ಕಾರದಿಂದ ಆಗುತ್ತಿದೆ ಎಂದು ಟೀಕಿಸಿದರು. ಟಿಪ್ಪು ಜಯಂತಿ ಆಚರಿಸಿ ಎಂದು ಯಾವ ಮುಸ್ಲಿಂ ಪರ ಸಂಘಟನೆಯೂ ಕೇಳಿರಲಿಲ್ಲ. ಆದರೆ ವಿವಾದಿತ ವ್ಯಕ್ತಿ ಟಿಪ್ಪುವಿನ ಜಯಂತಿ ಆಚರಿಸಿದ್ದು ಸರ್ಕಾರದ ತುಷ್ಟೀಕರಣ ಮನೋಭಾವನೆಗೆ ಹಿಡಿದ ಕನ್ನಡಿಯಾಗಿದೆ ಎಂದ ಅವರು, ಮತಾಂಧರಿಗೆ ಮೆರವಣಿಗೆಗೆ ಅವಕಾಶ ನೀಡಿ ಸಮಾಜದಲ್ಲಿ ಅರಾಜಕತೆ ನಿರ್ಮಾಣ ಮಾಡುವಂತಹ ಕೆಲಸಕ್ಕೆ ಸರ್ಕಾರ ಕೈಹಾಕಿರುವುದು ಈ ರಾಜ್ಯದ ಒಂದು ದುರಂತ.
ಇದು ಗೃಹ ಇಲಾಖೆಯ ವೈಫಲ್ಯ ಮತ್ತು ಮುಖ್ಯಮಂತ್ರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ ಎಂದರು. ಗೋಮಾಂಸ ಭಕ್ಷಣೆ ಕುರಿತ ಹೇಳಿಕೆಗೆ ಮುಖ್ಯಮಂತ್ರಿ ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ ಕಾಗೇರಿ, ಹೊಣೆಗೇಡಿ ಹಾಗೂ ಬುದ್ದಿಗೇಡಿ ಸಾಹಿತಿಗಳು ತಮ್ಮ ಕೃತಿ ಮೂಲಕ ಪ್ರಚಾರಕ್ಕೆ ಬರಬೇಕೇ ವಿನಃ ವಿವಾದಾಯತ್ಮಕ ಹೇಳಿಕೆಯಿಂದಲ್ಲ ಎಂದು ಹೇಳಿದರು.
ಪ್ರತಿಭಟನಾಕಾರರು ಬಸ್ ನಿಲ್ದಾಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ತಾಸಿಗೂ ಅಧಿಕ ಕಾಲ ರಸ್ತೆ ತಡೆ ನಡೆಸಿದರು. ಈ ವೇಳೆ ಭಜರಂಗ ದಳದ ಜಿಲ್ಲಾ ಸಂಚಾಲಕ ವಿಠ್ಠಲ ಪೈ ಹೆಗಡೆಕಟ್ಟಾ, ತಾಲೂಕು ಸಂಚಾಲಕ ದಿನೇಶ ದೇವಡಿಗ, ಅನಿಲ ವಡವಿ, ಬಿಜೆಪಿಯ ವೀಣಾ ಶೆಟ್ಟಿ, ಸುವರ್ಣ ಸಜ್ಜನ, ವೀಣಾ ಭಟ್ಟ, ನಾಗರಾಜ ನಾಯ್ಕ, ನಂದನ ಸಾಗರ, ರಾಖೇಶ ತಿರುಮಲೆ, ಮಹಂತೇಶ ಹಾದೀಮನಿ, ಗಣಪತಿ ನಾಯ್ಕ, ರಮೇಶ ನಾಯಕ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here