ಗುಡ್ಡದಲ್ಲಿ ಗ್ರಾಮಸ್ಥರ ಪ್ರತಿಭಟನೆ

0
21
loading...

8KMT6ಕುಮಟಾ, 8: ಪಟ್ಟಣದ ತ್ಯಾಜ್ಯವನ್ನು ಪುರಸಭೆಯವರು ಮೂರೂರು ಗುಡ್ಡದಲ್ಲಿ ಅವೈಜ್ಞಾನಿಕವಾಗಿ ರಾಶಿ ಹಾಕುತ್ತಿರುವುದನ್ನು ಖಂಡಿಸಿ ಮೂರೂರು ಗಾ.ಪಂ. ಅಧ್ಯಕ್ಷೆ ಕಲ್ಪನಾ ಗೌಡ ನೇತೃತ್ವದಲ್ಲಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿ ಪುರಸಭೆ ವಿರುದ್ಧ ಘೋಷಣೆ ಕೂಗಿ, ಪುರಸಭೆಯ ಅಸಮರ್ಪಕ ಕಾರ್ಯವೈಖರಿಯ ವಿರುದ್ಧ ಆಕ್ರೋಶ ವ್ಯಕ್ತಪಡೆಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥ ಜಿ ಐ ಹೆಗಡೆ ಮಾತನಾಡಿ, ಪಟ್ಟಣದ ತ್ಯಾಜ್ಯಗಳನ್ನು ಸಂಗ್ರಹಿಸಿ ಸಮರ್ಪಕವಾಗಿ ವಿಲೇವಾರಿ ಮಾಡುವುದು ಪುರಸಭೆಯ ಜವಾಬ್ದಾರಿಯಾಗಿದೆ. ಪುರಸಭೆ ನಿರ್ಲಕ್ಷ್ಯದಿಂದ ತ್ಯಾಜ್ಯಗಳನ್ನು ಮೂರೂರು ಗುಡ್ಡದಲ್ಲಿ ಅವೈಜ್ಞಾನಿಕವಾಗಿ ರಾಶಿ ಹಾಕಿರುವುದರಿಂದ ಸುತ್ತಲಿನ ಪರಿಸರ ಗಬ್ಬು ನಾರುತ್ತಿದೆ.

ಗುಡ್ಡದಲ್ಲಿ ಬೀಸುವ ಗಾಳಿಗೆ ಪ್ಲಾಸ್ಟಿಕ್ ತ್ಯಾಜ್ಯಗಳೆಲ್ಲ ಗುಡ್ಡಗಳಲ್ಲಿ ಹಾಗೂ ಸುತ್ತ ಮುತ್ತಲಿನಿಲ್ಲಿ ಆವರಿಸಿಕೊಂಡಿದಲ್ಲದೇ ಸಮೀಪದ ಜನವಸತಿ ಪ್ರದೇಶಗಳಿಗೆ ಬಿಳುವುದರಿಂದ ಆ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ ಎಂದು ಅಸಮದಾನ ವ್ಯಕ್ತಪಡಿಸಿದರು.

ಮೂರೂರು ಗುಡ್ಡ ಸಂರಕ್ಷಣಾ ಸಮಿತಿಯ ಸದಸ್ಯ ರಾಘವೇಂದ್ರ ರಾಹುತ್ ಮಾತನಾಡಿ, ಕೊಳೆತ ಕಸದಿಂದ ಬರುವ ದುರ್ವಾಸನೆ ಉಂಟಾಗಿದಲ್ಲದೇ ಜಾನುವಾರಗಳು ಈ ತ್ಯಾಜ್ಯಗಳನ್ನು ತಿಂದು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಆ ಭಾಗದ ಜನರು ನಿತ್ಯ ನರಕ ಯಾತನೆ ಅನುಭವಿಸುವ ಪರಸ್ಥಿತಿ ಉಂಟಾಗಿದೆ. ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಹಾಗೂ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪುರಸಭೆ ಅಧಿಕಾರಿಗಳಿಗೆ ಅನೇಕ ಬಾರಿ ಮೂರೂರು-ಕಲ್ಲಬ್ಬೆ ಗ್ರಾಮಸ್ಥರು ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಪುರಸಭೆ ಅಸಮರ್ಪಕ ತ್ಯಾಜ್ಯ ವಿಲೇವಾರಿ ಮಾಡುವುದು ಈ ವರ್ಷವೆ ಕೊನೆಯಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಮೂರೂರು ಗ್ರಾ ಪಂ ಉಪಾಧ್ಯಕ್ಷ ರವಿ ಗೌಡ ಹಟ್ಟಿಕೇರಿ, ಕಲ್ಲಬ್ಬೆ ಗ್ರಾ ಪಂ ಸದಸ್ಯ ರಾಮಾ ನಾಯ್ಕ, ಪ್ರಮುಖರಾದ ಬಾಲು ನಾಯ್ಕ, ವಸಂತ ಶೆಟ್ಟಿ, ವಿನಾಯಕ ನಾಯ್ಕ, ವಾಸು ಉಪ್ಪಾರ, ದಿಗಂಬರ ನಾಯ್ಕ, ಆರ್ ವಿ ಹೆಗಡೆ, ಮಹಾಬಲೇಶ್ವರ ನಾಯ್ಕ ಹಾಗೂ ಮೂರೂರು-ಕಲ್ಲಬ್ಬೆಯ ಊರನಾಗರಿಕರು ಉಪಸ್ಥಿರಿದ್ದರು.

loading...

LEAVE A REPLY

Please enter your comment!
Please enter your name here