ಕಳಸಾ ಬಂಡೂರಿ ನದಿ ನೀರಿನ ಹೋರಾಟದಲ್ಲಿ ಕಂಗೆಟ್ಟ ರೈತರು

0
30
loading...

12 NRD-1ನರಗುಂದ,12: ಮಹದಾಯಿ ಕಳಸಾ ಬಂಡೂರಿ ನದಿ ನೀರಿನ ವಿಷಯದಲ್ಲಿ ನಮ್ಮನ್ನಾಳಿದ ಸಚಿವರು, ಶಾಸಕರು, ಸಂಸದರು ಹಾಗೂ ಮುಖ್ಯಮಂತ್ರಿಗಳು,ಪ್ರಧಾನಿಗಳು ಇದುವರೆಗೆ  ನಿರ್ಲಕ್ಷ ಭಾವಣೆ ತಾಳಿದ್ದರಿಂದ ಮಹದಾಯಿ ನದಿ ನೀರಿನ ಜೋಡಣೆ ಈಗಲೂ  ಕಗ್ಗಂಟಾಗಿದೆ ಎಂದು ರಾಜ್ಯ ರೈತಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಇಂದಿಲ್ಲಿ ಸಿಡಿಮಿಡಿಗೊಂಡರು.
ಮಹದಾಯಿ ಮಲಪ್ರಭೆ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ರೈತರು ನಡೆಸಿದ ಶನಿವಾರದ ಧರಣಿ 150 ನೇ ದಿನ್ಕಕೆ ಕಾಲಿರಿಸಿದ್ದು ರೈತರು ನಡೆಸಿದ ರಾಸ್ತಾ ರೋಖೋ ಪ್ರತಿಭಟಣೆಯಲ್ಲಿ ಮಾತನಾಡಿದ ಅವರು, ರಾಜಕೀಯ ದುರೀಣರು ಮೊದಮೊದಲು ರೈತರ ಧರಣಿಯಲ್ಲಿ ಪಾಲ್ಗೊಂಡಂತೆ ಮಾಡಿ ಸಧ್ಯದ ಸ್ಥಿತಿಯಲ್ಲಿ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತಿದ್ದಾರೆ.

