ಅಸುರಕ್ಷಿತ ಗಂಡು ಹೆಣ್ಣಿನ ಸಂಬಂಧಗಳಿಂದ ಏಡ್ಸ್ : ಕಿರ್ಲೋಸ್ಕರ

0
35
loading...

04Ankola2ಅಂಕೋಲಾ,4 : ಅಸುರಕ್ಷಿತ ಅನೈತಿಕ ಗಂಡು ಹೆಣ್ಣಿನ ಸಂಬಂಧಗಳಿಂದ ಏಡ್ಸ್ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ ಎಂದು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಘಟಕ ಅಂಕೋಲಾದ ಆಪ್ತ ಸಮಾಲೋಚಕಿ ರಾಜೇಶ್ವರಿ ಕಿರ್ಲೋಸ್ಕರ ನುಡಿದರು.
ಅವರು ಇತ್ತೀಚೆಗೆ ನೆಹರು ಯುವ ಕೇಂದ್ರ ಕಾರವಾರ, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ ಸೇತು ಯೋಜನೆ ಅಂಕೋಲಾ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ ಸರಕಾರಿ ಪದವಿ ಪೂರ್ವ ಕಾಲೇಜ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ನಿಮಿತ್ತ ಏರ್ಪಡಿಸಲಾದ ಮಾರ್ಗದರ್ಶನ ಮತ್ತು ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಪ್ರಮುಖ ಉಪನ್ಯಾಸಕರಾಗಿ ಮಾತನಾಡಿ ಏಡ್ಸ್ ಹರಡುವಿಕೆಯ ವಿಧಾನಗಳ ಪರಿಪೂರ್ಣ ಜ್ಞಾನದಿಂದ ಸುರಕ್ಷತೆ ಯನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಸಹ ಅವರು ನುಡಿದರು.
ಸೇತು ಯೋಜನೆಯ ಸಮನ್ವಯಾಧಿಕಾರಿ ರಾಜು ವಿ. ಆಚಾರಿ ಇವರು ಮಾತನಾಡಿ ಎಚ್.ಐ.ವಿ. ಪೀಡಿತ ರನ್ನು ಆತ್ಮೀಯರನ್ನಾಗಿ ನಾವೆಲ್ಲರು ಕಾಣಬೇಕು ಎಂದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಎಸ್.ಆರ್. ನಾಯಕ ಅಧ್ಯಕ್ಷತೆವಹಿಸಿ ಮಾತ ನಾಡಿದರು. ಈ ಸಂದರ್ಭದಲ್ಲಿ ಸೇತು ಯೋನೆಯ ವೈದ್ಯಾಧಿಕಾರಿ ಡಾ. ಸುನಿತಾ ಪಟಗಾರ ಅವರು ಉಚಿತ ವೈದ್ಯಕೀಯ ತಪಾಸಣಾ ಮತ್ತು ಆರೋಗ್ಯದ ಬಗ್ಗೆ ವೈಯಕ್ತಿಕ ಸಲಹೆ ನೀಡಿ, ವಿದ್ಯಾರ್ಥಿನಿಯರ ರಕ್ತದ ಗುಂಪು ವಗೀಕರಣವನ್ನು ನಡೆಸಿದರು. ಸೇತು ಯೋಜನೆಯ ಸಿಬ್ಬಂದಿಗಳಾದ ಜಯಂತಿ ಗೌಡ, ಲೀನಾ ತಳೇಕರ, ಅನು ಎಸ್. ನಾಯ್ಕ, ಕವಿತಾ ನಾಯ್ಕ, ಸತ್ಯಾ ನಾಯ್ಕ ವೈದ್ಯಕೀಯ ತಪಾಸಣೆ ಸಹಕರಿ ಸಿದರು. ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಭಾರತಿ ನಾಯಕ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

loading...

LEAVE A REPLY

Please enter your comment!
Please enter your name here