ಎಸ್.ಸಿ.ವಿ.ಟಿ.ಸಂಯೋಜನೆಗೆ ಅರ್ಜಿ ಆಹ್ವಾನ

0
12
loading...

ಕಾರವಾರ : ಸರ್ಕಾರಿ/ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಎಸ್.ಸಿ.ವಿ.ಟಿ. ಅಡಿಯಲ್ಲಿ ಹೊಸ ವೃತ್ತಿ/ ಘಟಕಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ.
ಶಿಶಿಕ್ಷು ತರಬೇತಿಗೆ ಅರ್ಹರಿರುವ 15 ವೃತ್ತ್ತಿಗಳನ್ನು ಅಥವಾ ಈ 15 ವೃತ್ತಿಗಳು ಸೇರಿದಂತೆ ಇಲಾಖೆಯು ರೂಪಿಸಿರುವ ಎಸ್‍ಸಿವಿಟಿ ಒಟ್ಟು 110 ವೃತ್ತಿಗಳನ್ನು ಅಥವಾ ಯಾವುದೇ ಸ್ಥಳೀಯ ಸಂಸ್ಥೆಯು ಪ್ರಾರಂಭಿಸಲು ಉದ್ದೇಶಿಸಿ ರೂಪಿಸಿ ಇಲಾಖೆಯಿಂದ ಅನುಮೋದನೆ ಪಡೆದಿರುವ ಯಾವುದೇ ವೃತ್ತಿಗಳನ್ನು ಪ್ರಾರಂಭಿಸಬಹುದು. ಆಸಕ್ತ ನೋಂದಾಯಿತ ಸಂಘ ಸಂಸ್ಥೆಗಳು ಅರ್ಜಿಗಳನ್ನು ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯದ ವೆಬ್‍ಸೈಟ್ www.emptrg.ksar.nic.in ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಪೂರ್ಣ ಮಾಹಿತಿಗಳೊಂದಿಗೆ ಅರ್ಜಿಗಳನ್ನು ಜನವರಿ 25 ರೊಳಗೆ ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ ಬೆಂಗಳೂರು ಇವರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು (ತರಬೇತಿ) ಉದ್ಯೋಗ ಮತ್ತು ತರಬೇತಿ ಇಲಾಖೆ ಬೆಳಗಾವಿ ವಿಭಾಗೀಯ ಕಚೇರಿ ನವನಗರ ಹುಬ್ಬಳ್ಳಿ ದೂರವಾಣಿ ಸಂ : 0836-2225342 ರವರನ್ನು ಸಂಪರ್ಕಿಸಲು ಕೋರಿದೆ.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here