ಗುಡಿಸಲು ತೆರವಿಗೆ ನೋಟಿಸ್ : ಮೀನುಗಾರರಿಂದ ಜಿಲ್ಲಾಧಿಕಾರಿಗೆ ಮನವಿ

0
18
loading...


ಕಾರವಾರ : ಹೊನ್ನಾವರ ತಾಲೂಕಿನ ಶರಾವತಿ ಅಳಿವೆ ಪ್ರದೇಶದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬಂದರು ಅಭಿವೃದ್ಧಿಗೆ ಚಾಲನೆ ದೊರಕಿದ್ದು, ಅದಕ್ಕೆ ಸ್ಥಳೀಯ ಕೆಲ ಮೀನುಗಾರರಿಂದ ವಿರೋಧ ವ್ಯಕ್ತವಾಗಿದ್ದು ಈ ಬಗ್ಗೆ ಜಿಲ್ಲಾಧಿಕಾರಿ ಉಜ್ವಲ್‍ಕುಮಾರ್ ಘೋಷ್ ಅವರಿಗೆ ಮನವಿ ಸಲ್ಲಿಸಿ ಆಕ್ಷೇಪ ವ್ಯಕ್ತಪಡಿದ್ದಾರೆ.
ಬಂದರು ಅಭಿವೃದ್ಧಿ ನೆಪದಲ್ಲಿ 30 ಮನೆ ತೆರವಿಗೆ ನೋಟಿಸ್:ಬಂದರು ಅಭಿವೃದ್ಧಿಯ ಸಲುವಾಗಿ ಕಾಸರಕೋಡ ಟೊಂಕಾದ ಸರ್ವೇ ನಂಬರ್ 305 ರಲ್ಲಿ ಇರುವ 26 ಮೀನುಗಾರರ ಪಕ್ಕಾ ಗುಡಿಸಲು ಹಾಗೂ 4 ಕಚ್ಚಾ ಗುಡಿಸಲು ತೆರವಿಗೆ ಬಂದರು ಇಲಾಖೆ ನೋಟಿಸ್ ಜಾರಿ ಮಾಡಿದೆ. ಇದಕ್ಕೆ ಮೀನುಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ತಲೆ, ತಲಾಂತರಗಳಿಂದ ನಾವು ಇಲ್ಲಿ ಮೀನುಗಾರಿಕೆ ಮಾಡಿಕೊಂಡು ವಾಸವಿz್ದÉೀವೆ. ಸಾಂಪ್ರದಾಯಿಕವಾಗಿ ಮೀನು ಒಣಗಿಸುವ ಕಾರ್ಯ ಮಾಡುತ್ತಿz್ದÉೀವೆ. ಸಾವಿರಕ್ಕೂ ಅಧಿಕ ಜನರು ಈ ಜಾಗ ನಂಬಿ ಉದ್ಯೋಗ ಹೊಂದಿದ್ದಾರೆ. ಈಗ ಮನೆಗಳನ್ನು ತೆರವು ಮಾಡಿದಲ್ಲಿ ಹಲವು ಮೀನುಗಾರರ ಕುಟುಂಬಗಳು ಉದ್ಯೋಗ ವಂಚಿತವಾಗಲಿವೆ ಎಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.
ಹೈದ್ರಾಬಾದ್ ಮೂಲದ ಹೊನ್ನಾವರ ಪೆÇೀರ್ಟ್ ಪ್ರೈ.ಲಿ ಎಂಬ ಕಂಪನಿಗೆ 2010 ರಿಂದ 30 ವರ್ಷಕ್ಕೆ ಕಾಳಿ ಅಳಿವೆಯ ಎರಡೂ ಪಕ್ಕಗಳ 1 ಲಕ್ಷ 37 ಸಾವಿರ ಚದರ ಮೀಟರ್ ಭೂಮಿಯನ್ನು ಲೀಸ್ ನೀಡಲಾಗಿದೆ. ಅಲ್ಲದೇ ಮುಂದೆ ಬಂದರು ಅಭಿವೃದ್ಧಿಗಾಗಿ 8 ಲಕ್ಷ ಚದರ ಮೀಟರ್ ಭೂಮಿಯನ್ನು ಮುಂದಿನ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಕಾಸರಕೋಡು ಟೊಂಕ ಭಾಗದಲ್ಲಿ 2 ಅಲೆ ತಡೆಗೋಡೆ ನಿರ್ಮಾಣ, 7 ರಿಂದ 8 ಮೀಟರ್ ಆಳವಾಗುವಷ್ಟು ಹೂಳೆತ್ತುವುದು. 220 ಮೀ. ಉದ್ದದ ಎರಡು ಜಟ್ಟಿಗಳ ನಿರ್ಮಾಣ ಈ ಯೋಜನೆಯಲ್ಲಿ ಸೇರಿದೆ. ಕಂಪನಿ 300 ಕೋಟಿ ರೂ. ಯೋಜನೆ ರೂಪಿಸಿ. ವಿಸ್ತ್ರತ ವರದಿ ತಯಾರಿಸಿದೆ. ಕೇಂದ್ರ ಪರಿಸರ ಮಂತ್ರಾಲಯ, ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿ ಹಲವು ಇಲಾಖೆಗಳ ಅನುಮತಿ ಈಗಾಗಲೇ ದೊರೆತಿದ್ದು, ಕಾಸರಕೋಡ ಗ್ರಾಮ ಪಂಚಾಯತ್ ಅನುಮತಿ ದೊರೆಯುವುದು ಬಾಕಿ ಇದೆ.
ಈ ಸಂದರ್ಭದಲ್ಲಿ ಟೊಂಕಾದ ಪಾಂಡುರಂಗ ಶೇಷಗಿರಿ ತಾಂಡೇಲ, ಪರಿಸರ ಹೋರಾಟಗಾರ ಎಂ.ಆರ್.ಹೆಗಡೆ ನೇತೃತ್ವದಲ್ಲಿ ಮೀನುಗಾರರು ಮನವಿ ಸಲ್ಲಿವ ವೇಳೆಯಲ್ಲಿ ಇದ್ದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here