ಆಸ್ಪತ್ರೆಗೆ ಕಾಡುತ್ತಿದೆ ವೈದ್ಯರ ಸಮಸ್ಯೆ ಇದ್ದ ವೈದ್ಯರು ಸರಿಯಾದ ಸಮಯಕಿಲ್ಲ ಹಾಜರ್

0
96
loading...

 

ಶ್ರೀನಿವಾಸ ಪಟ್ಟಣ

ಅಥಣಿ 14 : ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿರುವ ಸಾರ್ವಜನಿಕ ಸರಕಾರಿ ಅಸ್ಪತ್ರೆಯ ಸ್ಥಿತಿಗತಿ.
ಸಾಮಾನ್ಯವಾಗಿ ಆಸ್ಪತೆಗಳೆಂದರೆ ಶುಚಿತ್ವ ಹೊಂದಿರಬೇಕು.. ಅಲ್ಲಿಗೆ ಬರುವ ರೋಗಿಗಳ ರೋಗಗಳು ಮಾಯವಾಗಬೇಕು.. ಅಸ್ಪತ್ರೆಗೆ ಬರುವ ರೋಗಿಗಳು ವೈದ್ಯರನ್ನ ಕಂಡು ವೈದ್ಯೋ ನಾರಾಯಣೋ ಹರಿಃ ಎನ್ನುವ ಭಾವ ಬರಬೇಕು.. ಆದರೆ ಅಥಣಿ ಪಟ್ಟಣದಲ್ಲಿರುವ ಸರಕಾರಿ ಅಸ್ಪತ್ರೆಯಲ್ಲಿ ಇಲ್ಲಗಳದ್ದೇ ಎಲ್ಲಾ.. ಇಲ್ಲಿಗೆ ಬಂದರೆ ರೋಗ ಹೋಗುವ ಬದಲು ಹೆಚ್ಚಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.

ಈ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಹೆಚ್ಚಾಗಿ ಕಂಡು ಬರುತ್ತದೆ.. ಇಲ್ಲಿ ಈಗ ಮಂಜೂರಾಗಿರುವ ವೈದ್ಯ ಸಿಬ್ಬಂದಿಗಳು 14 ಒಟ್ಟು 74 ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕಾಧ ಸ್ಥಳದಲ್ಲಿ ಕೇವಲ 27 ಜನ ಮಾತ್ರ ಕಾರ್ಯನಿರ್ವಹಿಸುತ್ತದ್ದಾರೆ. ಈಗಿರುವ ವೈದ್ಯರ ಸಂಖ್ಯೆ ಕೇವಲ 7 ಜನ ಮಾತ್ರ ಕೆಲಸ ಮಾತ್ರ ನಿರ್ವಹಿಸುತ್ತಿದ್ದಾರೆ. ಇನ್ನೂ ಇಲ್ಲಿ 9 ಜನ ವೈದ್ಯರ ಕೊರತೆ ಇದೆ.. ಅಲ್ಲದೆ ಇಲ್ಲಿಗೆ ಬರುವ ಸ್ತ್ರೀ ರೋಗ ತಜ್ಜ ಮತ್ತು ಚಿಕ್ಕ ಮಕ್ಕಳ ತಜ್ಜರಿಲ್ಲದೆ ಬಡ ರೋಗಿಗಿಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೆಲ ಸರ್ಕಾರಿ ವೈದ್ಯರು ತಮ್ಮ ಖಾಸಗಿ ಆಸ್ಪತ್ರೆಗಳನ್ನು ನಡೆಸುತ್ತಿದ್ದು ಅವರು ಸರಕಾರಿ ಅಸ್ಪತ್ರೆಯಲ್ಲಿ ಬರುವ ರೋಗಿಗಳನ್ನ ತಮ್ಮ ಖಾಸಗಿ ಆಸ್ಪತೆಗಳಿಗೆ ಕರೆದುಕೊಂಡು ಹೋಗಿ ಸುಲಿಗೆ ಮಡುತ್ತಿರುವದು ಸಾಮಾನ್ಯವಾಗಿದೆ ಎನ್ನುವುದು ಜನಸಾಮಾನ್ಯರ ಆರೋಪ. ಈಗಾಗಲೆ ಅಥಣಿ ಶಾಸಕ ಲಕ್ಷ್ಮಣ ಸವದಿ ನೀಡಿರುವ 12 ಲಕ್ಷ ರೂ ಮೌಲ್ಯದ ಸೋನೊಗ್ರಾಫೀಕ್ ಯಂತ್ರವನ್ನ ಬಳಕೆ ಮಾಡದೆ ತಜ್ಜ ವೈದ್ಯರಿಲ್ಲದೆ ತುಕ್ಕು ಹಿಡಿದು ಮೂಲೆ ಸೇರಿದೆ ಇದರಿಂದ ಇಲ್ಲಿಗೆ ಬರುವ ಬಡ ರೋಗಿಗಳ ಹೆಚ್ಚಿಗೆ ಹಣ ಕೊಟ್ಟು ಖಾಸಗಿಯವರ ಬಳಿ ತಮ್ಮ ಸೋನೊಗ್ರಾಫಿ ಮಾಡಿಸಿಕೊಳ್ಳುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.