ಬೆಂಗಳೂರಿನಲ್ಲಿ ರೈತರು ಕಳೆದ 15 ದಿನಗಳ ಹಿಂದೆ ಮಹದಾಯಿ ನದಿ ಜೋಡಣೆಗೆ ಧರಣಿ ನಡೆಸಿ ಮಹದಾಯಿ ನದಿ ಜೋಡಣೆ ತಮ್ಮಿಂದಾಗದ್ದಿದ್ದರೆ ರಾಜೀನಾಮೆ ಕೊಡಿ ಎಂದು ಶಾಸಕರನ್ನು, ಸಂದರನ್ನು ,ಸಚಿವರನ್ನು ಆಗ್ರಹಿಸಿದರೆ ರಾಜ್ಯ ಸರ್ಕಾರ ಪೊಲೀಸರನ್ನು ಛೂ ಬಿಟ್ಟು ರೈತರ ಮೇಲೆ ಲಾಠಿ ಪ್ರಹಾರ ಮಾಡಿಸಿದ್ದರಿಂದ ರೈತರು ಕುಪಿತಗೊಂಡಿದ್ದಾರೆಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಮಹದಾಯಿ ನದಿ ಜೋಡಣೆಗೆ ಆಗ್ರಹಿಸಿ ದೆಹಲಿಯಲ್ಲಿ ರೈತರು ಧರಣಿ ನಡೆಸಲಿದ್ದಾರೆ. ಜು. 16 ರಿಂದ ಪ್ರಥಮವಾಗಿ  ಮಹದಾಯಿ ನದಿ ನೀರಿಗೆ ಆಗ್ರಹಿಸಿ ನರಗುಂದದಲ್ಲಿಯೇ ಆರಂಭಗೊಂಡ ಧರಣಿ ಸಧ್ಯದ ಸ್ಥಿತಿಯಲ್ಲಿ  ಈ ವಿಷಯ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುವಂತೆ ಮಾಡಿದೆ ಎಂದು ತಿಳಿಸಿದರು.
ಧಾರವಾಡ ಮನ್ಸೂರಮಠದ ಬಸವರಾಜ ದೇವರು ಮಾತನಾಡಿ,  ಮಹದಾಯಿ ನದಿ ನೀರಿನ ಕುರಿತು ನೀಡಿದ್ದ ಭರವಸೆ ಮರೆತು  ಆಯಾ ಪಕ್ಷದಿಂದ ವಿಧಾನಪರಿಷತ್ ಚುನಾವಣೆಗೆ  ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂದೆತೆಗೆದುಕೊಳ್ಳಿ ಎಂದು ನಿನ್ನೆ ಧಾರವಾಡ-ಹುಬ್ಬಳ್ಳಿಯಲ್ಲಿ  ನಡೆದ ಸಭೆಯಲ್ಲಿ ತಾವು ಮಾತನಾಡಿದರೆ, ಜನಪ್ರತಿನಿದಿಗಳು ಇದನ್ನು ಧಿಕ್ಕರಿಸಿ ನಮ್ಮ ಮೇಲೆ ದಬ್ಬಾಳಿಕೆ ನಡೆಸುವುದರ ಜೊತೆಗೆ ಪೊಲೀಸರಿಗೆ ಸಂದೇಶ ನೀಡಿ ನನ್ನನ್ನು ಬಂಧಿಸಿದ್ದರು. ಇದು ಪ್ರಜಾಪ್ರಭುತ್ವದ ಕಗ್ಗೋಲೆ. ಆಳುವ ಎಲ್ಲ ಸರ್ಕಾರಗಳು ರೈತರ ಹಿತಾಸಕ್ತಿಯನ್ನೇ ಮರೆತಿವೆ. ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ರಾಜಕೀಯ ಪಕ್ಷದ ನಾಯಕರನ್ನು  ರೈತರೆಲ್ಲ ಕೊಂಗವಾಡಕ್ಕೆ ಹಾಕುವ  ಗಟ್ಟಿ ನಿರ್ಧಾರ ತೆಗೆದುಕೊಳ್ಳಿ. ರೈತರ ಮನೆಗೆ ಮತ ಕೇಳಲು ಬಂದ ರಾಜಕೀಯ ಪ್ರತಿನಿಧಿಗಳನ್ನು ಬಂಧಿಸಬೇಕೆಂದು ಪೊಲೀಸರಲ್ಲಿ ದೂರು ನೀಡಿ ಎಂದು ಕೋಪ ವ್ಯಕ್ತಪಡಿಸಿದರು.
ರೈತ ಸೇನಾ ಕರ್ನಾಟಕ ರಾಜ್ಯ ಪ್ರ. ಕಾರ್ಯದರ್ಶಿ ಶಂಕರಪ್ಪ ಅಂಬಲಿ ಮಾತನಾಡಿ, ಸರ್ಕಾರಕ್ಕೆ ವಿವಿಧ ಮೂಲಗಳಿಂದ ಬರುವ ಆದಾಯದಲ್ಲಿ ಪ್ರತಿ ಶಾಸಕರು 1.75 ಲಕ್ಷರೂ ಮಾಸಿಕ ಸಂಬಳ ಪಡೆಯುತಿದ್ದಾರೆ. ಶಾಸಕರು ಸಂಸದರು ಆಯ್ಕೆಯಾದ ಮೇಲೆ ರೈತರ ಬೇಡಿಕೆಯನ್ನು ಸಾರಾಸಗಟಾಗಿ ತಳ್ಳಿ ಹಾಕುವುದರಿಂದ ವಿಧಾನ ಪರಿಷತ್ ಚುಣಾವಣೆ ಬಹಿಷ್ಕರಿಸಲು ಎಲ್ಲ ರೈತ ಮತದಾರರು ಮುಂದಾಗಬೇಕು. ಈಚೆಗೆ ದೇಹಲಿಗೆ ನಿಯೋಗ ಕೊಂಡೊಯ್ದಾಗ ಪ್ರಧಾನಿಗಳು