“ಅರಮನೆಗಳಿಗಿಂತ ಗುರುಮನೆಗಳೇ ಶ್ರೇಷ್ಠ” : ವಾಗೀಶಪಂಡಿತಾರಾಧ್ಯ ಶಿವಾಚಾರ್ಯರು

0
32
loading...


ನರಗುಂದ : ಸಂತ ಮಹಾತ್ಮರು, ಶರಣರು ಈ ದೇಶಕ್ಕೆ ಅಮೂಲ್ಯವಾದ ಕೊಡುಗೆ ಕೊಟ್ಟಿದ್ದಾರೆ ಅದುವೆ ಶಾಂತಿ. ಶಾಂತಿ-ಸಮಾಧಾನ.  ಅದನ್ನು ನಾವೇ ಹೊರಗೆಳೆಯುವ ಪ್ರಯತ್ನ ಮಾಡಬೇಕಾಗಿದೆ ಅನಾದಿ ಕಾಲದಿಂದಲೂ ಅರಮನೆಗಳ ಅರಸರಿಗೆ ಅರಿವನ್ನು ಕೊಡುವ ಕಾರ್ಯವನ್ನು ಗುರುಮನೆಯಲ್ಲಿರುವ ಗುರುಗಳು ಮಾಡುತ್ತಿದ್ದರು. ಹೀಗಾಗಿ “ಅರಮನೆಗಳಿಗಿಂತ ಗುರುಮನೆಗಳೇ ಶ್ರೇಷ್ಠ”  ಎಂದು ತುಪ್ಪದಕುರಹಟ್ಟಿ ವಾಗೀಶಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.
ದೊರೆಸ್ವಾಮಿ ವಿರಕ್ತಮಠದಲ್ಲಿ  ಶುಕ್ರವಾರ ನಡೆದ 248 ನೇ ಮಾಸಿಕ ಶಿವಾನುಭವ ಹಾಗೂ ಸಾಧಕರಿಗೆ  ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು,  ಮನುಷ್ಯರು ಸಣ್ಣ,ಸಣ್ಣ ವಿಷಯಕ್ಕೆ  ವ್ಯಥೆ ಪಡುತ್ತಾ ಹಣದ ವ್ಯಾಮೋಹಕ್ಕೆ ಬಲಿಯಾಗಿ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ದುಡ್ಡು ಕೊಟ್ಟು ಏನು ಬೇಕಾದರೂ ಪಡೆಯಬಹುದು ಆದರೆ ನೆಮ್ಮದಿಯನ್ನು ಯಾವ ಅಂಗಡಿಯಿಂದಲೂ ಪಡೆಯಲಿಕ್ಕೆ  ಸಾಧ್ಯವಿಲ್ಲ.ಇದು ಶಿವಾನುಭವ ಹಾಗೂ ಸತ್ಸಂಗದಿಂದ ಮಾತ್ರ ಸಾದ್ಯ ಎಂದು ಹೇಳಿದರು.
ಕೆರೂರಿನ ಕಾಳಿದಾಸ ಮಹಾವಿದ್ಯಾಲಯದ  ಪ್ರೋ ಎನ್.ಎಮ್.ಹೊಟ್ಟಿಯವರು ಉಪನ್ಯಾಸದ ನೀಡಿ,  12ನೇ ಶತಮಾನದ ಬಸವಾದಿ ಶಿವಶರಣರು ತಮ್ಮ ವಚನಗಳ ಮೂಲಕ ಕಾಯಕ ದಾಸೋಹ ಮತ್ತು ಸಮಾನತೆಯನ್ನು ಸಾರಿದರು ಶರಣರು ಹೇಳುವಂತೆ ಶರಣಧರ್ಮ ಕೇವಲ ಆತ್ಮೋದ್ಧಾರ ನಿಷ್ಠವಾದುದಲ್ಲ  ಸಮಾಜೋದ್ಧಾರವು ಸಹ ಆಗಿದೆ ವ್ಯಕ್ತಿ ತನ್ನಲ್ಲಿ ದೇವರನ್ನು ಕಾಣುವ ಬದಲು ಸಮಾಜ ಸೇವೆಯಲ್ಲಿ ದೇವರನ್ನು ಕಾಣಬೇಕು ಎಂದಿದ್ದಾರೆ  ಬಸವಣ್ಣನವರು ಹೇಳುವ ಹಾಗೆ “ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ” ಎನ್ನುವಂತೆ ಕೆಲಸ ಮಾಡಬೇಕಾಗಿದೆ  ಎಂದು ಹೇಳಿದರು.
