ಅಪರಾದ ತಡೆ ಮಾಸಾಚರಣೆ ಹಾಗೂ ಕಾನೂನು ಜಾಗೃತಿ ಕಾರ್ಯಕ್ರಮ

0
30
loading...

ರಾಮದುರ್ಗ ಃ ಬಾಲ್ಯ ವಿವಾಹ, ಅತ್ಯಾಚಾರ ಹಾಗೂ ಅನೇಕ ದೌರ್ಜನ್ಯ ಚಟುವಟಿಕೆಗಳು ನಡೆದರೆ ಮಹಿಳೆಯರು ಪೊಲೀಸ್‍ರಿಗೆ ಭಯಪಡದೆ ಠಾಣೆಗೆ ಬಂದು ದೂರು ನೀಡಿದಾಗ ಮಾತ್ರ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯ ಎಂದು ಪಿಎಸ್‍ಐ ಬಸಗೌಡ ಪಾಟೀಲ ಹೇಳಿದರು.
ಸ್ಥಳೀಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಪೊಲೀಸ್ ಇಲಾಖೆ ಹಾಗೂ ಶ್ರೀ ಶಾರದಾ
ಮಹಿಳಾ ವಿವಿದ್ದೋಶಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಅಪರಾದ ತಡೆ
ಮಾಸಾಚರಣೆ ಹಾಗೂ ಮಹಿಳೆಯರಿಗಾಗಿ ಏರ್ಪಡಿಸಿದ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ
ಪಾಲ್ಗೊಂಡು ಅವರು ಮಾತನಾಡಿದರು.
ಸ್ತ್ರೀಯರ ಮೇಲೆ ಅನೇಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಕಾರಣ ಸ್ತ್ರೀಯರು ತಮ್ಮ ರಕ್ಷಣೆಗಾಗಿ ಇರುವ ಕಾನೂನುಗಳ ಜ್ಞಾನ ಪಡೆದು, ಜಾಗೃತರಾಗಬೇಕೆಂದು ಪಿಎಸ್‍ಐ ಬಸಗೌಡ ಪಾಟೀಲ  ಕರೆ ನೀಡಿದರು.
ಮಹಿಳಾ ವಿವಿದೊದ್ದೇಶಗಳ ಸಂಘದ ಅಧ್ಯಕ್ಷೆ ಶಾರದಾ ಪಾಳೇಕರ ಮಾತನಾಡಿ, ಪ್ರಾಚೀನ  ಕಾಲದಿಂದಲೂ ಮಹಿಳೆ ಪುರುಷರ ಅನುಭೋಗದ ವಸ್ತುವಾಗಿ ಪರಿಣಮಿಸಿದ್ದಾಳೆ. ಅದು ನಿಲ್ಲಬೇಕೆಂದರೆ ಮಹಿಳೆಯರು ತಮಗಾಗಿ ಇರುವ ಕಾನೂನು ಹಾಗೂ ಸರಕಾರಿ ಸೌಲಭ್ಯಗಳ ಜ್ಞಾನ ಪಡೆಯಬೇಕೆಂದು ತಿಳಿಸಿದರು.
ಆರ್. ಸಿ. ಹರ್ಲಾಪೂರ, ಜಿ ವಿ. ಕಡಿ, ಜುಬ್ಬಿಯಾ ಹೆಬ್ಬಾಳ, ಹಾಗೂ ಸಂಸ್ಥೆಯ ಸಿಬ್ಬಂದಿ ಇದ್ದರು. ಶೃತಿ ಹಂಜಿ ನಿರೂಪಿಸಿ ವಂದಿಸಿದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here