ಆಯುರ್ವೇದ ಇಂದು ವಿಶ್ವವ್ಯಾಪಿಯಾಗುತ್ತಿದೆ: ಬನ್ನಿಗೋಳ

0
16
loading...


ತೇರದಾಳ 27: ಆಯುರ್ವೇದ ಪ್ರಪಂಚದ ಪ್ರಾಚೀನ ವೈದ್ಯಶಾಸ್ತ್ರವಾಗಿದ್ದು, ಇಂದು ಭಾರತದಲ್ಲಷ್ಟೆ ಅಲ್ಲ ಇಂದು ವಿಶ್ವವ್ಯಾಪಿಯಾಗಿ ಪ್ರಸಿದ್ದವಾಗುತ್ತಲಿದೆ ಎಂದು ದೆಹಲಿಯ ಸಿಸಿಐಎಂ ಎಕ್ಸಿಕ್ಯೂಟಿವ್ ಕಮೀಟಿಯ ಸದಸ್ಯ, ಬೆಂಗಳೂರಿನ ಆರ್‍ಜಿಯುಎಚ್‍ಎಸ್‍ನ ಸೆನೆಟ್ ಸದಸ್ಯ ಹುಬ್ಬಳ್ಳಿಯ ಡಾ|| ಶ್ರೀನಿವಾಸ ಬನ್ನಿಗೋಳ ಹೇಳಿದರು. ಬಾಹುಬಲಿ ವಿದ್ಯಾಪೀಠ, ಜೆ.ವಿ.ಮಂಡಳದ ಗ್ರಾಮೀಣ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ವಾರ್ಷಿಕೋತ್ಸವದ ಉಜ್ವಲ-2015 ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆಯ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ವೈದ್ಯಕೀಯ ರಂಗವು ಸ್ಪಧೆಯಿಂದ ಹೊರತಲ್ಲ ಎಂದರು.ಕಾಲೇಜಿನ ಪ್ರಿನ್ಸಿಪಾಲ ಡಾ.ವಿವೇಕಾನಂದ ಕುಲ್ಲೋಳ್ಳಿ ಅವರು ವಾರ್ಷಿಕ ವರದಿ ವಾಚಿಸಿದರು,
ಕರ್ನಾಟಕ ಸರ್ಕಾರದ ಆಯುಶ್ ಇಲಾಖೆಯ ಆರೋಗ್ಯ ಸಹ ನಿರ್ದೇಶಕಿ, ಬೆಂಗಳೂರಿನ ಡಾ|| ಹಸೀಬುನ್ನಿಸಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘವನ್ನು ಬೆಂಗಳೂರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಹಾಗೂ ಹುಬ್ಬಳ್ಳಿ ಎಎಂವಿ ಕಾಲೇಜಿನ ಕಾರ್ಯಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ! ಎ.ಎಸ್. ಪ್ರಶಾಂತ ಅವರು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ಆರ್‍ಜಿಯುಎಚ್‍ಎಸ್‍ನ ಸೆನೆಟ ಸದಸ್ಯ, ಇಲಕಲ್‍ದ ಎಸ್‍ವಿಎಮ್ ಮೆಡಿಕಲ್ ಕಾಲೇಜಿನ ಸೆನೆಟ್ ಮೆಂಬರ ಡಾ! ಪ್ರಕಾಶ ತಾರಿವಾಳ ಮಾತನಾಡಿದರು.
ಜೆವಿ ಮಂಡಳದ ಅಧ್ಯಕ್ಷ ಟಿ.ಸಿ.ಪಡಸಲಗಿ ಅಧ್ಯಕ್ಷತೆ ವಹಿಸಿದ್ದರು. ರಬಕವಿಯ ಡಾ.ರವಿ ಜಮಖಂಡಿ, ಡಾ.ಸಿದ್ಧಲಿಂಗೇಶ ಕುದರಿ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರಿನ ಮಹ್ಮದ ಮುಜೀಬ ರೆಹಮಾನ್, ವಿದ್ಯಾಪೀಠದ ಕಾರ್ಯದರ್ಶಿ ಡಿ.ಸಿ. ಪಾಟೀಲ, ಬಹುಬಲಿ ಬ್ರಹ್ಮಚರ್ಯಾಶ್ರಮದ ಸನಥ್‍ಕುಮಾರ ಅರವಡೆ, ಬಿ.ಟಿ. ಬೆಡಗೆ ಗುರೂಜಿ, ಕಾಲೇಜಿನ ಡಾ|| ಶೀತಲ ಸದ್ದಲಗಿ, ಡಾ|| ಶೀತಲ್ ಕಾಗಿ, ಡಾ|| ಮುರಲೀಧರ ಬಡಿಗೇರ, ಡಾ|| ಪ್ರದೀಪ ಹನಗಂಡಿ, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು. ವೀಣಾ ಮತ್ತು ಸಂಗಡಿಗರು ಧನ್ವಂತರಿ ಪ್ರಾರ್ಥನೆ ಹೇಳಿದರು. ಕಾಲೇಜಿನ ಕಾರ್ಯದರ್ಶಿ ಡಾ|| ಜೆ.ಬಿ. ಆಲಗೂರ ಸ್ವಾಗತಿಸಿದರು. ದೀಪಿಕಾ ಅರಸ್, ಪವನ ದೇಶಪಾಂಡೆ ನಿರುಪಿಸಿದರು. ಸಂಸ್ಥೆಯ ಖಜಾಂಚಿ ನಿಲೇಶ ದೇಸಾಯಿ ವಂದಿಸಿದರು.

loading...

LEAVE A REPLY

Please enter your comment!
Please enter your name here