ಕೋಮುವಾದಿ ಹಿತಾಸಕ್ತಿಗಳ ಮೇಲೆ ಕ್ರಮ ಜರುಗಿಸಿ: ಸಿಪಿಐಎಂಎಲ್ ಆಗ್ರಹ

0
27
loading...

03   ಗಂಗಾವತಿ,14: ಕಳೆದ ಒಂದೂವರೆ ವರ್ಷದಿಂದ ಕರ್ನಾಟಕ ರಾಜ್ಯದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ಕಾರ್ಮಿಕರ ಮೇಲೆ ಅನೇಕ ದೌರ್ಜನ್ಯಗಳು ನಡೆಯುತ್ತಾ ಬಂದಿವೆ, ದುಡಿಯುವ ಜನರು ಭಯಭೀತರಾಗಿ ಜೀವನ ಸಾಗಿಸುತ್ತಿದ್ದು, ಇದಕ್ಕೆ ಕಾರಣರಾದ ಕೆಲ ಕೋಮುವಾದಿ ಸಂಘಟನೆಗಳು, ಪಟ್ಟಭದ್ರ ಹಿತಾಸಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸಿಪಿಐಎಂಎಲ್ ಕಾರ್ಯಕರ್ತರು ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸುವುದರೊಂದಿಗೆ ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ದುಡಿಯುವ ಜನರ ಆಹಾರ ಹಕ್ಕಿನ ಮೇಲೆ ಮನುವಾದಿಗಳ ದಾಳಿ, ದಲಿತರ ಬಹಿಷ್ಕಾರಗಳು, ಅಲ್ಪಸಂಖ್ಯಾತರ ಆಸ್ತಿ ಹಾನಿ ಎಗ್ಗಿಲ್ಲದೇ ರಾಜ್ಯದಲ್ಲಿ ನಡೆಯುತ್ತಿವೆ. ಕೆಲವು ಕೋಮುವಾದಿ ಸಂಘನೆಗಳು ವಿನಾಃಕಾರಣ ಹೇಳಿಕೆಗಳನ್ನು ನೀಡುತ್ತಾ ಕಾರ್ಮಿಕರನ್ನು, ದಲಿತರನ್ನು, ಅಲ್ಪಸಂಖ್ಯಾತರನ್ನು ಭಯಭೀತಗೊಳಿಸುತ್ತಿವೆ. ಇಂತಹ ಮೂಲಭೂತವಾದಿ ಸಂಘಟನೆಗಳ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ನಿಯಂತ್ರಣ ಇಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಅಸಹಿಷ್ಣುತೆ ತಡೆಯಲು ಒಂದು ಕಾನೂನನ್ನು ರೂಪಿಸಲು ರಾಜ್ಯಸರಕಾರಕ್ಕೆ ಸಲಹೆ ಕೊಡಬೇಕು.

ಜನರ ನೆಮ್ಮದಿ ಹಾಳು ಮಾಡುವ ಪಟ್ಟಭದ್ರ ಹಿತಾಸಕ್ತಿಗಳನ್ನು ಗುರುತಿಸಿ ಅವರ ಮೇಲೆ ಕ್ರಮ ಜರುಗಿಸಲು ರಾಜ್ಯ ಸರಕಾರಕ್ಕೆ ಆದೇಶಿಸಬೇಕು. ದಲಿತರ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಮುಖ್ಯ ಆಹಾರವಾದ ಪಶು ಮಾಂಸದ ಮೇಲೆ ನಿಷೇಧ ಹೇರಬಾರದು. ಡಾ|| ಎಂ.ಎಂ. ಕಲ್ಬುರ್ಗಿ ಇವರ ಹಂತಕರನ್ನು ಕೂಡಲೇ ಬಂಧಿಸಬೇಕು.

ಅಸಹಿಷ್ಣುತೆ ತಡೆಗಟ್ಟಲು ಒಂದು ಕಾನೂನನ್ನು ರೂಪಿಸಬೇಕು. ಲಿಬರಾನ್ ವರದಿ ಜಾರಿಗೊಳಿಸಬೇಕು ಮತ್ತು ವರದಿಯಲ್ಲಿ ಗುರುತಿಸಿದ ಅಪರಾಧಿಗಳನ್ನು ಕೂಡಲೇ ಬಂಧಿಸಬೇಕೆಂದು ಕೇಂದ್ರ ಸರಕಾರಕ್ಕೆ ಒತ್ತಾಯಿಸಬೇಕು. ರಾಜ್ಯದಲ್ಲಿ ಎಗ್ಗಿಲ್ಲದೇ ಸಾಗುತ್ತಿರುವ ದಲಿತರ ಬಹಿಷ್ಕಾರಗಳು ಕೂಡಲೇ ನಿಲ್ಲಿಸಬೇಕು. ಕೋಮುವಾದಿ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಿಪಿಐಎಂಎಲ್ ಜೆ. ಭಾರದ್ವಾಜ್, ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಪ್ಪ, ಎಂ. ಏಸಪ್ಪ, ಕೆಂಚಪ್ಪ, ಬಸನಗೌಡ ಸುಳೆಕಲ್, ಪೌರ ಕಾರ್ಮಿಕ ಸಂಘ ಅಧ್ಯಕ್ಷ ಪರಶುರಾಮ, ಸುಂದರರಾಜ್, ಹುಸೇನ್ ಸೇರಿದಂತೆ ಹಲವಾರು ಜನರಿದ್ದರು.

loading...

LEAVE A REPLY

Please enter your comment!
Please enter your name here