ಅಂಬೇಡ್ಕರ ರವರ ಮಹಾ ಪರಿನಿರ್ವಾಣ ದಿನ

0
42
loading...

6kwr1ಕಾರವಾರ,7: ದಲಿತರ ಧ್ವನಿಯಾಗಿರುವ ಅಂಬೇಡ್ಕರ್ ಅವರು ತಮ್ಮ ಬದುಕಿನ ಉದ್ದಕ್ಕೂ ಅಸ್ಪøಶ್ಯತೆಯ ವಿರುದ್ಧ ಹೋರಾಡಿ, ದಲಿತರಿಗೆ ನ್ಯಾಯ ಒದಗಿಸುವುದರೊಂದಿಗೆ ಸಮಾನತೆಯ ಕನಸು ಕಂಡವರು ಎಂದು ನಗರಸಭೆ ಸಹಾಯಕ ಕಾರ್ಯ ಅಭಿಯಂತರ ಕೆ. ಎಂ. ಮೋಹನ್‍ರಾಜು ಹೇಳಿದರು.

ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ವತಿಯಿಂದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ ರವರ 59ನೇ ಮಹಾ ಪರಿನಿರ್ವಾಣ ದಿನವನ್ನು ಹಬ್ಬುವಾಡದ ಗ್ರಂಥಾಲಯದ ಆವರಣದಲ್ಲಿ ರವಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ ರವರು ತಮ್ಮ ಕೊನೆಯುಸಿರು ಇರುವವರೆಗೂ ದಲಿತರ ಬಗ್ಗೆ ಹೋರಾಡಿದ್ದರು. ಅಂಬೇಡ್ಕರ ರವರು ನಿಧನರಾದಾಗ ಸುಮಾರು 20 ಲಕ್ಷ ಜನ ಸಮೂಹ ಸೇರಿದ್ದು, ಸಾವಿನ ನಂತರ ಇಂತಹ ಮಹಾನ್ ಗೌರವ ಕೇವಲ ಅಂಬೇಡ್ಕರ ರವರಿಗೆ ಮಾತ್ರ ಸಲ್ಲಲು ಸಾಧ್ಯವೆಂದು ಅಭಿಪ್ರಾಯ ಪಟ್ಟರು.

ಇಂದಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಟ್ಟ ವ್ಯಸನಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈ ಕೆಟ್ಟ ವ್ಯಸನದಿಂದ ಹೊರಬಂದು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬೇಕು. ಹೀಗಾಗಿ ಪ್ರತಿಯೊಬ್ಬರೂ ಅಂಬೇಡ್ಕರರವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು. ಆಗ ಮಾತ್ರ ಎಲ್ಲರೂ ಉತ್ತಮ ವ್ಯಕ್ತಿತ್ವವುಳ್ಳ ನಾಗರಿಕರಾಗಿ ಬದುಕಲು ಸಾಧ್ಯವೆಂದು ಸೂಚಿಸಿದರು.
ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಲಿಷಾ ಜಿ. ಯಲಕಪಾಟಿ ಯವರು ಮಾತನಾಡಿ, ದೇಶದ ಪ್ರತಿಯೊಬ್ಬರೂ ಅಂಬೇಡ್ಕರ ರವರ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಹಾಗೂ ಅವರ ಮಹಾನ್ ಸಾಧನೆಗಳು ಎಲ್ಲರಿಗೂ ಆದರ್ಶವಾಗಿರಬೇಕೆಂದು ಹೇಳಿದರು.

ಹಿಂದಿನ ಕಾಲದಲ್ಲಿ ದಲಿತರು ಅಸ್ಪøಶ್ಯತೆಯನ್ನು ಸಾಕಷ್ಟು ಅನುಭವಿಸುದ್ದಾರೆ. ಬಾವಿಯಲ್ಲಿನ ನೀರೂ ಸಹ ದಲಿತರಿಗೆ ಸಿಗುತ್ತಿರಲಿಲ್ಲ. ಇಂತಹ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಇಂದು ದಲಿತರಿಗೆ ಪ್ರತ್ಯೇಕ ಸ್ಥಾನಮಾನವನ್ನು ಒದಗಿಸಿಕೊಟ್ಟಂತಹ ಅಂಬೇಡ್ಕರ ರವರನ್ನು ಪ್ರತಿಯೊಬ್ಬ ದಲಿತನು ಸ್ಮರಿಸಬೇಕೆಂದು ತಿಳಿಸಿದರು.

ಕದರವೇ ರಾಜ್ಯ ಕಾರ್ಯದರ್ಶಿ ವಿರುಪಾಕ್ಷಗೌಡಾ ಪಾಟೀಲ ರವರು ಕಾರ್ಯಕ್ರಮದ ಆರಂಭದಲ್ಲಿ ಅಂಬೇಡ್ಕರ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಅಂಬೇಡ್ಕರ ರವರು ದಲಿತರ ಕಣ್ಣೀರನ್ನು ದೂರ ಮಾಡಿ ಎಲ್ಲರ ಬಾಳಿನಲ್ಲಿ ಬೆಳಕು ಮೂಡಿಸಿದ್ದಾರೆಂದು ಹೇಳಿದರು. ಈ ಸಂದರ್ಭದಲ್ಲಿ ಅಂಬೇಡ್ಕರ ರವರ ಅಗಲಿಕೆಯನ್ನು ನೆನೆಸಿ ಒಂದು ನಿಮಿಷ ಮೌನಾಚರಣೆಯನ್ನು ಮಾಡಲಾಯಿತು. ಚಿನ್ನಾ ಬಿ. ಯಲಕಪಾಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಈ ಸಂದರ್ಭದಲ್ಲಿ ಕದರವೇ ತಾಲೂಕಾಧ್ಯಕ್ಷ ಯಲ್ಲಪ್ಪಾ ವಡ್ಡರ, ಜೋಯಿಡಾ ತಾಲೂಕಾಧ್ಯಕ್ಷ ಸಂಜಯ ಕಾಂಬಳಿ, ಗ್ರಾಮೀಣಾಧ್ಯಕ್ಷ ಗಣಪತಿ ನಾಯ್ಡು, ಮಹಾದೇವ ಕಾಂಬಳೆ, ಎ.ರಾಣೆ, ರಾಜೇಶ ಎಮ್.ಎಚ್., ಪಿ.ಎಂ.ದೇವಬಾಬು, ರಾಜೇಂದ್ರ ಮಾದರ, ಸುರೇಶ ಮಡಿವಾಳ, ಸುನೀಲ ಶೆಟ್ಟಿ, ರಘುನಾಥ, ಪ್ರಶಾಂತ, ಹುಲಿಗೆಪ್ಪ, ಬೀರಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು..

loading...

LEAVE A REPLY

Please enter your comment!
Please enter your name here