11 ನೇ ಡಿವಿಜನ್‍ದಲ್ಲಿ ರಸ್ತೆಯಲ್ಲಿ ನಿಂತ ನೀರಿನ ಗಲೀಜು

0
244
loading...

water

 

 

 

 

ಇಳಕಲ್ಲ : 24*7 ನಿರಂತರ ಕುಡಿಯುವ ನೀರು ಪೂರೈಕೆ ಕಾಮಗಾರಿ ಪೂರ್ಣಗೊಳಿಸದೇ ಅರ್ಧಮರ್ಧ ಮಾಡಿರುವದರಿಂದ ಇಲ್ಲಿಯ 11 ಡಿವಿಜನ್‍ದಲ್ಲಿ ನೀರು ಹರಿದು ರಾಡಿಯಾಗಿ ಗಲೀಜಾಗಿ ನಿಂತಿದ್ದು ಜನರು ಅಲ್ಲಿ ಸಂಚರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಮಗಾರಿಯ ಗುತ್ತಿಗೆದಾರರು ತಮ್ಮ ಕೂಲಿಕಾರರಿಂದ ಸರಿಯಾದ ಕಾರ್ಯವನ್ನು ಮಾಡಿಸದೇ ಹೋಗಿರುವದರಿಂದ ಅಲ್ಲಿಯ ರಸ್ತೆಗಳಲ್ಲಿ ನೀರು ನಿಂತುಕೊಂಡು ರಾಡಿಯಾಗಿದೆ. ಅಲ್ಲಿ ತಮ್ಮ ತಮ್ಮ ಕೆಲಸಗಳಿಗೆ ಬೇರೆ ಕಡೆಗೆ ಜನರು ಹೊಗ ಬೇಕಾದರೆ ರಾಡಿಯಲ್ಲಿ ಕಾಲಿಟ್ಟುಕೊಂಡು ಹೋಗಬೇಕಾಗಿದೆ. ಇಂತಹ ಬೇಜವಾಬ್ದಾರಿ ಕೆಲಸ ಮಾಡಿದ ಗುತ್ತಿಗೆದಾರರ ಮೇಲೆ ಯೋಗ್ಯಕ್ರಮ ಕೈಗೊಳ್ಳಬೇಕು ಎಂದು ಅಲ್ಲಿಯ ನಿವಾಸಿ ಸುಲೇಮಾನ ಚೋಪದಾರ ಒತ್ತಾಯಿಸಿದ್ದಾರೆ.

loading...

LEAVE A REPLY

Please enter your comment!
Please enter your name here