28 ರಿಂದ ತೋಟಗಾರಿಕೆ ವಿವಿಯ ಕ್ರೀಡಾಕೂಟ

0
12
loading...

ಬಾಗಲಕೋಟ : ತೋಟಗಾರಿಕೆ ಮಹಾವಿದ್ಯಾಲಯದ 7ನೇ ಕ್ರೀಡಾಕೂಟಗಳು ಇದೇ ನವೆಂಬರ 28 ಮತ್ತು 29 ರಂದು ತೋಟಗಾರಿಗೆ ವಿವಿಯ ವಿದ್ಯಾನಗಿರಿಯ ಕ್ರೀಡಾಂಗಣದಲ್ಲಿ ನಡೆಯಲಿವೆ.
28 ರಂದು ಬೆಳಿಗ್ಗೆ 10 ಗಂಟೆಗೆ ತೋವಿವಿಯ ಕುಲಪತಿ ಡಾ.ಡಿ.ಎಲ್.ಮಹೇಶ್ವರ ಅವರು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಎಚ್.ವಾಯ್.ಮೇಟಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ತೋವಿವಿಯ ಪ್ರಧಾನ ಕಾರ್ಯದರ್ಶಿಗಳಾದ ರಾಜೀವ ಚಾವ್ಲಾ, ಐ.ಎಸ್.ಎನ್.ಪ್ರಸಾದ್ ಸೇರಿದಂತೆ ವ್ಯವಸ್ಥಾಪಕ ಮಂಡಳಿಯ ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ.
29 ರಂದು ಕ್ರೀಡಾಕೂಟಗಳ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾಮಾರ್ಟಿನ್, ಅದ್ಯಕ್ಷತೆಯನ್ನು ತೋವಿವಿಯ ಕುಲಪತಿ ಡಾ.ಡಿ.ಎಲ್.ಮಹೇಶ್ವರ. ಅತಿಥಿಗಳಾಗಿ ತೋವಿವಿಯ ಕುಲಸಚಿವ ಡಾ.ಎಂ.ಬಿ.ಮಾಡಲಗೇರಿ, ಸಂಶೋಧನ ನಿರ್ದೇಶಕ ಡಾ.ಜೆ.ವೆಂಕಟೇಶ, ವಿಸ್ತರಣಾ ನಿರ್ದೇಶಕ ಡಾ.ಎ.ಬಿ.ಪಾಟೀಲ ಸೇರಿದಂತೆ ವಿವಿಧ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಅವರು ಆಗಮಿಸಲಿದ್ದಾರೆ.

loading...

LEAVE A REPLY

Please enter your comment!
Please enter your name here