ಅಣ್ಣ ತಂಗಿಯ ಸಂಬಂದ ಮರೆತ ಕಾಮುಕ ಅಣ್ಣ

0
167
loading...

ರಾಮದುರ್ಗ 20ಃ ಪವಿತ್ರವಾದ ಅಣ್ಣ ತಂಗಿಯ ಸಂಬಂದವನ್ನು ಮರೆತು ಸ್ವಂತ ತಂಗಿಯ ಮೇಲೆ ಕಾಮುಕ ಅಣ್ಣನೊಬ್ಬ ಬಲವಂತವಾಗಿ ಅತ್ಯಾಚಾರ ನಡೆಸಿ ಪರಾರಿಯಾಗಿರುವ ಘಟನೆ ಶ್ರೀಪತಿ ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.
ಶ್ರೀಪತಿ ನಗರದ ಮಂಜುನಾಥ ಹನಮಂತಪ್ಪ ಶಿರಸಂಗಿ(24) ಎಂಬ ವ್ಯಕ್ತಿ ಅತ್ಯಾಚಾರ ಮಾಡಿದವ ಎಂದು ತಿಳಿದು ಬಂದಿದೆ. ಗಂಡನೊಂದಿಗೆ ಬಿಡುಗಡೆ ಹೊಂದಿದ ತನ್ನ ಸಹೋದರಿ ಟೆಲರಿಂಗ್ ಮಾಡಿಕೊಂಡು ತವರು ಮನೆಯಲ್ಲಿ ವಾಸವಾಗಿದ್ದಳು. ಶನಿವಾರ ಸಂಜೆ ಹಲಗತ್ತಿ ಬೈಪಾಸ್ ರಸ್ತೆ ದ್ವಿಚಕ್ರವಾಹನದಲ್ಲಿ ಕರೆದುಕೊಂಡು ಹೋಗಿ ಕಬ್ಬಿನ ಗದ್ದೆಯಲ್ಲಿ ಎಳೆದುಕೊಂಡು ಹೋಗಿ ಬಲತ್ಕಾರ ಮಾಡಿದ್ದು, ಮನೆಯವರಿಗೆ ಹೇಳಿದರೆ ಕೊಲೆ ಮಾಡುವದಾಗಿ ಬೆದರಿಕೆ ಕೂಡಾ ಹಾಕಿದ್ದಾನೆಂದು ಅತ್ಯಾಚಾರಕ್ಕೆ ಒಳಗಾದ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಅತ್ಯಾಚಾರ ಮಾಡಿರುವ ವ್ಯಕ್ತಿ ತಲೆ ಮರಿಚಿಕೊಂಡಿದ್ದು , ಆತನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಹಾಗೂ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಬೆಳಗಾವಿಗೆ ಸಿವ್ಹಿಲ್ ಆಸ್ಪತ್ರೆ ಕಳುಹಿಸಿಕೊಡಲಾಗಿದೆ.
ಪಿ.ಎಸ್.ಐ ಬಸಗೌಡ ಪಾಟೀಲ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದು, ಅತ್ಯಾಚಾರಿ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

loading...

LEAVE A REPLY

Please enter your comment!
Please enter your name here