ಸರಿಯಾಗಿ ಈ ಯೋಜನೆ ಕುರಿತು ಮಾತನಾಡಲಿಲ್ಲ. ಧರಣಿಯಲ್ಲಿ ಪಾಲ್ಗೊಂಡು ಅನೇಕ ಭರವಸೆಗಳನ್ನು ನೀರಿನ ಯೋಜನೆ ಬಗ್ಗೆ ರೈತರಿಗೆ ಭರವಸೆ ನೀಡಿದ್ದ ಪ್ರಲ್ಹಾದ ಜೋಶಿ ನಿಯೋಗದಲ್ಲಿ ಹೊದಾಗ ಪ್ರಧಾನಿಯವರ ಬಳಿ ಈ ಕುರಿತು ಚರ್ಚಿಸಲಿಲ್ಲ. ಪ್ರಧಾನಿ ನೀಡಿದ್ದ ಭೋಜನಕೂಟದಲ್ಲಿ ಜನಪ್ರತಿನಿಧಿಗಳು ಅಲ್ಲಿ ಪಾಲ್ಗೊಂಡರೆ ಹೊರತು ಮಹದಾಯಿ ಯೋಜನೆ ಕುರಿತು ವಿಸ್ತ್ರತ ಚರ್ಚೆನಡೆಸಲಿಲ್ಲವೆಂದು ತಿಳಿಸಿದರು.
ರಸ್ತೆ ಪ್ರತಿಭಟಣೆ ನಡೆದ ಸಂದರ್ಭದಲ್ಲಿ ರೈತ ಸಂಘದ ತಾಲೂಕ ಘಟಕದ ಅಧ್ಯಕ್ಷ ಬಸವರಾಜು ಸಾಬಳೆ, ಹಸಿರುಸೇನೆ ಮಹಿಳಾ ರಾಜ್ಯ ಘಟಕದ ಅಧ್ಯಕ್ಷೆ ನೀಲಮ್ಮ ಪಾಟೀಲ, ಬಿ.ಎಸ್. ಉಪ್ಪಾರ, ರಮೇಶ ನಾಯ್ಕರ್, ಮುದ್ದಣ್ಣ ನವಲಗುಂದ, ರಾಮನಗೌಡ ಪಾಟೀಲ, ಮಹೇಶ್ವರಯ್ಯ ಸುರೇಬಾನ, ಈರಬಸಪ್ಪ ಹೂಗಾರ, ಶ್ರೀಶೈಲ ಮೇಟಿ, ವಿಠಲ ಜಾಧವ, ಪರಪ್ಪ ಜಂಗವಾಡ, ವ್ಹಿ.ಕೆ. ಗುಡಿಸಾಗರ, ಶಿವಪ್ಪ ಕುರಹಟ್ಟಿ, ಎಸ್.ಬಿ. ಜೋಗಣ್ಣವರ ಮಾತನಾಡಿದರು.
ಲೀಲಕ್ಕ ಹಸಬಿ, ಬಸಮ್ಮ ಐಣಾಪೂರ, ಚಂದ್ರಗೌಡ ಪಾಟೀಲ, ಸಂಕಪ್ಪ ಕದಂ.ರಾಮು ಸಾಬಳೆ, ನಬಿಸಾಬ ಕಿಲ್ಲೇದಾರ, ಜಗದೀಶ ಕಾಂಬಳೆ, ಶಿವಾನಂದ ಹಳಕಟ್ಟಿ.  ವಿಠಲ ಶಿಂಧೆ, ಬಸರಾಜ ಸುಂಕದ, ರುದ್ರಯ್ಯ ಕುರವತ್ತಿಮಠ, ನಾಗೇಶ ಅಪ್ಪೋಜಿ. ಬಾಪೂಗೌಡ ಹಟ್ಟಿ, ವೆಂಕಪ್ಪ ಹುಜರತ್ತಿ, ಅನಸವ್ವ ಶಿಂಧೆ, ಹನುಮಂತ ಸರನಾಯ್ಕರ್, ಯಸೂಫ್ ಕೊಣ್ಣೂರ, ಮಹಂತೇಶ ನಂದಿ, ವೀರಣ್ಣ ಸೊಪ್ಪಿನ , ಅರ್ಜುನ ಮಾನೆ, ಬಸವರಾಜ ಪವಾರ, ರುದ್ರಗೌಡ ರಾಚನಗೌಡ್ರ,  ನಿಂಗಪ್ಪ ನಾರಾಯಣ,  ಭೀಮಪ್ಪ ಹೂಗಾರ, ಹನುಮಂತ ಭಜಂತ್ರಿ, ಕಾಡಪ್ಪ ಕಾಕನೂರ ಮುಂತಾದವರು ಉಪಸ್ಥಿತರಿದ್ದರು.
ರಾಸ್ತಾ ರೋಖೊ: ಮದಹಾಯಿ ನದಿ ನೀರಿನ ಬೇಡಿಕೆ ಮುಂದಿಟ್ಟು ರೈತರು ನಡೆಸಿದ ಧರಣಿ ಶನಿವಾರ 150 ನೇ ದಿನಕ್ಕೆ ಕಾಲಿರಿಸಿದ್ದ ಸಂದರ್ಭದಲ್ಲಿ ಮೂರು ತಾಸುಗಳ ಕಾಲ ರಾಸ್ತಾರೋಖೋ ಪ್ರತಿಭಟಣೆ ರೈತರು ನಡೆಸಿದರು. ಇದಕ್ಕೂ ಮುನ್ನ ಪುರಸಭೆ ಎದುರಿಗಿನ ಭಾಬಾ ಸಾಹೇಬ ಬಾವೆ ಅವರ ಪುತ್ಥಳಿಗೆ ಪಾಲಾರ್ಪಣೆ ಮಾಡಿ ರೈತರು ಮೆರವಣಿಗೆ ಮೂಲಕ ಬಸ್ ನಿಲ್ದಾಣ ಬಳಿಯಲ್ಲಿ ರಾಸ್ಟ್ರೀ ಹೆದ್ದಾರಿಯಲ್ಲಿ ರಾಸ್ತಾರೋಖೊ ನಡೆಸಿದರು. ರೈತರ ಪ್ರತಿಭಟಣೆಯಿಂದ ಸುಮಾರು ಮೂರು ತಾಸುಗಳ ಕಾಲ ರಸ್ತೆ ಸಂಚಾರ ತಟಸ್ಥಗೊಂಡಿದ್ದರಿಂದ ಬೇರೆ ಊರಿಗೆ ತೆರಳುವ ಪ್ರಯಾಣಿಕರು ತೊಂದರೆ ಅನುಭವಿಸಿದರು.

loading...

LEAVE A REPLY

Please enter your comment!
Please enter your name here