ಅಗ್ನಿ ಅನಾಹುತ : ಲಕ್ಷಾಂತರ ರೂ. ಹಾನಿ

0
8
loading...


ಕಾರವಾರ : ನಗರದ ಹೈಚರ್ಚ್ ಬಳಿಯ ಗಾಂಧಿನಗರದ ಮಹಾಲೆ ಕಂಪೌಂಡ್‍ನಲ್ಲಿರುವ ಮನೆ ಮೇಲ್ಮಹಡಿಯ ಕೋಣೆಯಲ್ಲಿ ಶನಿವಾರ ಬೆಂಕಿ ಅನಾಹುತ ಸಂಭವಿಸಿದ್ದು ಲಕ್ಷಾಂತರ ರೂ. ಹಾನಿ ಸಂಭವಿಸಿದ್ದು ಅಗ್ನಿಶಾಮದಳದವರು ಆಗಮಿಸಿ ಹೆಚ್ಚಿನ ಹಾನಿಯನ್ನು ತಪ್ಪಿಸಿದ್ದಾರೆ.
ರಾಜೇಂದ್ರ ಮಹಾಲೆ ಎನ್ನುವರಿಗೆ ಸೇರಿದ ಮನೆ ಇದಾಗಿದ್ದು ಮೇಲ್ಮಹಡಿಯನ್ನು ದಿನೇಶ ನಾಯ್ಕ ಎನ್ನುವವರಿಗೆ ಬಾಡಿಗೆಗೆ ನೀಡಿದ್ದರು. ಶುಕ್ರವಾರ ದಿನೇಶ ಅವರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಶನಿವಾರ ಬೆಳಿಗ್ಗೆ ಅವರ ಬಾಡಿಗೆ ಮನೆಗೆ ಬೆಂಕಿ ಆವರಿಸಿಕೊಂಡಿತ್ತು. ಅದೇ ವೇಳೆಗೆ ರಾಜೇಂದ್ರ ಅವರ ಪತ್ನಿ ಮನೆಯ ಹೊರಗೆ ಬಂದಿದ್ದರಿಂದ ಮೇಲ್ಮಹಡಿಯಿಂದ ದಟ್ಟವಾದ ಹೊಗೆಯನ್ನು ಕಂಡು ಕೂಗಾಡಲು ಪ್ರಾರಂಭಿಸಿದರು. ಬಳಿಕ ಮನೆಯವರು ಹಾಗೂ ಸುತ್ತಮುತ್ತಲಿನ ಜನರು ಸೇರಿ, ಅಗ್ನಿಶಾಮದ ದಳಕ್ಕೆ ಮಾಹಿತಿ ನೀಡಿದರು.
ದಿನೇಶ ಅವರ ಬಾಡಿಗೆ ರೂಮಿನಲ್ಲಿದ್ದ ಟಿವಿ, ಫ್ರಿಜ್, ಪ್ರಮುಖ ದಾಖಲೆಗಳಿರುವ ಲ್ಯಾಪ್‍ಟಾಪ್ ಹಾಗೂ ಗೃಹಬಳಕೆಯ ಇನ್ನಿತರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ಆರಿಸಿದ್ದು ಹತ್ತಿರಲ್ಲದೇ ಇನ್ನಷ್ಟು ಬಾಡಿಗೆ ಮನೆಗಳಿಗೆ ಸಂಭವಿಸಬಹುದಾದ ಅನಾಹುತ ತಪ್ಪಿಸಿದ್ದಾರೆ.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here