ಈದ್ ಮಿಲಾದ್ ಪ್ರಯುಕ್ತ ದಾಂಡೇಲಿಯಲ್ಲಿ ಶಾಂತಿ ಸಭೆ

0
42
loading...

ದಾಂಡೇಲಿ : ಡಿಸೆಂಬರ 24 ರಂದು ನಡೆಯಲಿರುವ ಈದ್ ಮಿಲಾದ್ ಪ್ರಯುಕ್ತ ದಾಂಡೇಲಿಯ ಪೋಲಿಸ್ ಇಲಾಖೆಯ ನೇತೃತ್ವದಲ್ಲಿ ನಗರದ ಡಿಲಕ್ಸ್ ಸಭಾಭವನದಲ್ಲಿ ಶನಿವಾರ ಶಾಂತಿ ಸಭೆ ನಡೆಯಿತು.

ಸಭೆಯನ್ನುದ್ದೇಸಿಸಿ ಮಾತನಾಡಿದ ಡಿ.ವೈ.ಎಸ್.ಪಿ ದಯಾನಂದ ಪವಾರವರು ದಾಂಡೇಲಿ ಶಾಂತಿ ಸೌಹಾರ್ದಗೆ ಮಾದರಿಯಾದ ನಗರವಾಗಿದ್ದು, ಇಲ್ಲಿ ಎಲ್ಲ ಧಾರ್ಮಿಕ ಆಚರಣೆಗಳೂ ಶಾಂತಿಯುತವಾಗಿಯೇ ನಡೆಯುತ್ತವೆ. ಮುಂಬರುವ ಈದ ಮಿಲಾದ ಕೂಡಾ ಶಾಂತಿಯುತವಾಗಿ ನಡೆಯುತ್ತೆ ಎಂಬ ಭರವಸೆ ನಮಗಿದೆ ಎಂದ ಅವರು ನಗರದ ಟ್ರಾಫಿಕ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತಾಗಿ ಸಭೆಯಲ್ಲಿ ಸಾರ್ವಜನಿಕರಿಂದ ಬಂದ ವಿಚಾರಗಳನ್ನು ಶೀಘ್ರವಾಗಿ ಪರಿಹರಿಸುವ ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿದ್ದ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ತಂಗಳರವರು ಪ್ರವಾದಿ ಮಹಮ್ಮದ್‍ರ ಜನ್ಮದಿನಾಚರಣೆಯ ಪ್ರಯುಕ್ತ ನಡೆಯುವ ಈದ್ ಮಿಲಾದ ಹಬ್ಬದ ಸಂದರ್ಭದಲ್ಲಿ ಮಹಮ್ಮದ್ ಪೈಗಂಬರರ ತತ್ವಾದರ್ಶಗಳನ್ನು ಪಾಲಿಸುವ ಕೆಲಸವಾಗಬೇಕು. ನಮ್ಮೊಳಗಿರುವ ಬಿನಾಭಿಪ್ರಾಯಗಳನ್ನು ಮರೆತು ಸರ್ವರೊಂದಾಗಿ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದರು.

ವೇದಿಕೆಯಲ್ಲಿ ನಗರೆಸಭೆ ಉಪಾಧ್ಯಕ್ಷ ರಾಜು ರುದ್ರಪಾಟಿ, ಸಿ.ಪಿ.ಐ ಪ್ರಶಾಂತ ಸಿದ್ದನಗೌಡರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಾಸ್ಮಿನ್ ಕಿತ್ತೂರವರು ಶಂತಿಯುತವಾಗಿ ಈದ ಮಿಲಾದ ಆಚರಿಸುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ನೂರ್ ಎ. ಇಸ್ಲಾಂ ಟ್ರಸ್ಟ್‍ನ ಅಧ್ಯಕ್ಷ ಇಕ್ಬಾಲ ಶೇಖ, ಕರವೇ ಅಧ್ಯಕ್ಷ ಗುರು ಮಠಪತಿ, ನಗರಸಭೆ ಮಾಜಿ ಅಧ್ಯಕ್ಷ ತಸವರ ಸೌದಾಗರ, ಬಾ.ಜ.ಪ ಸಂಸದೀಯ ಕ್ಷೇತ್ರದ ವಕ್ತಾರ ರೋಶನ್ ನೇತ್ರಾವಳಿ, ನಗರ ಯೋಜನ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಎಸ್. ಪೂಜಾರ್, ನಗರಸಭೆ ಮಾಜಿ ಸದಸ್ಯ ಫೀರೋಜ್ ಪೀರ್ಜಾದೆ, ಮುಂತಾದವರು ಸಾಂಧರ್ಭಿಕವಾಗಿ ಮಾತನಾಡಿದರು.

ಸರ್ವಧರ್ಮಿಯ ಪ್ರಮುಖರು, ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.. ನಗರ ಠಾಣೆಯ ಪಿ.ಎಸ್.ಐ ಎಮ್.ಎಸ್. ಹೂಗಾರ ಸ್ವಾಗತಿಸಿ, ವಂದಿಸಿದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here