ಕೋಮು ಗಲಬೆ ಸೃಷ್ಟಿಸದಂತೆ ಮನವಿ ಸಲ್ಲಿಕೆ

0
22
loading...

ಶಿರಸಿ,3: ಸಮಾಜದ ಯಾವುದೇ ಕೋಮಿನವರು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಪ್ರಚೋದನಕಾರಿ ಕೃತ್ಯ ನಡೆಸುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕೋಮು ಗಲಬೆ ಸೃಷ್ಟಿಸದಂತೆ ಎಲ್ಲ ಸಮುದಾಯದ ಪ್ರಮುಖರು ಯುವಕರಿಗೆ ಬುದ್ದಿವಾದ ಹೇಳಬೇಕು ಎಂದು ಒತ್ತಾಯಿಸಿ ಮುಸ್ಲಿಂ ಸಂಘಟನೆ ಪ್ರಮುಖರು ಶಿರಸಿ ಉಪವಿಭಾಗಾಧಿಕಾರಿಗೆ ಮನವಿ ನೀಡಿದರು.

ಶಿರಸಿ ಉಪವಿಭಾಗಾಧಿಕಾರಿ ನಾಗೇಂದ್ರ ಹೊನ್ನಳ್ಳಿ ಅವರಿಗೆ ಮನವಿ ನೀಡಿದ ಮುಸ್ಲಿಂ ಪ್ರಮುಖರು, ಶಿರಸಿಯು ರಾಜ್ಯದಲ್ಲೇ ಕೋಮು ಸೌಹಾರ್ದತೆಗೆ ಮಾದರಿ ತಾಲೂಕಾಗಿದೆ. ಇಲ್ಲಿ ಎಲ್ಲ ಧರ್ಮೀಯರೂ ಅನ್ಯೋನ್ಯವಾಗಿ ಸಹಬಾಳ್ವೆ ಮಾಡುತ್ತಿದ್ದಾರೆ. ಹೀಗಿರುವಾಗ ಕೆಲ ಸಂಘಟನೆಗಳು ಕೋಮು ಸೌಹಾರ್ದತೆಗೆ ಮಸಿ ಬಳಿಯುವ ಕಾರ್ಯ ಮಾಡುತ್ತಿದ್ದರೆ. ಈ ಬೆಳವಣಿಗೆ ಖಂಡನಾರ್ಹ ಎಂದರು. ಸಮಾಜದಲ್ಲಿ ಶಾಂತಿ ನೆಲೆಸಲು ಪ್ರತಿಯೊಬ್ಬರೂ ಪಣ ತೊಡಬೇಕು.

ಅದಕ್ಕಾಗಿ ವಿವಿಧ ಸಂಘಟನೆಗಳ ಹೆಸರಿನಲ್ಲಿ ನಡೆಸುವ ನೈತಿಕ ಪೊಲೀಸ್‍ಗಿರಿಯನ್ನು ಸಂಪೂರ್ಣ ಹತ್ತಿಕ್ಕಬೇಕು. ಜಾನುವಾರು ಸಾಗಣೆಗೆ ಕಾನೂನಿನಡಿಯಲ್ಲಿರುವ ನೀತಿ-ನಿಯಮಗಳನನು ಪೊಲೀಸರು ಸಾರ್ವಜನಿಕವಾಗಿ ಪ್ರಕಟಿಸಬೇಕು ಮತ್ತು ವ್ಯಾಪಾರಸ್ಥರಿಗೆ ಈ ಕುರಿತು ಅಗತ್ಯ ಮಾಹಿತಿ ನೀಡಬೇಕು. ಯಾವುದೇ ಕೋಮಿನವರು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಪ್ರಚೋದನಕಾರಿ ಕೃತ್ಯ ನಡೆಸುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸಂಘಟನೆಗಳ ಕಾರ್ಯಕರ್ತರು ಕಾನೂನನ್ನು ಕೈಗೆತ್ತಿಕೊಳ್ಳದಂತೆ ಮತ್ತು ಕೋಮು ಸಾಮರಸ್ಯಕೆ ಧಕ್ಕೆ ತರದಂತೆ ಆಯಾ ಸಮಾಜದ ಪ್ರಮುಖರು ಬುದ್ದಿಮಾತು ಹೇಳಬೇಕು.

ಕೇವಲ ಜಾನುವಾರು ಸಾಗಾಟ ಮಾಡುವುದು ಅಪರಾಧವೆಂಬ ತಪ್ಪು ತಿಳಿವಳಿಕೆಯನ್ನು ಕೋಮುವಾದಿಗಳ ಮನದಿಂದ ದೂರ ಮಾಡಬೇಕು. ತಾಲೂಕಿನ ಎಲ್ಲ ಸಮುದಾಯಗಳ ಹಿರಿಯರು, ಪ್ರಮುಖರು, ಬುದ್ದಿಜೀವಿಗಳ ಕರೆಸಿ ಶಾಂತಿ ಸಭೆ ನಡೆಸಬೇಕು. ಅಶಾಂತಿ ಮತ್ತು ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಯಾವುದೇ ಕೋಮಿನವರಾದರೂ ಕಾನೂನು ಕ್ರಮ ಜರುಗಿಸಬೇಕು ಎಂದು ಈ ವೇಳೆ ಮುಸ್ಲಿಂ ಪ್ರಮುಖರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅಹಲೆ ಸುನ್ನಾತುಲ್ ಜಮಾತ ಅಧ್ಯಕ್ಷ ಇಕ್ಬಾಲ್ ಬಿಳಗಿ, ಅಹಲೆ ಹದೀಸ್ ಜಮಾತ ಅಧ್ಯಕ್ಷ ಅಬುಜರ ಇಸಾಕ್ ಹೆಗಡೆಕಟ್ಟಾ, ಪ್ರಮುಖರಾದ ಇಸ್ಮಾಯಿಲ ಜುಕಾಕೋ, ಖಾದರ್ ಆನವಟ್ಟಿ, ಮುಜೀಬ್ ಸೈಯ್ಯದ್, ಪರವೇಜ್ ಖಾನ್, ಅಬ್ದುಲ್ ಸತ್ತಾರ್, ಮಹಮ್ಮದ್ ರಫೀಕ್, ಅಬ್ದುಲ್ ಖರೀಮ್, ಅಬ್ದುಲ್ ಖಾನ್, ಅಮಾನುಲ್ಲಾ ಖಾನ್ ಹಾಗೂ ಇತರರು ಇದ್ದರು.

loading...

LEAVE A REPLY

Please enter your comment!
Please enter your name here