ಅಕ್ರಮ ಮೀನುಗಾರಿಕೆ: 8 ದೋಣಿಗಳ ವಶ

0
17
loading...


ಕಾರವಾರ : ಇಲ್ಲಿನ ಸಮುದ್ರದಲ್ಲಿ ಅನುಮತಿ ಇಲ್ಲದೆ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿರುವ ಹೊರ ರಾಜ್ಯದ ಔಟ್‍ಬೋರ್ಡ್ ಎಂಜಿನ್ ಪಾತಿ ದೋಣಿಗಳ ಮೇಲೆ ಕ್ರಮ ಕೈಗೊಳ್ಳಲು ಮೀನುಗಾರಿಕೆ ಇಲಾಖೆ ಮುಂದಾಗಿದೆ. ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಅಲಿಗದ್ದಾದಲ್ಲಿರುವ ಅನೇಕ ಪಾತಿ ದೋಣಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ನಗರದ ಲಂಡನ್ ಬ್ರಿಜ್ ಸಮೀಪ ನಿಂತಿದ್ದ 8 ಔಟ್‍ಬೋರ್ಡ್ ಯಮಹಾ ಎಂಜಿನ್ ಹೊಂದಿದ 8 ದೋಣಿಗಳನ್ನು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಎಲ್.ದೊಡ್ಮನಿ ಹಾಗೂ ಇತರ ಅಧಿಕಾರಿಗಳು ಸೇರಿ ವಶಪಡಿಸಿಕೊಂಡಿದ್ದಾರೆ. ಕರ್ನಾಟಕ ಮರೈನ್ ಫೀಷರೀಸ್ ರೆಗ್ಯುಲೇಷನ್ ಆ್ಯಕ್ಟ್ ಪ್ರಕಾರ ಹೊರ ರಾಜ್ಯದ ಮೀನುಗಾರರು ಕರ್ನಾಟಕ ವ್ಯಾಪ್ತಿಯ 12 ನಾಟಿಕಲ್‍ಮೈಲ್ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ಸಾಧ್ಯವಿಲ್ಲ. ಆದರೆ, ಕಾರವಾರದಲ್ಲಿ ತಮಿಳುನಾಡಿನಿಂದ ಬಂದ 50 ಕ್ಕೂ ಹೆಚ್ಚು ಮೀನುಗಾರರು ಇಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಎನ್ನಲಾಗಿದೆ. ಆ ದೋಣಿಗಳಿಗೆ ನೋಂದಣಿ ಸಂಖ್ಯೆ ಸೂಕ್ತ ದಾಖಲೆಗಳೂ ಇಲ್ಲ ಎನ್ನಲಾಗಿದೆ. ಹೊರ ರಾಜ್ಯದ ಔಟ್‍ಬೋರ್ಡ್ ಇಂಜಿನ್ ಹೊಂದಿದ ಮೀನುಗಾರರು ಸ್ಥಳೀಯ ಮೀನುಗಾರರ ಸಹಕಾರ ಪಡೆದು ಇಲ್ಲಿ ಬಂದು ವಾಸವಿದ್ದಾರೆ ಎನ್ನಲಾಗಿದೆ. ಸ್ಥಳೀಯರಂತೆ ಬಲೆ ಹಾಕಿ ಅವರು ಮೀನು ಹಿಡಿಯುತ್ತಿಲ್ಲ. ಗಾಳ ಬಳಸಿ, ಮರದ ದಿಮ್ಮಿಗಳನ್ನು ಸಮುದ್ರದಲ್ಲಿ ಹಾಕಿ, ಬಟ್ಟೆಗಳನ್ನು ಹಾಕಿ ಅ ಸಾಂಪ್ರದಾಯಿಕವಾಗಿ ಕಪ್ಪೆ ಬೋಂಡಾಸ್ ಮುಂತಾದ ಮೀನುಗಳನ್ನು ಹಿಡಿಯುತ್ತಾರೆ ಎನ್ನಲಾಗಿದೆ.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here