ಅಭಿವೃದ್ಧಿ ಕಾಮಗಾರಿ ಪುನರಾರಂಭ

0
15
loading...

08 HLY NPS-1•ಶಾಪುರಕರ ನಾಗರಾಜ
ಹಳಿಯಾಳ,8 : ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಎರಡನೇ ಹಂತದ 500 ಲಕ್ಷ ರೂ. ಮಂಜೂರಾದ ಕಾಮಗಾರಿ ಪೈಕಿ ಉಳಿದ 300 ಲಕ್ಷ ರೂ. ಮೊತ್ತದ ಕಾಮಗಾರಿಗಳು ಪುನರಾರಂಭಗೊಂಡಿವೆ. ನಿರಂತರ ನೀರು ಸರಬರಾಜು ಯೋಜನೆಯ ಪೈಪ್‍ಲೈನ್ ಅನ್ನು ರಸ್ತೆಯ ಅಂಚುಗಳಲ್ಲಿ ನೆಲದಡಿ ಅಳವಡಿಸುವ ಕಾಮಗಾರಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪುನಃ ಚಾಲನೆ ನೀಡಲಾಗಿದೆ.

ಹಳಿಯಾಳ ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಎರಡನೇ ಹಂತದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಒಟ್ಟು 500 ಲಕ್ಷ ರೂ. ಮಂಜೂರಾಗಿತ್ತು. ಈ ಪೈಕಿ ಈಗಾಗಲೇ 200 ಲಕ್ಷ ರೂ. ವೆಚ್ಚದಲ್ಲಿ ಹೊರಗಿನ ಗುತ್ತಿಗೇರಿ ಮೊದಲಾದ ವಾರ್ಡ್‍ಗಳಲ್ಲಿ ಸಿಮೆಂಟ್ ಚರಂಡಿ ನಿರ್ಮಾಣ ಹಾಗೂ ಚರಂಡಿ ಮೇಲೆ ಕವರ್‍ಬ್ಲಾಕ್‍ಗಳ ಅಳವಡಿಕೆ ಮಾಡಲಾಗಿತ್ತು. ಸಿದ್ಧರಾಮೇಶ್ವರಗಲ್ಲಿಯ ಸ್ಲಂ ಏರಿಯಾ, ಕುಸ್ತಿ ಅಖಾಡಾಕ್ಕೆ ಸಂಪರ್ಕಿಸುವ ರಸ್ತೆ, ಅಂಬೇಡ್ಕರಗಲ್ಲಿ ಮೂಲಕ ಸ್ಮಶಾನಕ್ಕೆ ಸಂಪರ್ಕಿಸುವ ರಸ್ತೆ, ಯಲ್ಲಾಪುರ ನಾಕಾ ಹತ್ತಿರ ಹಾಗೂ ಹೊಸೂರಗಲ್ಲಿ ಚೌಕಿಮಠ ಮೊದಲಾದ ಗಲ್ಲಿಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗಿದೆ.

[highlight]1 ಕೋಟಿ ರೂ. ರಸ್ತೆ:-[/highlight] ಕಾಳಗಿನಕೊಪ್ಪದೆಡೆಗೆ ಸಾಗುವ ಪಿಡಬ್ಲ್ಯೂಡಿ ರಸ್ತೆಯಿಂದ ಗುಡ್ನಾಪುರ ಆಶ್ರಯ ಬಡಾವಣೆ (ದೇಶಪಾಂಡೆ ನಗರ) ಮೂಲಕ ಹಾಯ್ದು ಚವ್ಹಾಣ ಪ್ಲಾಟ್, ಮೀನು ಮಾರುಕಟ್ಟೆ ಪ್ರದೇಶ, ಪೇಟೆ ರಸ್ತೆ, ಮೋತಿಕೆರೆ ದಂಡೆಯ ಮೇಲಿಂದ ಬಸ್ ನಿಲ್ದಾಣ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಯನ್ನು ಬರೋಬ್ಬರಿ 100 ಲಕ್ಷ ರೂ. ವೆಚ್ಚದಲ್ಲಿ ಮಾಡಲಾಗುವುದು. ಈ ಪೈಕಿ ದೇಶಪಾಂಡೆ ನಗರ ಹಾಗೂ ಚವ್ಹಾಣ ಪ್ಲಾಟ್ ನಡುವೆ ಖಾಸಗಿಯವರ ಜಮೀನು ಸ್ವಾಧೀನ ಪಡಿಸಿಕೊಂಡು ಹಾಗೂ ಕೆರೆಯ ಪಾಳಿಯ ಮೇಲೆ ಹೊಸ ರಸ್ತೆ ನಿರ್ಮಿಸಲಾಗುವುದು.

[highlight]ರಸ್ತೆ, ಚರಂಡಿ:-[/highlight] ದೇಶಪಾಂಡೆ ನಗರದ ಮುಖ್ಯರಸ್ತೆಯನ್ನೊಳಗೊಂಡು ಎಲ್ಲಾ ಉಪರಸ್ತೆಗಳನ್ನು ಅಭಿವೃದ್ಧಿಪಡಿಸಿ ಡಾಂಬರೀಕರಣ ಮಾಡಲಾಗುವುದು. ಕೆಲವೆಡೆ ಕಾಂಕ್ರಿಟ್ ಒಳರಸ್ತೆಗಳನ್ನು ನಿರ್ಮಿಸಲಾಗುವುದು. ಅವಶ್ಯಕತೆವಿರುವೆಡೆ ಚರಂಡಿ ನಿರ್ಮಾಣಗೊಳಿಸಲಾಗುವುದು ಹಾಗೂ ಎಲ್ಲಾ ಚರಂಡಿಗಳಿಗೆ ಕವರ್ ಬ್ಲಾಕ್ ಅಳವಡಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮನ್ಸೂರಅಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷೆ ಪ್ರೇಮಾ ಅಶೋಕ ತೋರಣಗಟ್ಟಿ, ಉಪಾಧ್ಯಕ್ಷ ಫಯಾಜ್‍ಅಹ್ಮದ ಶೇಖ, ಚೇರಮನ್ ಶ್ರೀದೇವಿ ಯಡೋಗಿ, ಸದಸ್ಯರಾದ ಶಂಕರ ಬೆಳಗಾಂವಕರ, ಮಂಜುಳಾ ಮಾನಗಾಂವಿ, ಇಂಜಿನೀಯರ್ ಹರೀಶ ಮೊದಲಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here