ಕಾಂಗ್ರೇಸ್ ಗೆಲುವಿಗೆ ಶ್ರಮಿಸುತ್ತೇನೆ : ಜಿ.ಶ್ರೀಧರ

0
21
loading...

05ಗಂಗಾವತಿ,14: ರಾಯಚೂರು, ಕೊಪ್ಪಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಇಟಗಿ ಬಸವರಾಜ ಅವರ ಗೆಲುವಿಗಾಗಿ ಮನಃ ಪೂರ್ವಕವಾಗಿ ಶ್ರಮಿಸುತ್ತೇನೆ ಎಂದು ಈ ಹಿಂದೆ ಟಿಕೆಟ್ ಅಕಾಂಕ್ಷಿಯಾಗಿದ್ದ ಟಿಕೆಟ್ ವಂಚಿತ ವಾಣಿಜ್ಯೋದ್ಯಮಿ ಜಿ.ಶ್ರೀಧರ ಅವರು ತಿಳಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೇಸ್ ಪಕ್ಷದಿಂದ ನಾನು ಕೂಡ ಟಿಕೆಟ್ ಅಕಾಂಕ್ಷಿಯಾಗಿದ್ದೆ, ಆದರೆ ಕಾಂಗ್ರೇಸ್ ಪಕ್ಷದ ಹೈಕಮಾಂಡ್‍ನ ಅದೇಶದ ಪ್ರಕಾರ ಇಟಗಿ ಬಸವರಾಜ ಅವರಿಗೆ ಟಿಕೆಟ್ ದೊರಕಿದೆ. ನಾನು ಒಬ್ಬ ಕಾಂಗ್ರೇಸ್ ಕಾರ್ಯಕರ್ತನಾದುದ್ದರಿಂದ ಹೈಕಮಾಂಡ್‍ನ ಈ ನಿರ್ಧಾರಕ್ಕೆ ತೆಲೆ ಬಾಗಿದ್ದೇನೆ.

ಇಟಗಿಯವರು ಈಗಾಲೆ ಒಂದು ಬಾರಿ ಶಾಸಕರಾಗಿ ಅಪಾರ ಅನುಭವ ಹೊಂದಿದ್ದಾರೆ ಅಲ್ಲದೆ ಕಳೆದ ಚುನಾವಣೆಯಲ್ಲಿ ಕೆಲವೆ ಮತಗಳ ಅಂತರದಲ್ಲಿ ಸೋತಿದ್ದಾರೆ ಕಾರಣ ಮತ್ತೊಮ್ಮೆ ಸ್ಪರ್ಧಿಸಲು ಅವರಿಗೆ ಅವಕಾಶ ದೊರೆತಿರುವುದು ನನಗೆ ಸಂತಸ ತಂದಿದೆ. ನಾನು ಹಾಗೂ ನನ್ನ ಎಲ್ಲ ಬೆಂಬಲಿಗರು ಕಾಂಗ್ರೇಸ್ ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತೇವೆ.

ಪ್ರತಿ ಹಳ್ಳಿಗಳಿಗೆ ಬೇಟಿಕೊಟ್ಟು ಇಟಗಿಯವರನ್ನು ಬೆಂಬಲಿಸಲು ಮತ ಯಾಚುತ್ತೇವೆ. ಕಾಂಗ್ರೇಸ್ ಅಭ್ಯರ್ಥಿ ಅತಿಹೆಚ್ಚು ಮತಗಳ ಅಂತರದಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಹಾಗೆಯೇ ಎರಡೂ ಜಿಲ್ಲೆಯ ಸರ್ವೋತೋಮುಖ ಅಭಿವೃದ್ಧಿಯ ದೃಷ್ಠಿಯಿಂದ ಸ್ಥಳೀಯ ಸಂಸ್ಥೆಗಳ ಎಲ್ಲ ಮತದಾರರು ಬಿ.ಜೆ.ಪಿ.ಯನ್ನು ಧಿಕ್ಕರಿಸಿ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಲು ವಿನಂತಿಸುತ್ತ ತಮ್ಮ ಪರ ಟಿಕೆಟ್‍ಗಾಗಿ ಪ್ರಯತ್ನಿಸಿದ ಎಲ್ಲ ಜನ ಪ್ರತಿನಿಧಿಗಳಿಗೆ ಜಿ.ಶ್ರೀಧರ ಕೃತಜ್ಞತೆ ಸಲ್ಲಿಸಿದ್ದಾರೆ.

loading...

LEAVE A REPLY

Please enter your comment!
Please enter your name here