ಶಿಕ್ಷಕ ಕೆ.ವಾಯ್.ಹಡಗಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ  2014 ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ಯಲ್ಲಪ್ಪ ಗುಡಾರದ ಹಾಗೂ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ನರಗುಂದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ವಿಧ್ಯಾರ್ಥಿ ಯೊಗೀಶ ಗಿರೀಶ. ಹಿರೇಮಠ, ನರಗುಂದ ಮೊರಾರ್ಜಿ ವಸತಿ ಶಾಲೆಯ ವಿಧ್ಯಾರ್ಥಿ ಅರವಿಂದ ವಡ್ಡಟ್ಟಿ ಹಾಗೂ ಭಾರತೀಯ ನೌಕಾ ಸೇನೆಯಲ್ಲಿ ಸಬ್ ಲೆಪ್ಟಿನೆಂಟ್ ಆಗಿ ಸೇವೆ ಸಲ್ಲಿಸುತ್ತಿರುವ ಬಾಲಾಜಿ ಬೆಳವಟಗಿಯವರಿಗೆ ಶ್ರೀಮಠದಿಂದ .ಸತ್ಕರಿಸಲಾಯಿತು.
ವೇದಿಕೆ ಮೇಲೆ ಶಾಂತಲಿಂಗ ಸ್ವಾಮೀಜಿ, ಎಸ್.ಎಫ್.ಕೊಣ್ಣೂರ, ಬಸವರಾಜ ನಿಂಗೋಜಿ, ನಿವೃತ್ತ ಶಿಕ್ಷಕ ಪಿ.ಎಫ್.ಆನಂದ್ರಭಾವಿ , ಗಿರೀಶ ಹಿರೇಮಠ, ಪ್ರೊ ಪಿ.ಎಸ್.ಅಣ್ಣಿಗೇರಿ, ನಿಂಗಪ್ಪ ನರಗುಂದ ,  ಲಕ್ಷ್ಮಣ ಶಂಭಪ್ಪ ನಿಂಗೋಜಿ, ಬಿ.ಬಿ.ಐನಾಪೂರ,  ರಾಮಣ್ಣ ಆನಂದ್ರಭಾವಿ,  ಗಿರಿಯಪ್ಪಗೌಡ ಕೆಂಚನಗೌಡ್ರ,  ಉಪಸ್ಥಿತರಿದ್ದರು.  ಪ್ರಭು ನಿಲಗುಂದ , ಸಿದ್ದು ಬಾಳಿಕಾಯಿ ಹಾಗೂ ಕೊಣ್ಣೂರಿನ ಬಸವೇಶ್ವರ ಭಜನಾ ಮಂಡಳಿಯ ಖಾನಸಾಬ ಮಸುತಿಮನಿಯವರಿಂದ  ವಚನ ಸಂಗೀತ ನೆರವೇರಿತು. ಕೆ.ಟಿ.ಪಾಟೀಲ ಸ್ವಾಗತಿಸಿದರು. ಪ್ರೋ ಆರ್.ಕೆ.ಐನಾಪೂರ ಕಾರ್ಯಕ್ರಮ ನಿರೂಪಿಸಿದರು.  ಶಿವಾನಂದ ಜೋಗಿಯವರ ಕೊನೆಯಲ್ಲಿ ವಂದಿಸಿದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here