ಅಥಣಿ ತಾಲೂಕಾ ಆಸ್ಪತ್ರಯ ವೈದ್ಯರು ಸರಿಯಾದ ಸಮಯಕ್ಕೆ ಕೆಲಸಕ್ಕೆ ಬರುವದಿಲ್ಲಾ ಅನ್ನುವ ಆರೋಪ ಕೇಳಿ ಬರುತ್ತಿದೆ. ಅಲ್ಲದೆ ತಾಲುಕಿನ ಎಲ್ಲ ಹಳ್ಳಿಗಳಿಂದ ಬರುವ ಬಡ ರೋಗಿಗಳ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಮಾಡಲು ವೈದೆರೇ ಇರುವದಿಲ್ಲ ಅನ್ನುವ ಅಂಶ ಪ್ರಮುಖವಾದದ್ದು. ಈ ಆಸ್ಪತ್ರೆಯಲ್ಲಿ ಬರುವ ಬಡ ರೋಗಿಗಳಿಗೆ ಶುದ್ದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ.. ಇಲ್ಲಿರುವ ನೀರು ಶುಧ್ದಿಕರುಣ ಘಟಕ ಸಹ ತುಕ್ಕು ಹಿಡಿದಿದ್ದು ಅದನ್ನ ಸಹ ಸರಿಯಾಗಿ ನಿರ್ವಹಣೆ ಮಾಡದೆ ಹಾಳಾಗಿದ್ದು.. ಶುದ್ದ ಕುಡಿಯುವ ನೀರು ಸಿಗದ ಬಡ ರೋಗಿಗಳು ಪರದಾಡುವಂತಾಗಿದೆ. ಇದು ಸಾಲದೆ ಆಸ್ಪತ್ರೆಯ ಸುತ್ತಮುತ್ತಲೂ ಸಹ ಗಲಿಜು ವಾತಾವರಣ ನಿರ್ಮಾಣವಾಗಿದೆ.. ಆಸ್ಪತ್ರೆಯ ಪ್ರಸೂತಿ ವಿಭಾಗದ ಪಕ್ಕದಲ್ಲೇ ಸಾರ್ವಜನಿಕ ಮೂತ್ರ ವಿಸರ್ಜನೆ ಮಾಡುವ ಸ್ಥಳವಿದ್ದು ಇದರಿಂದ ಬರುವ ಗಬ್ಬು ನಾಥ ಬಾಣಂತಿಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬಿರುತ್ತದ್ದರು ಇದರ ಬಗ್ಗೆ ಯಾವುದೆ ಕ್ರಮ ಕೈಗೊಂಡಿಲ್ಲಾ. ಅಲ್ಲದೆ ತಾಲೂಕನಲ್ಲಿ ಯಾವುದೆ ಸ್ಥಳಲ್ಲಿ ಅಪಘಾತ ಸಂಭವಿಸಿದಲ್ಲಿ ಇದೆ ಒಂದು ಸಾರ್ವಜನಿಕ ಆಸ್ಪತ್ರೆ ಇರುವದು. ಗಂಭೀರವಾಗಿ ಗಾಯಗೊಂಡ ಜನ್ರನ್ನ ಚಿಕಿತ್ಸೆ ಮಾಡಲು ತೀವ್ರ ನಿಗಾಘಟಕ ಸಹ ಇಲ್ಲಾ, ಅಲ್ಲದೆ ತಜ್ಞ ವೈದ್ಯರು ಇಲ್ಲದೆ ಸಾವಿವುಗಳ ಸಂಖ್ಯೆ ಹೆಚ್ಚಾಗುತ್ತಿದೆ.. ಇದಕ್ಕೂ ಪ್ರಮುಖವಾದ ಅಂಶ ಎಂದರೆ ಅಥಣಿ ತಾಲೂಕಿನಿಂದ ಯಾವುದೆ ಗಂಬೀರ ಸ್ಥೀತಿಯಲ್ಲಿರು ರೋಗಿಯನ್ನ ಹೆಚ್ಚನ ಚಿಕಿತ್ಸೆಗೆ ಕಳುಹಿಬೇಂದ್ರೆ ಕನಿಷ್ಠ 75 ಕಿ ಮಿ ದೂರ ಹೋಗಲೇ ಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ.. ಹಾಗಾಗಿ ಅಥಣಿ ಪಟ್ಟಣಕ್ಕೋಂದು ತುರ್ತು ಚಿಕಿತ್ಸಾ ಘಟಕದ ಅನಿವಾರ್ಯತೆ ಇದ್ದು, ಇದರ ಬಗ್ಗೆ ಹಲವು ವರ್ಷಗಳಿಂದ ಬೇಡಿಕೆ ಇದ್ದುರು ಸರಕಾರ ಅಥವಾ ಜನ ಪ್ರತಿನಿಧಿಗಳ ಇಚ್ಚಾ ಶಕ್ತಿ ತೋರಿಲ್ಲಾ.

ಬಾಕ್ಷ: ಖಾಲಿ ಇರುವ ನರ್ಸಗಳ ಸಂಖ್ಯೆ 2

* ಡಿ ಗ್ರೂಪ್ 30
* ಪ್ರಥಮ ದರ್ಜೇ ಸಹಾಯಕರು 2
* ಹಿರೀಯ ಔಷಧ ವಿತರಕರು 1
* ಪ್ರಮುಖ ತಜ್ಞ ವೈದ್ಯರು 9
* ಒಟ್ಟು 27 ಜನ ಸಿಬ್ಬಂಧಿಗಳ ಕೊರತೆ ಇದೆ.

ಅಥಣಿ ಸರಕಾರಿ ಆಸ್ಪತ್ರೆಯಲ್ಲಿ ಪ್ರತಿ ತಿಂಗಳಿಗೊಮ್ಮೆ ಲ್ಯಾಭ್ರೋಸ್ಕೋಪಿಕ್ ±ಸ್ತ್ರ ಚಿಕಿತ್ಸೆ ಮಾಡುತ್ತಾರೆ.. ಹೆಚ್ಚಿನ ಸಂಖ್ಯೆಲ್ಲಿ ಮಹಿಳೆಯರು ಶಸ್ತ್ರ ಚಿಕಿತ್ಸೆ ಮಾಡಿಕೊಂಡಲ್ಲಿ ಅವರಿಗೆ ಬೇಡ್ ಗಳ ಕೊರತೆ ಇದ್ದು ವೇಂಟಿಲೆಷನ್ ಸಹ ಇಲ್ಲದೆ ಆ ಮಹಿಳೆಯರನ್ನ ನೇಲದ ಮೇಲೆ ಮಲಗಿಸುವ ಸ್ಥಿತಿ ಆ ದೇವರಿಗೆ ಪ್ರೀತಿ. ಈ ಅಮಾನವಿಯ ಘಟನೆ ಆಗಾಗ ಈ ಆಸ್ಪತ್ರೆಯಲ್ಲಿ ನಡೆಯುತ್ತದ್ದರು ಯಾರು ತಲೆ ಕೆಡಿಸಿಕೊಳ್ಳುವದಿಲ್ಲ.
ಒಟ್ಟಾರೆಯಾಗಿ, ಅಥಣಿ ತಾಲೂಕಿನಲ್ಲಿ ಇರುವ ಹತ್ತಾರು ಹಳ್ಳಿಗಳಿಂದ ಇಲ್ಲಿಗೆ ಬರುವ ಬಡ ರೋಗಿಗಳಿಗೆ ಉಪಚಾರ ಮಾಡಲು ವೈದ್ಯರು ಇಲ್ಲಾ.. ಸುಚಿತ್ವವನ್ನ ಹುಡುಕಿದ್ರು ಎಲ್ಲೂ ಇಲಾ,್ಲ ಇದು ರೋಗಗೃಸ್ಥ ಅಥಣಿ ಸರಕಾರಿ ಆಸ್ಪತ್ರೆಯ ಕರುಣಾಜನಕ ಕಥೆ.

loading...

LEAVE A REPLY

Please enter your comment!
Please enter your name here